
ಮೈಸೂರು; ನಾಗರೀಕತೆ ಬೆಳದಂತೆ ಮನುಷ್ಯ ಅಸಹಜನಾಗುತ್ತಿದ್ದಾನೆ ಎಂದು ಶಾಸ್ತಿçÃಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ನೀಲಗಿರಿ ಎಂ ತಳವಾರ ಹೇಳಿದರು.
ನಗರದ ಜೆ.ಎಲ್.ಬಿ ರಸ್ತೆಯಲ್ಲಿರುವ ಮಹಾರಾಜ ಪದವಿಪೂರ್ವ ಕಾಲೇಜಿನ ಆವರಣದಲಿ ಕನ್ನಡ ಉಪನ್ಯಾಸಕ ಜಿಲ್ಲಾ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಸಾಹಿತಿ ಡಾ.ನೀ.ಗೂ.ರಮೇಶ್‌ರವರ “ಸರಳರೇಖೆ” ವ್ಯಕ್ತಿತ್ವ ವಿಕಸನ ಪ್ರಬಂಧಗಳ ಸಂಕಲವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಸಂಕಲವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಆಡಂಬರವೇ ಇಂದಿನ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ನಾಗರೀಕತೆ ಬೆಳದಂತೆ ಮನುಷ್ಯ ಅಸಹಜನಾಗುತ್ತಿದ್ದಾನೆ. ಕೃತಕತೆ ಮತ್ತು ಅಸಹಜತೆ ಇಂದಿನ ಸಮಾಜದ ಲಕ್ಷಣಗಳೇ ಆಗಿವೆ ಎಂದರು. ಸರಳರೇಖೆ ಕೃತಿಯ ಮೂಲಆಶಯ ನಮ್ಮ ಬದುಕು ಸರಳರೇಖೆಯಂತೆ ನೇರ, ಸಹಜ ಮತ್ತು ಪ್ರಾಮಾಣಿಕವಾಗಿರಬೇಕು ಎಂಬ ಸಂದೇಶವನ್ನು ಈ ಕೃತಿ ನೀಡುತ್ತದೆ ಎಂದು ಹೇಳಿದರು.
ಬರಹ ಮತ್ತು ಮಹಾವ್ಯಕ್ತಿಗಳ ಒಡನಾಟವೂ ವ್ಯಕ್ತಿತ್ವವನ್ನು ಶೋಧಿಸಿಕೊಳ್ಳುವ ಕ್ರಿಯೆಯಾಗಿದೆ. ಆಧುನಿಕ ಬದುಕಿನಲ್ಲಿ ಅಗತ್ಯಕ್ಕಿಂತ ಹೆಚ್ಚುಕೊಳ್ಳುವ ಸಂಸ್ಕೃತಿ ಇಂದು ಹೆಚ್ಚಾಗುತ್ತಿದೆ.ಮತ್ತೆ ಮತ್ತೆ ಸಾಲ ಪಡೆಯುವಂತೆ ಸಮಾಜದ ಆರ್ಥಿಕ ವ್ಯವಸ್ಥೆಯು ಪ್ರೇರೇಪಿಸುತ್ತಿದೆ.ಇದರಿಂದ ಮನುಷ್ಯ ಸಹಜ ಬದುಕಿನಿಂದ ದೂರ ಸರಿಯುತ್ತಿದ್ದಾನೆ ಎಂದು ತಿಳಿಸಿದರು.
ಸಂಕಲನ ಕುರಿತುದೇವರಾಜ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡಉಪನ್ಯಾಸಕ ಮಹೇಶ್ ಜಿ ಅವಲೋಕನ ನಡೆಸಿಕೊಟ್ಟರು, ಪ್ರತಿಕ್ರಿಯೆಯಾಗಿ ಕರ್ನಾಟಕಆರೋಗ್ಯ ಸಂವರ್ಧನಾ ಪ್ರತಿಷ್ಠಾನ ಸಂವಹನ ವ್ಯವಸ್ಥಾಪಕಿ ಕು.ಶಾಲಿನಿ ವೈ ಮಾತನಾಡಿದರು.ಕಾರ್ಯಕ್ರಮದಅಧ್ಯಕ್ಷತೆಯನ್ನುಕನ್ನಡಉಪನ್ಯಾಸಕ ವೇದಿಕೆಯಅಧ್ಯಕ್ಷರಾದಕೆಂಪಯ್ಯ ಪಿ ವಹಿಸಿದ್ದರು,ವೇದಿಕೆಯಲ್ಲಿ ಲೇಖಕರಾದಡಾ.ನೀ.ಗೂ.ರಮೇಶ್, ವೇದಿಕೆಯ ಪ್ರಧಾನ ಕಾರ್ಯದರ್ಶಿ ಮಹದೇವ ಆರ್, ಖಜಾಂಚಿ ಕಿರಣ್‌ಕುಮಾರ್.ಎಸ್, ನಿರ್ದೇಶಕಿ ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.