
ಮೈಸೂರು: 220/66/11 ಕೆ.ವಿ ಕಡಕೊಳ ಮತ್ತು ವಾಜಮಂಗಲ ವಿದ್ಯುತ್ ಪ್ರಸರಣಾ ಮಾರ್ಗದಲ್ಲಿ ತುರ್ತು ಕಾರ್ಯ ನಿಮಿತ್ತ 220 ಕೆ.ವಿ ವಾಜಮಂಗಲ ಸ್ವೀಕರಣಾ ಕೇಂದ್ರ ದಿಂದ ಹೊರ ಹೊಮ್ಮುವ 11 ಕೆ.ವಿ. ಕೆ.ಜಿ ಹುಂಡಿ-ಎನ್.ಜೆ.ವೈ, ವಿದ್ಯಾವಿಕಾಸ್-ಎನ್.ಜೆ.ವೈ, ವಾಜಮಂಗಲ ಐ.ಪಿ, ವರಕೋಡು ಐ.ಪಿ ಹಾಗೂ ಸಜ್ಜೆಹುಂಡಿ ಐ.ಪಿ ಫೀಡರ್ನ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಸೆ.25 ರಂದು ಕೈಗೊಳ್ಳಲಾಗಿದೆ.
ಇದರಿಂದಾಗಿ ಬೆಳಿಗ್ಗೆ 10 ರಿಂದ ಸಂಜೆ 5ರ ತನಕ ವರುಣ, ದಂಡಿಕೆರೆ, ಪಿಲ್ಲಹಳ್ಳಿ, ಮೋಸಂಬಾಯನಹಳ್ಳಿ, ವಾಜಮಂಗಲ, ವರಕೋಡು, ಕೆಂಪೇಗೌಡನಹುAಡಿ, ಹೊಸಹುಂಡಿ, ಮೂಡಲಹುಂಡಿ, ಬಡಗಲಹುಂಡಿ, ಜಂತಗಳ್ಳಿ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನ.ರಾ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.