
ಮೈಸೂರು; ಮೈಸೂರಿನ ಅಂಚೆ ವಿಭಾಗದಲ್ಲಿ ಮಾರುಕಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಅಮ್ಮಸಂದ್ರ ಸುರೇಶ್‌ಗೆ ಕೃಷಿ ಪುಸ್ತಕ ಪ್ರಶಸ್ತಿ ಲಭಿಸಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ನೀಡುವ ಪ್ರತಿಷ್ಠಿತ ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ-೨೦೨೫'ಕ್ಕೆ ಹಿರಿಯ ಕೃಷಿ ಸಾಹಿತಿ ಡಾ. ಅಮ್ಮಸಂದ್ರ ಸುರೇಶ್ ಅವರ ಕೃಷಿ ಖುಷಿ’ ಕೃತಿ ಆಯ್ಕೆಯಾಗಿದೆ. ಆಧುನಿಕ ಕೃಷಿ ತಂತ್ರಜ್ಞಾನದ ಮೂಲಕ ರೈತರ ಸ್ವಾವಲಂಬನೆ ಸೇರಿದಂತೆ ವಿವಿಧ ಕೃಷಿ ಅಂಕಣಗಳ ಸಂಗ್ರಹವಾಗಿರುವ `ಕೃಷಿ-ಖುಷಿ’ ಕೃತಿಯು ಕನ್ನಡದ ಕೃಷಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆ ಎಂದು ಪರಿಗಣಸಿ ವಿಶ್ವವಿದ್ಯಾನಿಲಯ ಆಯ್ಕೆ ಸಮಿತಿಯು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಡಾ. ಸುರೇಶ್ ಅವರನ್ನು ಹಲವು ರೈತಪರ ಸಂಘಟನೆಗಳು ಮತ್ತು ಸಾಹಿತ್ಯ ವಲಯ ಅಭಿನಂದನೆಗಳನ್ನು ತಿಳಿಸಿದೆ.