
ಮೈಸೂರು; ಅಲ್ಜೆಮರ್ಸ್ ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಜೆಎಸ್ಎಸ್ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಪಿ. ಮಧು ಹೇಳಿದರು.
ವಿಶ್ವ ಅಲ್ಜೆಮರ್ಸ್ ದಿನಾಚರಣೆಯ ಅಂಗವಾಗಿ ಗುರುವಾರ ನಗರದ ಜೆಎಸ್ಎಸ್ ಆಸ್ಪತ್ರೆ, ಮೈಸೂರು ಜೆರಿಯಾಟ್ರಿಕ್ಸ್ ವಿಭಾಗದ ವತಿಯಿಂದ ಅಲ್ಜೆöÊಮರ್ಸ್ ಮತ್ತು ಡಿಮೆನ್ಷಿಯಾ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಆರಂಭಿಕ ರೋಗನಿರ್ಣಯದಿಂದ ರೋಗವನ್ನು ಸೂಕ್ತವಾಗಿ ನಿರ್ವಹಿಸಲು ಹಾಗೂ ರೋಗಿಗಳ ಜೀವನಮಟ್ಟವನ್ನು ಸುಧಾರಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಅಲ್ಜೆöÊಮರ್ಸ್ ಮತ್ತು ಸಂಬAಧಿತ ಅಸ್ವಸ್ಥತೆಗಳ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಡಾ. ಹನುಮಂತಾಚಾರ್ ಜೋಶಿ ಉದ್ಘಾಟಿಸಿ ಮಾತನಾಡಿ, ಅಲ್ಜೆöÊಮರ್ಸ್ ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸಿ, ಸೂಕ್ತ ಸಮಯದಲ್ಲಿ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಪಡೆಯುವ ಮೂಲಕ ರೋಗಿಗಳ ಆರೈಕೆ ಹಾಗೂ ಜೀವನಮಟ್ಟವನ್ನು ಉತ್ತಮಪಡಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆರಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಪ್ರತಿಭಾ ಪೆರೇರಾ, ಡಾ. ಕಿಶೋರ್, ಡಾ. ಶಿಲ್ಪಾ, ಡಾ. ತೇಜಸ್ವಿನಿ, ಚಂದ್ರು, ಮ್ಯಾನೇಜರ್ , ಸೇರಿದಂತೆ ವೈದ್ಯರು, ಆರೈಕೆದಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಅಲ್ಜೆöÊಮರ್ಸ್ ಮತ್ತು ಡಿಮೆನ್ಷಿಯಾ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಜ್ಞಾಪಕಶಕ್ತಿ ಆಟಗಳನ್ನು ನಡೆಸಲಾಯಿತು. ಭಾಗವಹಿಸಿದವರಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.