
ಮೈಸೂರು; ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ ಚದ್ಮವೇಶ ಸ್ಪರ್ಧೆಯನ್ನು ಕಾಣಿಯೂರು ಮಠದ ಶ್ರೀ ವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಸುಮಾರು 120 ಮಕ್ಕಳು ಚದ್ಮ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಶ್ರೀ ಕಾಣೆಯೂರು ಮಠದ ವಿದ್ಯಾವಲ್ಲವ ತೀರ್ಥ ಸ್ವಾಮೀಜಿ ಬಹುಮಾನವನ್ನು ವಿತರಿಸಿದರು.
ಚದ್ಮ ವೇಷ ಸ್ಪರ್ಧೆಯ ಮುಖ್ಯ ತೀರ್ಪುಗಾರರಾಗಿ ವಿಜಯ ವಿಠಲ ವಿದ್ಯಾ ಶಾಲೆಯ ಕವಿತಾ ಹಾಗೂ ತ್ರಿವೇಣಿ ಎಂಬುವರು ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಶ್ರೀವತ್ಸರಾವ್, ಕಾರ್ಯದರ್ಶಿ ರಾಘವೇಂದ್ರರಾವ್, ಖಜಾಂಚಿ ಸುರೇಶ್ ರಾವ್, ಶ್ರೀ ಕೃಷ್ಣ ಟ್ರಸ್ಟ್ ನ ಉಪಾಧ್ಯಕ್ಷರಾದ ರವಿ ಶಾಸ್ತಿç, ಪಿ ಎಸ್ ಶೇಖರ್, ಹಾಗೂ ಪುಟ್ಟಣ್ಣ ಭಟ್ ಹಾಜರಿದ್ದರು