Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಂಬಾ ವಿಲಾಸ ಅರಮನೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್


ಮೈಸೂರು: ನಗರದ ವಿಶ್ವ ಪ್ರಸಿದ್ಧ ಅಂಬಾ ವಿಲಾಸ ಅರಮನೆಯಲ್ಲಿ ಮೈಸೂರಿನ ಯದುವಂಶದ ರಾಜವಂಶಸ್ಥರ ಖಾಸಗಿ ನವರಾತ್ರಿ ಉತ್ಸವಗಳು, ಪೂಜಾ ಕೈಂಕರ್ಯಗಳು ಹಾಗೂ ಖಾಸಗಿ ದರ್ಬಾರ್ ಭಾನುವಾರ ಆರಂಭವಾಯಿತು. ಮೊದಲ ದಿನ ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಂದ ಧಾರ್ಮಿಕ ಪೂಜಾ ವಿಧಿವಿಧಾನಗಳು ಹಾಗೂ ರತ್ನಖಚಿತ ಸಿಂಹಾಸನಕ್ಕೆ ಪೂಜೆಯ ಜೊತೆಗೆ ಖಾಸಗಿ ದರ್ಬಾರ್ ಸಹ ನಡೆಯಿತು.
ಬೆಳಗ್ಗೆ ಅರಮನೆಯಲ್ಲಿ ಗಣಪತಿ ಹೋಮ ಸೇರಿದಂತೆ ಹಲವು ಹೋಮಗಳು ನಡೆದವು. ಬಳಿಕ ಚಂಡಿಕಾ ಹೋಮದ ನಂತರ ಬೆಳಗ್ಗೆ 6 ರಿಂದ 7:12 ನಡುವೆ ನಿಮಿಷಕ್ಕೆ ರತ್ನಖಚಿತ ಸಿಂಹಾಸನಕ್ಕೆ ಸಿಂಹ ಜೋಡಣೆ ಆಯಿತು.
ಬಳಿಕ ಯದುವೀರ್ ಒಡೆಯರ್ ಕಂಕಣಧಾರಣೆ ಮಾಡಿ, ರಾಜ ಪೋಷಾಕಿನೊಂದಿಗೆ ಕಳಸ ಪೂಜೆ ನೆರವೇರಿಸಿ, ನಂತರ ದರ್ಬಾರ್ ಹಾಲ್‌ಗೆ ಬರುತ್ತಿದ್ದಂತೆ, ಹೊಗಳುಭಟರಿಂದ ರಾಜ ಪರಂಪರೆಯ ಬಹುಪರಾಕ್ ನೆರವೇರಿತು. ಬಳಿಕ ರತ್ನಖಚಿತ ಸಿಂಹಾಸನವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಸಿಂಹಾಸನಕ್ಕೆ ಪೂಜೆ ಸಲ್ಲಿಸಿದರು. ಆ ನಂತರ ಸಿಂಹಾಸನದ ಮೇಲೇರಿ ಗೌರವವಂದನೆ ಸ್ವೀಕರಿಸಿ, ವಿವಿಧ ದೇವಾಲಯಗಳಿಂದ ಆಗಮಿಸಿದ ದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸಿದರು. ಆ ಮೂಲಕ ಮೊದಲ ದಿನದ ಖಾಸಗಿ ದರ್ಬಾರ್ ಕೊನೆಗೊಂಡಿತು.
ಇದೇ ರೀತಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಮಹಾರಾಜರು ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಆಯುಧಪೂಜೆಯ ನಂತರ ವಿಜಯದಶಮಿ ಆಚರಣೆ ಮೂಲಕ ನವರಾತ್ರಿಯ ಆಚರಣೆಗಳನ್ನು ಸಂಪನ್ನಗೊಳ್ಳಲಿವೆ.
ಅರಮನೆಯಲ್ಲಿ ನವರಾತ್ರಿಯ ಪೂಜಾ ಕಾರ್ಯಕ್ರಮಗಳು ರಾಜಪರಂಪರೆಯAತೆ ನಡೆಯಲಿವೆ. ಸಿಂಹಾಸನ ಪೂಜೆ ಹಾಗೂ ಖಾಸಗಿ ದರ್ಬಾರ್ ನಂತರ ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಆನೆಯಾದ ಶ್ರೀಕಂಠ ಹಾಗೂ ನಿಶಾನೆ ಆನೆಯಾದ ಏಕಲವ್ಯ ಜೊತೆಗೆ ಮಂಗಳವಾದ್ಯದೊAದಿಗೆ ಕೋಡಿ ಸೋಮೇಶ್ವರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುವುದು ವಿಶೇಷವಾಗಿದೆ. ಈ ಸಂಪ್ರದಾಯ ಪ್ರತಿ ದಿನ ನವರಾತ್ರಿ ಸಂದರ್ಭದ ಒಂಬತ್ತು ದಿನಗಳು ನಡೆಯುತ್ತವೆ.