Month: September 2026
ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಪಿರಿಯಾಪಟ್ಟಣ ಹೊರಕ್ಕೆ : ಬ್ಲೂ ಇಂಡಿಯಾ ಪಾರ್ಟಿ ಹಾಗೂ ರೈತ ಸಂಘಟನೆಗಳಿಂದ ಖಂಡನೆ
ರೈತರ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ಜೊತೆ ನಿಲ್ಲಬೇಕು ಎಂದು ಬ್ಲೂ ಇಂಡಿಯಾ ಪಕ್ಷದ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಮೌರ್ಯ ಪಿರಿಯಾಪಟ್ಟಣ : ಅನಾವಷ್ಟಿಯ ಪರಿಣಾಮವಾಗಿ ಬಿತ್ತಿದ ಬೆಳೆ ಕೈ ಕೊಟ್ಟರೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪಿರಿಯಾಪಟ್ಟಣವನ್ನು ಬರ ಪೀಡಿತ ತಾಲ್ಲೂಕಿನ ಪಟ್ಟಿಯಿಂದ ಹೊರ ಹಾಕಲಾಗಿದೆ ಎಂದು ಬ್ಲೂ ಇಂಡಿಯಾ ಪಾರ್ಟಿ ರಾಜ್ಯಾಧ್ಯಕ್ಷ ರಾಜಶೇಖರ ದೊಡ್ಡಣ್ಣ ಮೌರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಪತ್ರಕರ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು ಮೈಸೂರಿನ ಎಂಟು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿ, ಪಿರಿಯಾಪಟ್ಟಣವನ್ನು…
ನಾಗರೀಕತೆ ಬೆಳದಂತೆ ಮನುಷ್ಯಅಸಹಜನಾಗುತ್ತಿದ್ದಾನೆ; ಡಾ.ನೀಲಗಿರಿ.ಎಂ ತಳವಾರ
ಮೈಸೂರು; ನಾಗರೀಕತೆ ಬೆಳದಂತೆ ಮನುಷ್ಯ ಅಸಹಜನಾಗುತ್ತಿದ್ದಾನೆ ಎಂದು ಶಾಸ್ತಿçÃಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ನೀಲಗಿರಿ ಎಂ ತಳವಾರ ಹೇಳಿದರು.ನಗರದ ಜೆ.ಎಲ್.ಬಿ ರಸ್ತೆಯಲ್ಲಿರುವ ಮಹಾರಾಜ ಪದವಿಪೂರ್ವ ಕಾಲೇಜಿನ ಆವರಣದಲಿ ಕನ್ನಡ ಉಪನ್ಯಾಸಕ ಜಿಲ್ಲಾ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಸಾಹಿತಿ ಡಾ.ನೀ.ಗೂ.ರಮೇಶ್‌ರವರ “ಸರಳರೇಖೆ” ವ್ಯಕ್ತಿತ್ವ ವಿಕಸನ ಪ್ರಬಂಧಗಳ ಸಂಕಲವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಸಂಕಲವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಆಡಂಬರವೇ ಇಂದಿನ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ನಾಗರೀಕತೆ ಬೆಳದಂತೆ ಮನುಷ್ಯ ಅಸಹಜನಾಗುತ್ತಿದ್ದಾನೆ. ಕೃತಕತೆ ಮತ್ತು ಅಸಹಜತೆ ಇಂದಿನ…
ಅನಿಶ್ಚಿತತೆಯ ಕಾಲದಲ್ಲಿ ಆಹಾರ, ಇಂಧನ ಮತ್ತು ಜೀವನೋಪಾಯದ ಭದ್ರತೆಗೆ ತೆಂಗು ಪ್ರಮುಖ ಆಧಾರ; ಡಾ. ಹಂಚಿಮನಿ
ಮೈಸೂರು; ತೆಂಗು ವಿಶ್ವದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದ್ದು, ಇದು ಕೇವಲ ರೈತರಿಗೆ ಆದಾಯ ನೀಡುವ ಬೆಳೆಯಷ್ಟೇಅಲ್ಲದೆ, ಮಾನವನ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುವ ಪ್ರಮುಖ ಆಹಾರದ ಮೂಲವಾಗಿದೆ ಎಂದು ಮೈಸೂರಿನ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಹಂಚಿಮನಿ ಹೇಳಿದರು.ವಿಶ್ವತೆಂಗು ದಿನ–೨೦೨೬ರ ಅಂಗವಾಗಿ “ಅoಛಿoಟಿuಣ iಟಿ ಖಿimes oಜಿ Uಟಿಛಿeಡಿಣಚಿiಟಿಣಥಿ: Seಛಿuಡಿiಟಿg ಈooಜ, ಇಟಿeಡಿgಥಿ ಚಿಟಿಜ ಐiveಟihooಜs” ಎಂಬ ಆಶಯದೊಂದಿಗೆ ಐಸಿಎಆರ್–ಜೆಎಸ್‌ಎಸ್ ಕೃಷಿ ವಿಜ್ಞಾನಕೇಂದ್ರ, ಸುತ್ತೂರು, ಕೃಷಿ ತಂತ್ರಜ್ಞರ ಸಂಸ್ಥೆ, ಮೈಸೂರು ಹಾಗೂ ಶೋಭಿತ ನಂಜೇಗೌಡ ಫಾರ್ಮ್,…
ಸಕ್ಕರೆ, ಸಿಲಿಂಡರ್ ಅಕ್ರಮ ದಾಸ್ತಾನು ಬಗ್ಗೆ ದಾಳಿ ನಡೆಸಿ, ಕಾನೂನು ಕ್ರಮ ಕೈಗೊಳ್ಳಿ: ಸಚಿವ ರಿಜ್ವಾನ್ ಅರ್ಷದ್
ಮೈಸೂರು: ಸಕ್ಕರೆಯ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದಲ್ಲಿ ಪರಿಶೀಲನೆ ನಡೆಸಬೇಕು. ಎಲ್.ಪಿ.ಜಿ ಸಿಲೆಂಡರ್ ಗಳು ನಿಗದಿತ ಸಂಖ್ಯೆಕ್ಕಿAತ ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಣೆಯಾಗಿದ್ದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಿ ಎಂದು ಇಲಾಖೆಯ ಅಧಿಕಾರಿಗಳಿಗೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.ಬುಧವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೈಸೂರು ವಿಭಾಗ ಮಟ್ಟದ ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಅಕ್ರಮ ಆಹಾರ ದಾಸ್ತಾನು…
ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗದಂತೆ ಕಠಿಣ ಕ್ರಮ; ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್
• ಆದಾಯ ತೆರಿಗೆ ಪಾವತಿಸುತ್ತಿದ್ದ ಕಾರಣಕ್ಕೆ ಸುಮಾರು ೪.೫ ಲಕ್ಷ ಪಡಿತರ ಚೀಟಿಗಳನ್ನು ರದ್ದುಮೈಸೂರು: ಆದಾಯ ತೆರಿಗೆ ಪಾವತಿಸುತ್ತಿದ್ದ ಕಾರಣಕ್ಕೆ ಸುಮಾರು ೪.೫ ಲಕ್ಷ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿAದ ಏರ್ಪಡಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ಸುಮಾರು ೪.೫ ಕೋಟಿ ಜನರು ಪಡಿತರ ವ್ಯವಸ್ಥೆಯ ವ್ಯಾಪ್ತಿಯಲ್ಲಿದ್ದು, ಮುಂದಿನ…
ಶ್ರೀಕಂಠೇಶ್ವರನ ದರ್ಶನ ಪಡೆದ ಡಿಸಿಎಂ ಜಿ.ಪರಮೇಶ್ವರ
ನಂಜನಗೂಡು; ಜಿಲ್ಲಾ ಪ್ರವಾಸದ ಎರಡನೇ ದಿನವಾದ ಬುಧವಾರ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು, ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ಐತಿಹಾಸಿಕ ಶ್ರೀ ಕ್ಷೇತ್ರ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.ಶ್ರಿಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ರಾಜ್ಯದ ಜನತೆಗೆ ಒಳಿತಾಗಲಿ ಹಾಗೂ ನಾಡಿನಲ್ಲಿ ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.ಈ ವೇಳೆ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ದೃವನಾರಾಯಣ್ ಅವರು ಜೊತೆಗಿದ್ದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಕ್ಕಳಿಗೆ ವಿಶೇಷ ಸ್ಪರ್ಧೆ
ಸೆ.೫ರಂದು ಚಿಣ್ಣರ ಛದ್ಮವೇಶ ಸ್ಪರ್ಧೆಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಕ್ಕಳಿಗೆ ವಿಶೇಷ ಸ್ಪರ್ಧೆಮೈಸೂರು: ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀ ಕೃಷ್ಣ ಟ್ರಸ್ಟ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಚಿಣ್ಣರ ಛದ್ಮವೇಶ ಸ್ಪರ್ಧೆಯನ್ನು ಸೆ. ೫ರಂದು ಆಯೋಜಿಸಲಾಗಿದೆ.ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣ ಸಭಾಭವನದಲ್ಲಿ ಶನಿವಾರ ಮಧ್ಯಾಹ್ನ ೧ ಗಂಟೆಗೆ ರಾಧಾ, ಕೃಷ್ಣ ಹಾಗೂ ಬಲರಾಮ ವೇಷಗಳಲ್ಲಿ ೧೦ ವರ್ಷದೊಳಗಿನ ಮಕ್ಕಳಿಗಾಗಿ ಸ್ಪರ್ಧೆ ನಡೆಯಲಿದೆ.ಕಾಣಿಯೂರು ಮಠದಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸ್ಪರ್ಧೆಯಲ್ಲಿ…
ಜೆಎಸ್‌ಎಸ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗೆ ಬೆಳ್ಳಿ ಪದಕ – ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಮೈಸೂರು; ರಾಯಚೂರಿನಲ್ಲಿ ಸಿಬಿಎಸ್‌ಇ ವತಿಯಿಂದ ಆಯೋಜಿಸಲಾದ ಕ್ಲಸ್ಟರ್ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರಿನ ಜೆ ಎಸ್ ಎಸ್ ಪಬ್ಲಿಕ್ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿ ಸಮರ್ಥ್ ಎಸ್., ಅತ್ಯುತ್ತಮ ಸಾಧನೆ ಮಾಡಿದ್ದಾರೆ.೧೭ ವರ್ಷದೊಳಗಿನ ವಿಭಾಗದ ೮೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.ಅವರ ಈ ಅತ್ಯುತ್ತಮ ಸಾಧನೆಯ ಹಿನ್ನೆಲೆಯಲ್ಲಿ ಅವರು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವು ಪಂಜಾಬ್ನ ಪಟಿಯಾಲದಲ್ಲಿ ಅ. ೧೫ ರಿಂದ ಅಕ್ಟೋಬರ್ ೨೦ ರವರೆಗೆ…