
ಮೈಸೂರು: ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಕೇವಲ ಶೈಕ್ಷಣಿಕ ಅರ್ಹತೆ ಹೊಂದಿರುವುದು ಸಾಕಾಗುವುದಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪವನೇಶ್ ಕುಮಾರ್ ಶರ್ಮ ಹೇಳಿದರು.
ಮೈಸೂರಿನ ರುಡ್ಸೆಟ್ ಸಂಸ್ಥೆಯಲ್ಲಿ ಎನ್.ಆರ್.ಎಲ್.ಎಂ. ಯೋಜನೆಯಡಿಯಲ್ಲಿ ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್ – 45 ದಿನಗಳ ಕಾಲಾವಧಿಯ ತರಬೇತಿ ಮತ್ತು ಅಣಬೆ ಬೇಸಾಯ – 10 ದಿನಗಳ ಕಾಲಾವಧಿಯ ತರಬೇತಿಗಳನ್ನು ಆಯೋಜಿಸಿದ್ದು, ಸಂಸ್ಥೆಗೆ ಆಗಮಿಸಿದ ಪವನೇಶ್ ಕುಮಾರ್ ಶರ್ಮ, ತರಬೇತಿ ಕಾರ್ಯಚಟುವಟಿಕಗಳನ್ನು ವೀಕ್ಷೀಸಿದರು ಮತ್ತು ಶಿಬಿರಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ ಮಾತನಾಡಿದ ಅವರು, ಭವಿಷ್ಯದ ಜಗತ್ತಿನಲ್ಲಿ ಕೌಶಲ್ಯಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳನ್ನು ಕುರಿತು ಅರಿವು ನೀಡಿದರು. ಉದ್ಯೋಗ ಪಡೆಯಲು ಹಾಗೂ ಸ್ವಯಂ ಉದ್ಯೋಗ ಆರಂಭಿಸಲು, ಪ್ರಾಯೋಗಿಕ ಕೌಶಲ್ಯಗಳು, ತಾಂತ್ರಿಕ ಜ್ಞಾನ ಮತ್ತು ನಿರಂತರ ಕಲಿಕೆಯ ಮನೋಭಾವ ಅತ್ಯಂತ ಅವಶ್ಯಕವಾಗಿವೆ. ತಂತ್ರಜ್ಞಾನ, ಡಿಜಿಟಲೀಕರಣ ಮತ್ತು ಬದಲಾಗುತ್ತಿರುವ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ, ಮುಂದಿನ ದಿನಗಳಲ್ಲಿ ವಿವಿಧ ಕೌಶಲ್ಯಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಲಿದೆ ಎಂದು ತಿಳಿಸಿದರು.
ಭವಿಷ್ಯದ ಉದ್ಯೋಗ ಕ್ಷೇತ್ರದಲ್ಲಿ ಕಂಪ್ಯೂಟರ್ ಮತ್ತು ಡಿಜಿಟಲ್ ಕೌಶಲ್ಯ, ಆಹಾರ ಸಂಸ್ಕರಣೆ, ಎಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್ಸ್ ಸೇವೆಗಳು ಹಾಗೂ ವಿವಿಧ ಸೇವಾ ವಲಯದ ಕೌಶಲ್ಯಗಳಿಗೆ ಉತ್ತಮ ಅವಕಾಶಗಳಿವೆ. ರುಡ್ಸೆಟ್ ಸಂಸ್ಥೆಯಲ್ಲಿ ನೀಡುವ ಕೌಶಲ್ಯ ತರಬೇತಿಯು ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರ ಜೊತೆಗೆ, ಸ್ವಂತ ಉದ್ಯಮ ಆರಂಭಿಸಿ ಸ್ವಾವಲಂಬಿಗಳಾಗಲು ಸಹಕಾರಿಯಾಗಿದೆ ಎಂದರು.
ವಿಶೇಷವಾಗಿ ಗ್ರಾಮೀಣ ಪ್ರದೇಶದ ಯುವಕರು ಸ್ಥಳೀಯ ಸಂಪನ್ಮೂಲಗಳು ಮತ್ತು ತಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದ ಉದ್ಯಮಗಳನ್ನು ಆರಂಭಿಸುವ ಮೂಲಕ ಆದಾಯಗಳಿಸಬಹುದು. ಕೌಶಲ್ಯ ಹೊಂದಿರುವ ವ್ಯಕ್ತಿಯು ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಗೆ ಸುಲಭವಾಗಿ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು. ಕೌಶಲ್ಯ ಕಲಿಯಿರಿ, ಅವಕಾಶಗಳನ್ನು ಸೃಷ್ಟಿಸಿಕೊಳ್ಳಿ, ಸ್ವಾವಲಂಬಿಗಳಾಗಿ ಎಂಬ ಸಂದೇಶದೊAದಿಗೆ ಯುವಜನರು ಭವಿಷ್ಯದ ಜಗತ್ತಿಗೆ ಸಜ್ಜಾಗಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನೇಸರ್ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್.ಜಿ, ಕೀರ್ತಿರಾಜ್, ನ್ಯಾಷನಲ್ ಆಕಾಡೆಮಿ ಆಫ್ ರುಡ್ಸೆಟ್ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕ ಆನಂದ್, ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕ ಉತ್ತಮ್ಕುಮಾರ್ ಸುದಾಂಶು, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಆಶಾ, ಜಿಲ್ಲಾ ವ್ಯವಸ್ಥಾಪಕ ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಯೋಗೇಶ್ ಆನಂದ್ ಶಿರೂರು ಮತ್ತು ಸಂತೋಷ್ ತಿಮ್ಮೇಗೌಡ, ರುಡ್ಸೆಟ್ ಸಂಸ್ಥೆಯ ನಿರ್ದೇಶಕಿ ಭವ್ಯ, ಪಾಲ್ರಾಜ್, ಲತಾಮಣಿ ಹಾಜರಿದ್ದರು.