Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಾಜಿ ಸಂಸದ ಪ್ರತಾಪ್ ಸಿಂಹ ಮೇಲೆ ಸುಳ್ಳು ಅಟ್ರಾಸಿಟಿ ದೂರು ದಾಖಲಿಸಿರುವುದು ಖಂಡನೀಯ; ತೋಟದಪ್ಪ ಬಸವರಾಜು


ಮೈಸೂರು; ಜಿಲ್ಲೆಯ ತಿ.ನರಸೀಪುರದಲ್ಲಿ ನಡೆದ ಗಣೇಶೋಶತ್ಸವ ಶೋಭಾ ಯಾತ್ರೆಯ ವೇಳೆ ಇನ್ಸ್ ಪೆಕ್ಟರ್ ವಿರುದ್ಧ ಪ್ರಚೋಧನಕಾರಿಯಾಗಿ ಮಾತನಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಮೇಲೆ ಅನಗತ್ಯವಾಗಿ ಎಫ್‌ಐ ಆರ್ ದಾಖಲಿಸಿದ್ದರು. ಇದೀಗ ಅವರ ಮೇಲೆ ಸುಳ್ಳು ಅಟ್ರಾಸಿಟಿ ದೂರು ದಾಖಲಿಸಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಹೇಳಿದ್ದಾರೆ.
ತಿ.ನರಸೀಪುರ ಠಾಣೆಯ ಇನ್ಸ್ಪೆಕ್ಟರ್ ಧನಂಜಯ ಅಸಂವಿಧಾನಿಕ ಪದಗಳನ್ನು ಬಳಸಿ, ಮಾತನಾಡಿ ಪ್ರಚೋದನೆಗೆ ಕಾರಣರಾಗಿದ್ದರಿಂದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಯ ಅವರದೇ ದಾಟಿಯಲ್ಲಿ ಮಾತನಾಡಿ, ಸವಾಲಿಗೆ ಸವಾಲ್ ಎಸೆದಿದ್ದಾರೆ ಹೊರತು, ಅವರು ಯಾವುದೇ ಪ್ರಚೋದನಕಾರಿ ಭಾಷಣ ಮಾಡಿಲ್ಲ ಎಂದು ಹೇಳಿದ್ದಾರೆ.
ಎರಡು ಬಾರಿ ಎಂಪಿಯಾಗಿದ್ದವರು ಜಾತಿ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ. ಪತ್ರಕರ್ತರಾಗಿ ಸೇವೆ ಸಲ್ಲಿಸಿ, ಈಗ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಪರಂಪರೆಯಿAದ ನಾವೆಲ್ಲ ಕಲಿತಿರುವುದು ಧರ್ಮನಿಷ್ಠೆ, ದೇಶಪ್ರೇಮ, ಪರಧರ್ಮ ಸಹಿಷ್ಣುತೆ. ಇಂತಹ ಎಫ್‌ಐಆರ್ ಗಳಿಂದ ಪ್ರತಾಪ್ ಸಿಂಹ ಅಥವಾ ಯಾವುದೇ ಹಿಂದೂ ಸ್ವಯಂ ಸೇವಕರನ್ನು ಕಟ್ಟಿಹಾಕಲು ಸಾಧ್ಯವಿಲ್ಲ ದೇಶಕ್ಕಾಗಿ ಯಾವುದೇ ತ್ಯಾಗಕ್ಕಾದರೂ ಸಿದ್ಧವಿರುವವರು ನಾವು ಎಂದು ತಿಳಿಸಿದ್ದಾರೆ.
ಗಣೇಶೋತ್ಸವದ ಶೋಭಾ ಯಾತ್ರೆಯ ದಿನವೇ ಸಾಮರಸ್ಯದ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸುವುದು ಎಷ್ಟು ಸರಿ, ಶೋಭಾ ಯಾತ್ರೆಯನ್ನು ಕೇಸರಿಮಯವಾಗಿ ಆಚರಿಸಲು ಹೊರಟಿದ್ದವರಿಗೆಮ ನಿಮ್ಮ ಬಂಟಿAಗ್ಸ್ ಕಟ್ಟಿ, ವಿಘ್ನ ಸಂತೋಷ ಮೆರೆವುದು ಸಾಮರಸ್ಯದ ಸಂಕೇತವೇ. ಅವರ ನೀಲಿ ಬಂಟಿAಗ್ಸ್ ಬೇರೆ, ನಮ್ಮ ಕೇಸರಿ ಬೆಂಟಿAಗ್ಸ್ ಬೇರೆ ಎಂಬ ಭೇದಭಾವ ನಮಗಿಲ್ಲ ಎಂದು ಅದರಡಿಯಲ್ಲೇ ಯಾತ್ರೆಯನ್ನು ನೆರವೇರಿಸುತ್ತೇವೆ ಎಂದು ಸಾಮರಸ್ಯ ಮೆರೆದಿರುವುದು ನಾವು. ಪ್ರತಾಪ್ ಸಿಂಹರನ್ನು ಗಡಿಪಾರು ಮಾಡಿ, ಅವರನ್ನು ಬಂಧಿಸಿ ಹಾಗೂ ವಿರೋಧ ಪಕ್ಷ ನಾಯಕರಾದ ಆರ್ ಅಶೋಕ್ ರವರನ್ನು ವಜಾ ಗೊಳಿಸಿ ಎಂಬುದು ನಿಮ್ಮ ಆಗ್ರಹವಾದರೆ ಸರ್ಕಲ್ ಇನ್ಸೆ÷್ಪಕ್ಟರ್ ಅವರನ್ನು ಅಮಾನತುಗೊಳಿಸಿ, ಕೇಸ್ ದಾಖಲಿಸಿ ಬಂಧಿಸಿ ಹಾಗೂ ಗೃಹ ಮಂತ್ರಿ ಪ್ರಿಯಾಂಕ ಖರ್ಗೆ ಅವರನ್ನು ವಜಾ ಗೊಳಿಸಿ ಎಂಬುದು ನಮ್ಮ ಆಗ್ರಹವಾಗಿದೆ ಎರಡನ್ನೂ ಸರ್ಕಾರ ಮಾಡಲಿ ನಮ್ಮದೇನು ತಕರಾರಿಲ್ಲಎಂದು ಹೇಳಿದ್ದಾರೆ.