
ಎಚ್ .ಡಿ.ಕೋಟೆ: ಲೂಕಿನ ಅಣ್ಣೂರು, ಪಡುಕೋಟೆ, ಪಂಚಾಯತ್ ವ್ಯಾಪ್ತಿಯ ಸುಮಾರು 8 ಹಳ್ಳಿಗಳಳ್ಳಿ ಸುಮಾರು 17. 65 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಗುದ್ದಲಿಪೂಜೆ ನೆರವೇರಿಸಿದರು.
ವಿಶ್ವಕರ್ಮ ಕಾಲೋನಿ ಚಿಕ್ಕಪಡುಕೋಟೆ, ಭಾರತೀಪುರ, ಪಡುಕೋಟೆ, ಎಲೆಹುಂಡಿ, ಗಾಂಧಿನಗರ, ಇಂದಿರಾ ನಗರ, ಪಡುಕೋಟೆ, ಕೆ ಎಡತೊರೆ, ಕೈಲಾಸಪುರ, ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮಗಳಿಗೆ ವಿದ್ಯುತ್/ ವೋಲ್ಟೇಜ್ ಸ್ಥಿತಿಯನ್ನು ಸುಧಾರಿಸುವುದು ಮತ್ತು ಅಡಚಣೆ ರಹಿತ ವಿದ್ಯುತ್ ಪೂರೈಕೆ ಮಾಡುವುದು ಮತ್ತು ಈ ಭಾಗದ ರೈತರಿಗೆ ಮತ್ತು ಜನರಿಗೆ ಯಾವುದೇ ರೀತಿಯ ವಿದ್ಯುತ್ ಸಮಸ್ಯೆ ಎದುರಾಗಂದಂತೆ ಶಾಶ್ವತ ಪರಿಹಾರ ನೀಡುವ ಮಹತ್ವಾಕಾಂಕ್ಷೆಯ ವಿದ್ಯುತ್ ಘಟಕಕ್ಕೆ ಚಾಲನೆ ನೀಡಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ಈ ಭಾಗದ ರೈತರಿಗೆ ಮತ್ತು ಜನರಿಗೆ ಅನುಕೂಲ ವಾಗಲಿ ಎಂದು 15. 95 ಕೋಟಿ ವೆಚ್ಚದಲ್ಲಿ 66 KV ಸಬ್‌ಸ್ಟೇಷನ್ ಅನ್ನು ಮಂಜೂರು ಮಾಡಿಸಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುತ್ತಿದ್ದೆವೆ, ಇನ್ನು ಮುಂದೆ ಈ ಭಾಗದ ಪಡುಕೋಟೆ ಕಾವಲು ಪಂಚಾಯತಿ, ಸವ್ವೆ ಪಂಚಾಯತಿ ಮತ್ತು ಅಣ್ಣೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ವಿದ್ಯುತ್ ಸಮಸ್ಯೆ ಇತ್ತು. ಸಂಜೆ 7 ಗಂಟೆಗೆ ಕರೆಂಟ್ ಹೋದರೆ ರಾತ್ರಿ 3 ಗಂಟೆವರೆಗೂ ಬರುತ್ತಿರಲಿಲ್ಲ, ಕೆಲವೊಮ್ಮೆ ಎರಡೆರಡು ದಿನ ಕರೆಂಟ್ ಇರುತ್ತಿರಲಿಲ್ಲ. ಇದು ಹುಣಸೂರಿಗೆ ಫೆಡರೇಶನ್ ಆಗಿದ್ದರಿಂದ ಸಮಸ್ಯೆಇತ್ತು, ಇದು ಕಳೆದ 4-5 ವರ್ಷಗಳಿಂದಲೂ ಸಮಸ್ಯೆ ಎದುರಿಸಲಾಗಿತ್ತು, ಸಬ್‌ಸ್ಟೇಷನ್ ಯೋಜನೆ ಯನ್ನು ಸಮ್ಮಿಶ್ರ ಸರ್ಕಾರದಲ್ಲಿ 8 ಸಬ್‌ಸ್ಟೇಷನ್ ಮಂಜೂರಾಗಿತ್ತು. 2-3 ವರ್ಷದ ಹಿಂದೆಯೇ ಮುಗಿಯಬೇಕಿತ್ತು, ಆದರೆ ಈಗ ನಮ್ಮ ಸರ್ಕಾರ ಬಂದ ಮೇಲೆ ಮತ್ತೆ ಚಾಲನೆ ಸಿಕ್ಕಿದೆ. ಸಚಿವರಾದ ಜಾರ್ಜ್ ಸರ್ ಅವರು ಕಡಿಮೆ ಸಮಯದಲ್ಲಿ ಮಂಜೂರು ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಮತ್ತು ಸಚಿವರಿಗೆ ತಾಲೂಕಿನ ಜನತೆ ಪರವಾಗಿ ಧನ್ಯವಾದ ತಿಳಿಸುತ್ತನೆ. ಈ ಯೋಜನೆಯಿಂದ ಮುಂದಿನ 6 ತಿಂಗಳಲ್ಲಿ 90% ಕರೆಂಟ್ ಸಮಸ್ಯೆ ಈ ಭಾಗದಲ್ಲಿ ಬಗೆಹರಿಯುತ್ತದೆ.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಗಿರೀಗೌಡ, ಎಚ್ ಸಿ ನರಸಿಂಹಮೂರ್ತಿ, ಗುತ್ತಿಗೆದಾರ ಸ್ವಾಮಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಕೆಂಡಗಣ್ಣಸ್ವಾಮಿ, ಟಿಎಪಿಎಂಎಸ್ಎಸ್ ಅಧ್ಯಕ್ಷ ಸೋಮೇಶ್, ಕೊಡಸಿಗೆ ರಾಜೇಗೌಡ, ಕುಮಾರ್, ಸೋಮೆಗೌಡ, ರಾಜಣ್ಣ, ಸ್ವಾಮಿ, ಸೌಮ್ಯ ಮಂಜುನಾಥ್, ಮಿನ್ ನಜೀರ್, ಈರೇಗೌಡ, ರಂಗರಾಜು, ಜಯಶಂಕರ್, ತಂಗರಾಜು, ಕುಲುಮೆರಾಜು, ರಾಮಕೃಷ್ಣ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಜರುದ್ಧಿನ್, ರಾಮಣ್ಣ, ಬಾಲಕೃಷ್ಣ, ಸುಬ್ರಹ್ಮಣ್ಯ, ವಡ್ಡರಗುಡಿ ಕಾರ್ತಿಕ್, ರವಿ, ಗಿರೀಶ್, ದಿವಾಕರ್, ಮಂಜು,ಸೇರಿದಂತೆ ಗ್ರಾಮಸ್ಥರು ಮುಖಂಡರು ಇದ್ದರು,