Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಆಧುನಿಕ ತಂತ್ರಜ್ಞಾನವನ್ನ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಅಭಿವೃದ್ಧಿಯ ಪಥದತ್ತ ಸಾಗಬಹುದು: ನರಸಿಂಹಮೂರ್ತಿ 

ಪಿರಿಯಾಪಟ್ಟಣ : ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಅಭಿವೃದ್ಧಿಯ ಪಥದತ್ತ ಸಾಗಬಹುದು ಎಂದು ನಿವೃತ್ತ ಶಿಕ್ಷಕ ನರಸಿಂಹಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

 ತಾಲೂಕಿನ ಬೆಟ್ಟದಪುರ ಸಮೀಪದ ಅನಿಕೇತನ ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಏರ್ಪಡಿಸಿದ್ದ ದೇಶದ ಅಭಿವೃದ್ಧಿಗೆ ‘ ಎ ಐ ತಂತ್ರಜ್ಞಾ ಮಾರಕವೇ ಅಥವಾ ಪೂರಕವೇ ಎಂಬ ವಿಷಯದ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾನವನು ಆಧುನಿಕತೆಯಿಂದ ಸಾಕಷ್ಟು ಬೌದ್ಧಿಕತೆಯನ್ನು ಬೆಳೆಸಿಕೊಂಡಿದ್ದಾನೆ. ಇಂದು ಆಧುನಿಕತೆ ಅಭಿವೃದ್ಧಿ ಹೊಂದಬೇಕಾದರೆ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ ಆದರೆ ಈ ತಂತ್ರಜ್ಞಾನದ ಬಳಕೆಯಲ್ಲಿರುವ ಅನುಕೂಲಗಳನ್ನು ಮಾತ್ರ ನಾವುಗಳು ಬಳಸಿಕೊಳ್ಳಬೇಕು ಆದರೆ ಅನಾನುಕೂಲಗಳಿಂದ ಅನೇಕ ತೊಂದರೆಗಳು ಮಾನವನಿಗೆ ಆಗುತ್ತಿದೆ ಇದನ್ನು ಎಚ್ಚರಿಕೆಯಿಂದ ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿಯೊಂದು ವಿಷಯಗಳನ್ನು ಕೂಡ ಚರ್ಚಿಸಿ ಅದರಲ್ಲಿನ ಸಾಧಕ ಬಾದಕಗಳನ್ನು ಅರಿತು ಮುಂದಿನ ಹೆಜ್ಜೆ ಇಡಬೇಕು ಎಂದರು.

 ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಚಂದ್ರ.ಬಿ. ಮಾತನಾಡಿ ಪತ್ರಕರ್ತರು ಸಮಾಜದಲ್ಲಾಗುವ ನೈಜತೆಯನ್ನು ಜನರಿಗೆ ಭಿತ್ತರಿಸುವ ಕೆಲಸವನ್ನು ಮಾಡುವ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿದ್ದಾರೆ. ಸಂಘದ ವತಿಯಿಂದ ಪ್ರತಿಯೊಬ್ಬರಲ್ಲೂ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇಂದು ವಿದ್ಯಾರ್ಥಿಗಳಿಗೆ ಎಐ ಉಪಯೋಗದ ಬಗ್ಗೆ ತಮ್ಮ ಭೌತಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಈ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.

 ಈ ಸಂದರ್ಭದಲ್ಲಿ ಅನಿಕೇತನ ಪಿಯು ಕಾಲೇಜಿನ ಅಧ್ಯಕ್ಷ ಅಪ್ಪಣ್ಣ, ಕಾರ್ಯದರ್ಶಿ ಡಾ.ಜೆ.ಸೋಮಣ್ಣ,  ಪತ್ರಕರ್ತರ ಸಂಘದ ಉಪಾಧ್ಯಕ್ಷ ಸ್ವಾಮಿ ಬಾವಾಲಾಳು, ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಕಾರ್ಯದರ್ಶಿ ದೇವೇಗೌಡ, ರಂಗಕರ್ಮಿ ಬರಮಣ್ಣ ಬೆಟಗೇರಿ, ಪಿಡಿಓ ಮಂಜುನಾಥ್ ,ಪಾಂಡು ಸೇರಿದಂತೆ ಇತರರು ಹಾಜರಿದ್ದರು.