Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಸರಾ ಗಜಪಡೆಗಳಿಗೆ ಭಾರ ಹೊರುವ ತಾಲಿಮು*ಗಂಡು ಆನೆಗಳಿಗೆ ಹಂತ, ಹಂತವಾಗಿ ತೂಕ ಹೆಚ್ಚಳ

ಮೈಸೂರು; ಈ ಬಾರಿ ಅದ್ಧೂರಿಯಾಗಿ ಜರುಗಲಿರುವ ವಿಶ್ವಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲೆಂದು ಕಾಡಿನ ವಿವಿಧ ಶಿಬಿರಗಳಿಂದ ಅರಮನೆ ನಗರಿ ಮೈಸ್ರರಿಗೆ ಬಂದಿರುವ ಗಜಪಡೆಗೆ ಇದೀಗ ಭಾರ ಹೊರೆಸುವ ತಾಲೀಮು ಆರಂಭಿಸಲಾಗಿದೆ.ಗಜಪಯಣದ ಮೂಲಕ ಮೈಸೂರಿಗೆ ಬಂದಿರುವ ಮೊದಲ ಹಂತದ ಗಜಪಡೆಗೆ ನಿತ್ಯವೂ ಎರಡು ಹೊತ್ತು ಅರಮನೆಯಿಂದ ಬನ್ನಿಮಂಟಪದ ತನಕ ತಾಲೀಮು ನಡೆಸಲಾಗುತ್ತಿತ್ತು. ನಾಗರೀಕ ಜೀವನಕ್ಕೆ ಆನೆಗಳು ಹೊಂದಿಕೊಳ್ಳುತ್ತಿದ್ದು, ಎಷ್ಟೇ ಜನರು ಎದುರಿಗೆ ಬಂದರೂ, ಹೋದರೂ ನಿಂತಿದ್ದರೂ ಆನೆಗಳು ಕೊಂಚವೂ ಗಲಿಬಿಲಿಗೊಳ್ಳದೆ ನಿತ್ಯವೂ ತಾಲೀಮು ನಡೆಸುತ್ತಿವೆ….

Read More

ಮೊಬೈಲ್ ನ ಮಿತಿಮೀರಿದ ಬಳಕೆ ‘ಸಾಮಾಜಿಕ ಕಾಯಿಲೆ’ಯಾಗಿದೆ; ಜಿ.ಆರ್. ರಾಜೇಶ್ ನಾಯಕ

ಮೈಸೂರು : ಮೊಬೈಲ್ ನ ಮಿತಿಮೀರಿದ ಬಳಕೆ ‘ಸಾಮಾಜಿಕ ಕಾಯಿಲೆ’ಯಾಗಿದೆ ಎಂದು ರಾಧೇ ಪುಸ್ತಕ ಸಂಗ್ರಹ ಮಂದಿರದ ಸಂಸ್ಥಾಪಕ ಜಿ.ಆರ್. ರಾಜೇಶ್ ನಾಯಕ ಹೇಳಿದರು.ಆತ್ಮಶ್ರೀ ಕನ್ನಡ ಸಾಂಸ್ಕöÈತಿಕ ಪ್ರತಿಷ್ಠಾನದ ವತಿಯಿಂದ ನಗರದ ಹೂಟಗಳ್ಳಿಯಲ್ಲಿರುವ ದಕ್ಷ ಕಾಲೇಜಿನಲ್ಲಿ ನಡೆದ ‘ವಿದ್ಯಾರ್ಥಿ ವಿಚಾರಗೋಷ್ಠಿ ಹಾಗೂ ಉಚಿತ ನೋಟ್ ಬುಕ್ ವಿತರಣೆ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕಾಯಿಲೆಗೆ ಮೂಲವಾದ ಮೊಬೈಲ್ ಮಾದಕ ವಸ್ತುವಿದ್ದಂತೆ. ಅದರ ನಶೆಗೆ ಮಕ್ಕಳು ಮತ್ತು ಪೋಷಕರಿಬ್ಬರೂ ಒಳಗಾಗಿದ್ದಾರೆ. ಇದರಿಂದ ನೆನಪಿನ ಶಕ್ತಿಯೂ ಕ್ಷೀಣವಾಗಿದೆ….

Read More

ಜನರಲ್ಲಿ ಜಾಗೃತಿ ಮೂಡಿಸಬೇಕಾದ ಮಹತ್ತರ ಜವಾಬ್ದಾರಿ ಪತ್ರಕರ್ತರ ಮೇಲಿದೆ : ವಕೀಲ ಆರ್. ನಾಗೇಶ್

ಎಚ್.ಡಿ.ಕೋಟೆ: ಪತ್ರಿಕಾರಂಗವು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿದ್ದು, ಸಂವಿಧಾನದ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಆರ್. ನಾಗೇಶ್ ತಿಳಿಸಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಜೊತೆಗೆ ಪತ್ರಿಕಾರಂಗವೂ ಪ್ರಮುಖ ಪಾತ್ರ…

Read More

ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ: ಗೊರಹಳ್ಳಿ ಜಗದೀಶ್

 ದೊಡ್ಡಕಮರಹಳ್ಳಿ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ  ಪಿರಿಯಾಪಟ್ಟಣ : ಶಿಕ್ಷಕರು ನೀಡುವ ಶಿಕ್ಷಣ, ಸಂಸ್ಕಾರ ಹಾಗೂ ಮಾರ್ಗದರ್ಶನವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಪಿರಿಯಾಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ಗೊರಹಳ್ಳಿ ಜಗದೀಶ್ ಹೇಳಿದರು. ತಾಲೂಕಿನ ದೊಡ್ಡಕಮರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ 2006-07ನೇ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ಕಲಿಸುವ ಪಾಠಗಳು ತರಗತಿಗೆ ಮಾತ್ರ ಸೀಮಿತವಾಗದೆ, ಜೀವನದ…

Read More

ಸಹಜ ರಂಗ’ ರಂಗ ತರಬೇತಿ ಶಿಬಿರ ಉದ್ಘಾಟನೆ

ಮೈಸೂರು: ‘ನಿರಂತರ’ ರಂಗ ಸಂಸ್ಥೆಯ ವತಿಯಿಂದ ಯುವ ಸಮುದಾಯ ಹಾಗೂ ಜೆನ್ ಜೀ ತಲೆಮಾರನ್ನು ಒಳಗೊಂಡ ಸತತ ೨೦ನೇ ವರ್ಷದ ‘ಸಹಜ ರಂಗ’ ಡಿವೈಸ್ಡ್ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ನಗರದ ಗಾಂಧಿ ಭವನದಲ್ಲಿ ಸಕ್ರಿಯ ರಂಗಾಸಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನಾಡಿದ ‘ನಿರಂತರ’ ಸಂಸ್ಥೆಯ ನಿರ್ದೇಶಕ ಪ್ರಸಾದ್ ಕುಂದೂರು, “ಒಟ್ಟಾಗಿ ಕೆಲಸ ಮಾಡುವ ಮೂಲಕ ಪರಸ್ಪರ ಧೈರ್ಯ ತುಂಬಿಕೊಳ್ಳುವುದು ಮತ್ತು ನವಚೈತನ್ಯ ಪಡೆಯುವುದು ಇಂತಹ ಸಮಾವೇಶಗಳ ಮುಖ್ಯ ಉದ್ದೇಶ. ‘ಸಹಜ ರಂಗ’ ಕೇವಲ…

Read More

ವಿಜಯ ವಿಠ್ಠಲ ವಿದ್ಯಾಶಾಲೆಗೆ ಮೈಸೂರು ಮಹಾನಗರ ಜೂನಿಯರ್ ಬ್ಯಾಂಡ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ

ಮೈಸೂರು; ಮೈಸೂರು ಮಹಾನಗರಕ್ರೀಡಾ ಭಾರತಿ ಹಾಗೂ ಬಿ.ಎಸ್.ಎಸ್. ವಿದ್ಯೋದಯ ಜಂಟಿಯಾಗಿ ಆಯೋಜಿಸಿದ್ದ ‘ಮೈಸೂರು ಮಹಾನಗರಜೂನಿಯರ್ ಬ್ಯಾಂಡ್ ಸ್ಪರ್ಧೆ’ಯಲ್ಲಿ ಸರಸ್ವತಿಪುರಂನ ವಿಜಯ ವಿಠ್ಠಲ ವಿದ್ಯಾಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ಅತ್ಯುತ್ತಮ ಸಂಗೀತ ಪ್ರತಿಭೆ, ಶಿಸ್ತು, ಸಮನ್ವಯತೆ ಮತ್ತುತಂಡದ ಭಾವನೆಯನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳು ತೀರ್ಪುಗಾರರು ಹಾಗೂ ಆಯೋಜಕರಿಂದ ಮೆಚ್ಚುಗೆ ಪಡೆದರು.

Read More

ನಗರಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಬಾಕಿದಾರರ ವಿರುದ್ಧ ನಿಯಮಾನುಸಾರ ಕಠಿಣ ಕ್ರಮಕ್ಕೆ ಆಯುಕ್ತರ ಸೂಚನೆ

ಮೈಸೂರು; ನಗರಪಾಲಿಕೆಯ ವ್ಯಾಪ್ತಿಯಲ್ಲಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಕೂಡಲೇ ಬಾಕಿಯನ್ನು ವಸೂಲಿ ಮಾಡುವಂತೆ ನಗರಪಾಲಿಕೆಯ ಆಯುಕ್ತೆ ಸವಿತಾ ಅಧಿಕಾರಿಗಳಿಗೆ ಸೂಚಿಸಿದರು. ಮಹಾನಗರ ಪಾಲಿಕೆ ವ್ಯಾಪ್ತಿಯ ತೆರಿಗೆ ಬಾಕಿದಾರರ ಕುರಿತು ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತೆ ವೀಣಾ, ಉಪ ಆಯುಕ್ತರು (ಕಂದಾಯ) ಸೋಮಶೇಖರ್ ಹಾಗೂ ವಲಯಾಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರೊಂದಿಗೆ ಸೋಮವಾರ ವಿಶೇಷ ಪರಿಶೀಲನಾ ಸಭೆ ನಡೆಸಿದರು.ಸಭೆಯಲ್ಲಿ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ವಾರ್ಡ್ನ ತೆರಿಗೆ ಬಾಕಿದಾರರ ವಿವರಗಳನ್ನು ಪ್ರತ್ಯೇಕವಾಗಿ…

Read More

ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿ ಶ್ರೀ ಕೃಷ್ಣಜನ್ಮಾಷ್ಠಮಿ

ಮೈಸೂರು; ನಗರದ ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ಇದರ ಶಾಖಾ ಮಠ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿಯನ್ನು ಅದ್ಧೂರಿಯಾಗಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ದೇವಸ್ಥಾನವನ್ನು ಶುಚಿಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿ, ವಿಧವಿಧವಾದ ರಂಗೋಲಿ ಬಿಡಿಸಿ ಕಂಗೊಳಿಸಲಾಗಿತ್ತು. ಶ್ರೀ ಕೃಷ್ಣನ ಮಂಟಪಕ್ಕೆ ಫಲವಸ್ತçಗಳನ್ನು ಕಟ್ಟಿ, ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಬಂದ ಎಲ್ಲ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿ ಶಾಂತಾರ0, ಅರ್ಚಕ ರಾಘವನರಸಿಂಹನ್, ನಾರಾಯಣ ಹಾಗೂ ಅಪಾರ ಭಕ್ತವೃಂದ ಉಪಸ್ಥಿತರಿದ್ದರು.

Read More

ಧರ್ಮದ ಉಳಿವಿಗೆ ಹಬ್ಬಗಳ ಆಚರಣೆಯ ಮಹತ್ವವನ್ನ ಯುವಪೀಳಿಗೆಗೆ ತಿಳಿಸುವುದು ಅಗತ್ಯ: ಶೋಭಾ ದಿನೇಶ್

ಮೈಸೂರು: ಹಿಂದೂ ಧರ್ಮ ಉಳಿಯಬೇಕೆಂದರೆ ಇಂತಹ ಹಬ್ಬಗಳು ಎಲ್ಲಾ ಕಡೆಗಳಲ್ಲಿ ಒಟ್ಟುಗೂಡಿ ನಡೆಸಲ್ಪಡುವುದು ಅತಿ ಮುಖ್ಯವಾಗಿದೆ ಎಂದು ಪಂಚಾಯತ್ ಡೆವಲಪ್ಮೆಂಟ್ ಅಧಿಕಾರಿ ಶೋಭಾ ದಿನೇಶ್ ಹೇಳಿದರು.ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಶ್ರೀ ವರಮಹಾಲಕ್ಷಿ÷್ಮ ಹಬ್ಬದ ಅಂಗವಾಗಿ ಆಯೋಜಿಸಿದ ವರಮಹಾಲಕ್ಷಿ÷್ಮ ಜೊತೆ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಮಕ್ಕಳಿಗೆ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿ ಮಾಡಬೇಕು. ಮಾತ್ರವಲ್ಲದೆ ನಮ್ಮ ಧರ್ಮದಜಾಗೃತಿಯನ್ನು ಎಲ್ಲರಲ್ಲೂ ಮೂಡಿಸಬೇಕು ಎಂದು ತಿಳಿಸಿದರು…

Read More