
ಮೈಸೂರು; ಮಹಾನಗರ ಪಾಲಿಕೆಯ ವಲಯ ಕಚೇರಿ-೯ ರ ವ್ಯಾಪ್ತಿಯ ೧೧೦ ಮಂದಿ ಮಹಿಳಾ ಪೌರಕಾರ್ಮಿಕರಿಗೆ, ರಾಜಕುಮಾರ್ ರಸ್ತೆಯಲ್ಲಿರುವ ಡಾ. ಜ್ಯೋತಿಸ್ ಹೆಲ್ತ್ ಕೇರ್ ಲಿ,ಆಸ್ಪತ್ರೆಯ ಸಹಯೋಗದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಸವಿತಾ ಎಂ.ಕೆ. ಅವರು ಚಾಲನೆ ನೀಡಿದರು.
ಮಹಿಳಾ ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ, ಮಹಿಳೆಯರಿಗೆ ಅವಶ್ಯಕತೆ ಇರುವ ಸುಮಾರು ರೂ. ೫,೦೦೦ ಮೌಲ್ಯದ ಎಲ್ಲಾ ತರಹದ ಆರೋಗ್ಯ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಿಕೊಡಲಾಯಿತು.
ಡಾ. ಜ್ಯೋತಿಸ್ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ಜ್ಯೋತಿ ರವರು ಸ್ವತಃ ಖುದ್ದಾಗಿ ಎಲ್ಲಾ ೧೧೦ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ, ವೈಯಕ್ತಿಕ ಸಮಾಲೋಚನೆ ಹಾಗೂ ಅಗತ್ಯ ಸಲಹೆಗಳನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ವಲಯ ಕಚೇರಿ-೯ ರ ಪರಿಸರ ಅಭಿಯಂತರ ಲೋಕೇಶ್ವರಿ ,ವಲಯ ಅಭಿವೃದ್ಧಿ ಅಧಿಕಾರಿ ಹರ್ಷಿಯಾ ತರನಂ ,ಆರೋಗ್ಯ ನಿರೀಕ್ಷಕರಾದ ಪ್ರಭಾಕರ್,ಸಹನಾ,ಶ್ರುತಿ ಹಾಗೂ ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.