Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಂಚನೆಗಳ ಮೂಲಕ ಜನರನ್ನು ಕಳ್ಳಸಾಗಣೆಗೆ ಗುರಿಪಡಿಸುವ ಹೊಸ ಜಾಲಗಳ ವಿರುದ್ಧ ಜಾಗೃತಿ ಮೂಡಿಸಬೇಕು: ಉಷಾರಾಣಿ


ಮೈಸೂರು: ಮಾನವ ಅಕ್ರಮ ಸಾಗಣೆಯು ವ್ಯಕ್ತಿಯ ಘನತೆ, ದೈಹಿಕ ಸ್ವಾಸ್ಥ÷್ಯ ಹಾಗೂ ವೈಯಕ್ತಿಕ ಸ್ವಾತಂತ್ರ÷್ಯದ ಮೇಲಿನ ಗಂಭೀರ ಆಕ್ರಮಣವಾಗಿದೆ ಎಂದು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಉಷಾರಾಣಿ ಹೇಳಿದರು.
ಗುರುವಾರ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಹಾಗೂ ಉದಯ ಹೆಜ್ಜೆ ವಿಮೋಚಿತ ಜೀತ ಕಾರ್ಮಿಕರ ಒಕ್ಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುದ ಅವರು,
ಸಂತ್ರಸ್ತರ ಪುನರ್ವಸತಿಯು ಕೇವಲ ಸರ್ಕಾರದ ನೀತಿಗೆ ಸಂಬAಧಿಸಿದ ವಿಷಯವಲ್ಲ, ಬದಲಾಗಿ ಅದು ಭಾರತೀಯ ಸಂವಿಧಾನದ 21ನೇ ವಿಧಿಯಡಿ ಘನತೆಯುಳ್ಳ ಜೀವನದ ಹಕ್ಕಿನ ಅವಿಭಾಜ್ಯ ಅಂಗವಾಗಿದೆ, ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ಜೀವಿಸುವ ಹಕ್ಕನ್ನು’ ಹೊಂದಿದ್ದಾನೆ ಎಂದು ತಿಳಿಸಿದರು.
ವಿಶ್ವಸಂಸ್ಥೆಯು 2013 ರಿಂದ ಜುಲೈ 30ನ್ನು ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನವೆಂದು ಆಚರಿಸುತ್ತಿದ್ದು, ಇದು ಕೇವಲ ಆಚರಣೆಯಲ್ಲ, ಆತ್ಮಾವಲೋಕನ ಹಾಗೂ ಸಮಾಜವನ್ನು ಎಚ್ಚರಿಸುವ ದಿನವಾಗಿದೆ. ಪ್ರಸಕ್ತ ವರ್ಷದ ಧೇಯವಾಕ್ಯ” ಟ್ರಾ÷್ಯಪ್ಡ್ ಬಿಹೈಂಡ್ ದಿ ಸ್ಕಾ÷್ಯಮ್” ಎಂಬ ಉದ್ದೇಶದೊಂದಿಗೆ ಆನ್‌ಲೈನ್ ಸೈಬರ್ ಅಪರಾಧಗಳು ಹಾಗೂ ವಂಚನೆಗಳ ಮೂಲಕ ಜನರನ್ನು ಕಳ್ಳಸಾಗಣೆಗೆ ಗುರಿಪಡಿಸುವ ಹೊಸ ಜಾಲಗಳ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಮಾನವ ಕಳ್ಳಸಾಗಣೆಯಿಂದ ಬದುಕುಳಿದವರ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಸಕಾರಾತ್ಮಕ ಬಾಧ್ಯತೆಯಾಗಿದೆ. ಮಾನವ ಅಕ್ರಮ ಸಾಗಣೆ ತಡೆಯುವುದು ಕೇವಲ ಪೊಲೀಸ್ ಅಥವಾ ಸರ್ಕಾರದ ಕೆಲಸವಲ್ಲ. ಅಪರಿಚಿತರ ಬಗ್ಗೆ ಅನುಮಾನ ಬಂದಲ್ಲಿ ತಕ್ಷಣವೇ ಪೋಷಕರು, ಶಿಕ್ಷಕರು ಅಥವಾ ಅಧಿಕಾರಿಗಳಿಗೆ ತಿಳಿಸುವಂತೆ ಮಕ್ಕಳಿಗೆ ಜಾಗೃತಿ ಮೂಡಿಸುವುದು ಸಮಾಜದ ಕರ್ತವ್ಯ ಎಂದರು.
ಬಡತನ, ನಿರುದ್ಯೋಗ, ದುರಭ್ಯಾಸಗಳು, ಆನ್‌ಲೈನ್ ಮೋಸಗಳು, ಸಿನಿಮಾದಲ್ಲಿ ಅವಕಾಶ ಮತ್ತು ವಿದೇಶಿ ಕೆಲಸದಂತಹ ಸುಳ್ಳು ಭರವಸೆಗಳಿಂದ ಜನರು ಈ ಜಾಲಕ್ಕೆ ಬೀಳುತ್ತಿದ್ದಾರೆ. ಶೇಕಡಾ 60ಕ್ಕಿಂತ ಹೆಚ್ಚು ಸಂತ್ರಸ್ತರು ಮಹಿಳೆಯರು ಮತ್ತು 18 ವರ್ಷದೊಳಗಿನ ಮಕ್ಕಳಾಗಿದ್ದಾರೆ ಎಂದು ಹೇಳಿದರು.
ಅಪರಾಧಿಗಳಿಗೆ 10 ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸುವ ಕಾನೂನುಗಳಿದ್ದು, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 143, ಬಾಲಕಾರ್ಮಿಕ ಕಾಯ್ದೆ ಹಾಗೂ ಸುಪ್ರೀಂ ಕೋರ್ಟ್ನ ಮೇನಕಾ ಗಾಂಧಿ, ವಿಶಾಖ ಮತ್ತು ಪ್ರಜ್ವಲ ಪ್ರಕರಣದ ಪ್ರಮುಖ ತೀರ್ಪುಗಳು ಸಂವಿಧಾನಬದ್ಧ ಜೀವಿಸುವ ಹಕ್ಕನ್ನು ಎತ್ತಿಹಿಡಿದಿವೆ.
ಕೇವಲ ಸರಕಾರ ಮತ್ತು ಇಲಾಖೆಗಳು ಮಾತ್ರವಲ್ಲದೆ ಪ್ರತಿಯೊಬ್ಬ ನಾಗರಿಕನು ಜಾಗೃತರಾಗಿ ಸಮಾಜದ ಮುಗ್ಧರನ್ನು ಮತ್ತು ಮಕ್ಕಳನ್ನು ರಕ್ಷಿಸಲು ಕೈಜೋಡಿಸಬೇಕೆಂದು ಹೇಳಿದರು.
ವಿಕಾಸ ಸಂಸ್ಥೆಯ ಅಧ್ಯಕ್ಷ ವರ್ಗಿಸ್ ಕ್ಲೀಟಸ್ ಮಾತನಾಡಿ, ಜೀತಪದ್ಧತಿಯು ಕೇವಲ ಸರಪಳಿಯಿಂದ ಬಂಧಿಸುವುದಷ್ಟೇ ಅಲ್ಲ ಇಂದು ಬಿಹಾರ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಿಂದ ಕೆಲಸ ಹುಡುಕಿಕೊಂಡು ಬರುವ ಬಡ ಕಾರ್ಮಿಕರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ಶೋಷಿಸಲಾಗುತ್ತಿದೆ. ಮೈಸೂರು, ಚಿಕ್ಕಮಗಳೂರು, ಮಂಡ್ಯ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕಾಫಿ ತೋಟಗಳು, ಕ್ವಾರಿಗಳು, ಕಬ್ಬು ಕಡಿಯುವ ಕ್ಷೇತ್ರಗಳು ಮತ್ತು ಶೂಟಿಂಗ್ ತೋಟಗಳಲ್ಲಿ ಇಂತಹ ಶೋಷಣೆಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದರು.
1976ರ ಜೀತಪದ್ಧತಿ ರದ್ದತಿ ಕಾಯ್ದೆಯಡಿ ಸಂತ್ರಸ್ತರನ್ನು ಬಿಡುಗಡೆಗೊಳಿಸಲು ಕಂದಾಯ, ಕಾರ್ಮಿಕ ಹಾಗೂ ಸಮಾಜ ಕಲ್ಯಾಣ ಸೇರಿದಂತೆ ಸುಮಾರು 23 ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಎಫ್‌ಐಆರ್ ದಾಖಲಿಸುವಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸಿ, ಬಿಡುಗಡೆಯಾದ ತಕ್ಷಣ ನೀಡಬೇಕಾದ 30,000 ಪುನರ್ವಸತಿ ನೆರವನ್ನು ತಲುಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜು ಆರ್, ಹಿರಿಯ ಸಿವಿಲ್ ನ್ಯಾಯಾಧೀಶ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ವಕೀಲರ ಸಂಘದ ಅಧ್ಯಕ್ಷ ಲೋಕೇಶ ಎಸ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರವಿಚಂದ್ರ, ರಾಜೇಂದ್ರ, ಪ್ರೆöÊಸಿ, ವಿಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು