
ಮೈಸೂರು: ಮಾದಕ ದ್ರವ್ಯ ವಿರೋಧಿ ಹೋರಾಟದಲ್ಲಿ ವಿದ್ಯಾರ್ಥಿಗಳ ಪಾತ್ರ ಅತಿ ಮಹತ್ವದ್ದು. ಮಾದಕ ದ್ರವ್ಯ ವ್ಯಸನಿಗಳಾಗುವುದು ಸಮಾಜ ವಿರೋಧಿ. ಮಾದಕ ದ್ರವ್ಯ ಬೇಡ ಬ್ರೋ ಎಲ್ಲರ ಗುರಿಯಾಗಬೇಕು ಎಂದು ಡಿಸಿಪಿ ಡಾ. ಡಾ. ಹರ್ಷಾ ಪ್ರಿಯಂವದ ತಿಳಿಸಿದ್ದಾರೆ.
ಜನಜಾಗರಣ ಟ್ರಸ್ಟ್ ಆಯೋಜಿಸಿರುವ ಮಾಧವ ಕೃಪಾ ಗಣೇಶೋತ್ಸವ ಸಮಿತಿ ಯುವಜನರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಮಾದಕ ವಸ್ತು ಮುಕ್ತ ಆರೋಗ್ಯಕರ, ಸಮಾಜ ನಿರ್ಮಿಸುವ ಉದ್ದೇಶದಿಂದ “ಸೇ ನೋ ಟು ಡ್ರಗ್ಸ್ ” (ಮಾದಕ ವಸ್ತುಗಳು ಬೇಡವೇಬೇಡ) ಎಂಬ ಸಂದೇಶದೊAದಿಗೆ ಶನಿವಾರ ಹಮ್ಮಿಕೊಂಡಿದ್ದ ವಾಕಥಾನ್ ಅನ್ನು ಜೆಎಲ್ಬಿ ರಸ್ತೆಯ ಎಸ್ಡಿಎಂ ಕಾಲೇಜು ಸಮೀಪ ವಿದ್ಯಾರ್ಥಿನಿಯೊಬ್ಬಳಿಗೆ ರಾಷ್ಟç ಧ್ವಜ ಹಸ್ತಾಂತರಿಸಿ ಉದ್ಘಾಟಿಸಿ ಅವರು ಮಾತನಾಡಿದರು. “ಕೆಲ ವರ್ಷಗಳ ಹಿಂದೆ ತಾವು ಕೂಡಾ ವಿದ್ಯಾರ್ಥಿನಿಯಾಗಿ ಈ ತೆರನಾದ ವಾಕಥಾನ್ ನಲ್ಲಿ ಪಾಲ್ಗೊಳ್ಳುತ್ತಿದ್ದೆವು. ಸಮಾಜದ ನಿರ್ಮಾಣದಲ್ಲಿ ಇಂತಹ ಪ್ರಯತ್ನಗಳು ಅತಿ ಮುಖ್ಯ,” ಎಂದು ತಿಳಿಸಿದರು.
ಮಾದಕ ದ್ರವ್ಯ ವಿರೋಧಿ ಹೋರಾಟದಲ್ಲಿ ಎಲ್ಲರೂ ಕೈ ಜೋಡಿಸಬೇಕು. ಅದು ನಮ್ಮ ಸಾಮಾಜಿಕ ಜವಾಬ್ದಾರಿ ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸ್ಥಾಪಕ ಸದಸ್ಯ ಡಾ. ಎಂ ಆರ್ ಸೀತಾರಾಮ್ ಮಾತನಾಡಿ, ಎಲ್ಲಾ ರೀತಿಯ ಮಾದಕ ವ್ಯಸನಗಳು, ವ್ಯಸನಿಗಳ ಕುಟುಂಬಕ್ಕೆ ಮಾರಕ ಎಂದರು.
ತಮ್ಮ ಸೇವಾ ಪಯಣದ ಹಲವು ಉದಾಹರಣೆಗಳನ್ನು ನೆನಪಿಸಿಕೊಂಡ ಅವರು, ಮಾದಕ ದ್ರವ್ಯ ಸೇರಿದಂತೆ ಎಲ್ಲಾ ಕೆಟ್ಟ ವ್ಯಸನಗಳು, ವ್ಯಕ್ತಿಗಳ ಜೊತೆಗೆ ಅವರ ಕುಟುಂಬ ಹಾಗು ಸಮಾಜಕ್ಕೆ ಮಾರಕ ಎಂದರು.
ಕಾಮಾಕ್ಷಿ ಆಸ್ಪತ್ರೆಯ ಎಂಡಿ ಮಹೇಶ್ ಶಣೈ, ಮಾಧವ ಕೃಪಾ ಗಣೇಶೋತ್ಸವ ಸಮಿತಿ ಮುಖ್ಯ ಸಂಚಾಲಕ ದರ್ಶನ್ ರಾಜ್, ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜೆಎಲ್ ಬಿ ರಸ್ತೆಯ ಮಹಾರಾಜ ಜೂನಿಯರ್ ಕಾಲೇಜಿನಲ್ಲಿ ಮುಕ್ತಾಯಗೊಂಡ ಈ ವಾಕಥಾನ್ ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಾದಕ ದ್ರವ್ಯ ವಿರೋಧಿ ಘೋಷಣಾ ಫಲಕ ಹಿಡಿದುಕೊಂಡು ಘೋಷಣೆ ಮೊಳಗಿಸುತ್ತಾ ವಿದ್ಯಾರ್ಥಿಗಳು ವಾಕಥಾನ್ ಮೂಲಕ ಜನ ಜಾಗೃತಿ ಮೂಡಿಸಿದರು.