
ಮೈಸೂರು; ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೈಸೂರು ನಗರ ಯುವ ಘಟಕದ ಸಂತೋಷ್ ಕುಮಾರ್ ಬಿ.ಎಂ. ನೇತೃತ್ವದ ನೂತನ ತಂಡ ಪದಗ್ರಹಣ ಕಾರ್ಯಕ್ರಮದ ನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಡೆಯಿತು.
ಸುತ್ತೂರು ವ್ಮಠದ ಪೀಠಾಧಿಪತಿಗಳಾದ ಶ್ರೀಶಿವರತ್ರಿದೇಶಿಕೇಂದ್ರ ಸ್ವಾಮಿಯವರ ದಿವ್ಯ ಸಾನ್ನಿಧ್ಯದಲ್ಲಿ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮೈಸೂರು ನಗರ ಘಟಕದ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಬಿ.ಎಂ. ಅವರು ಅಧಿಕಾರ ಸ್ವೀಕರಿಸಿದರು. ಅವರೊಂದಿಗೆ ನೂತನ ಉಪಾಧ್ಯಕ್ಷರಾಗಿ ಮಧು ಕುಮಾರ್ ಹಾಗೂ ಮಲ್ಲೇಶ್, ನೂತನ ನಿರ್ದೇಶಕರಾಗಿ ಮಧು ಎಸ್., ರಾಕೇಶ್, ಕಿರಣ್, ಶರತ್, ಶಿವಪ್ರಸಾದ್ ಎಸ್., ಜಗದೀಶ್ ಬಿ., ಎಸ್. ತೇಜಸ್ ಆರ್., ರೇಣುಕಾ ಪ್ರಸಾದ್ ಎಸ್.ಎಲ್., ಮೋಹನ್ ಕುಮಾರ್ ಎನ್., ಜಗದೀಶ್ ಎಂ., ನವೀನ್ ಎನ್.ವಿ., ಟಿ.ಎಸ್. ಸೂರ್ಯ, ನಾಗರಾಜ್, ನಿಜಗುಣ ಶೇಖರ್ ವಿ.ಆರ್., ರಾಜೇಂದ್ರ ಬಿ., ಶಿವಕುಮಾರ್ ಎ., ಆಕಾಶ್, ಅಭಿಷೇಕ್ ಹಾಗೂ ಮಹೇಶ್ ಬಿ. ಅವರು ಪದಗ್ರಹಣ ಮಾಡಿದರು.
ನೂತನ ತಂಡವು ವೀರಶೈವ-ಲಿಂಗಾಯತ ಸಮಾಜದ ಸಂಘಟನೆ, ಯುವಜನರ ಸಬಲೀಕರಣ, ಮಹಿಳಾ ಘಟಕದ ಬಲವರ್ಧನೆ ಹಾಗೂ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕöÈತಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಸಂಕಲ್ಪವನ್ನು ವ್ಯಕ್ತಪಡಿಸಿತು.
ನೂತನ ಅಧ್ಯಕ್ಷರು ಹಾಗೂ ಸಂಪೂರ್ಣ ತಂಡಕ್ಕೆ ಗಣ್ಯರು ಮತ್ತು ಸಮಾಜದ ಮುಖಂಡರು ಶುಭ ಹಾರೈಸಿ, ಸಮಾಜದ ಒಗ್ಗಟ್ಟು ಹಾಗೂ ಅಭಿವೃದ್ಧಿಗಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಆಶಿಸಿದರು. ಈ ಪದಗ್ರಹಣ ಕಾರ್ಯಕ್ರಮವು ಮೈಸೂರು ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಗರ ಅಧ್ಯಕ್ಷ ಕೆ.ಎಸ್. ಪ್ರಕಾಶ್, ಯುವ ಘಟಕದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಬಾನು ಪ್ರಸಾದ್, ರಾಜ್ಯ ಕಾರ್ಯದರ್ಶಿ ಪ್ರಣಯ್, ರಾಷ್ಟಿçÃಯ ಯುವ ಘಟಕದ ಸದಸ್ಯ ಷಡಕ್ಷರಿ, ನಗರ ನಿರ್ದೇಶಕರಾದ ಕಿಶೋರ್ ಹಾಗೂ ಉಮೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.