Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶನಿವಾರ ಮೈಸೂರಿಗೆ ಬರಲಿವೆ 150 ಕೋಣಗಳು; ಕಂಬಳ ಉಪಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ರೈ


ಮೈಸೂರು; ನಾಡ ಹಬ್ಬ ದಸರಾದಲ್ಲಿ ನಡೆಯಲಿರುವ ಎರಡು ದಿನಗಳ ಕಂಬಳ ಕ್ರೀಡೆಗೆ 150 ಕೋಣಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳು ಶನಿವಾರ ಸಂಜೆ ಮೈಸ್ರರಿಗೆ ಆಗಮಿಸಲಿವೆ ಎಂದು ಕಂಬಳ ಉಪಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ರೈ ತಿಳಿಸಿದರು.
ಗುರುವಾರ ಮೈಸೂರಿನ ಸಾತಗಳ್ಳಿಯಲ್ಲಿ ನಿರ್ಮಿಸಲಾಗಿರುವ ಕಂಬಳ ಕ್ರೀಡೆಯ ಟ್ಯಾçಕ್‌ನ್ನು ಹಾಗೂ ಇಲ್ಲಿ ಮಾಡಲಾಗಿರುವ ಸೌಲಭ್ಯಗಳ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕಂಬಳ ಕ್ರೀಡೆಗೆ ಒಟ್ಟು 150 ಕೋಣಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗಿದೆ. ಇದಲ್ಲದೆ ಇನ್ನೂ 150 ಕೋಣಗಳ ಮಾಲೀಕರು ಕ್ರೀಡೆಯಲ್ಲಿ ಭಾಗವಹಿಸಲು ಮುಂದೆ ಬಂದಿದ್ದಾರೆ. ಆದರೆ 150 ಕೋಣಗಳನ್ನು ಮಾತ್ರ ಕ್ರೀಡೆಗೆ ಸೀಮಿತ ಮಾಡಲಾಗಿದೆ. ಹೆಚ್ಚುವರಿಯಾಗಿ ಬಂದಿರುವವರನ್ನು ಪರಿಗಣಿಸುವ ಕುರಿತು ಮೈಸೂರು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಲಾಗುವುದು ಎಂದರು.
ಆಯ್ಕೆಯಾಗಿರುವ 150 ಕೋಣಗಳು ಶನಿವಾರ ಬೆಳಗ್ಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೈಸೂರಿಗೆ ಹೊರಡಲಿವೆ. ಸಕಲೇಶ ಪುರದಲ್ಲಿ 3 ಗಂಟೆಗಳ ವಿಶ್ರಾಂತಿಯನ್ನು ಪಡೆದ ಬಳಿಕ ಸಂಜೆ ಮೈಸೂರಿಗೆ ಆಗಮಿಸಲಿವೆ. ಇಲ್ಲಿ ಕೋಣಗಳ ಮಾಲೀಕರಿಗೆ ಬೇಕಾದಂತ ಶೌಚಾಲಯ, ಕುಡಿಯುವ ನೀರು ಮುಂತಾದ ಸೌಲಭ್ಯಗಳ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ. ಅಲ್ಲದೇ ದಕ್ಷಿಣ ಕನ್ನಡಕ್ಕಿಂತಲೂ ತುಂಬಾ ಚೆನ್ನಾಗಿ ಇಲ್ಲಿ ಕಂಬಳ ಟ್ಯಾçಕ್‌ನ್ನು ನಿರ್ಮಾಣ ಮಾಡಿದ್ದಾರೆ ಎಂದು ಕಂಬಳ ಕ್ರೀಡೆಯ ತಜ್ಞರು ವರದಿ ನೀಡಿದ್ದಾರೆ. ಹಾಗಾಗಿ 48 ಗಂಟೆಗಳ ಕಾಲ ನಿರಂತರವಾಗಿ ಕಂಬಳ ಕ್ರೀಡೆಯನ್ನು ನಡೆಸುತ್ತೇವೆ. ಇಲ್ಲಿಗೆ ಬರುವವರಿಗೆ ಕಂಬಳ ಕ್ರೀಡೆಯ ಮಹತ್ವವನ್ನು ತಿಳಿಸುತ್ತೇವೆ. ಈ ಕ್ರೀಡೆಯನ್ನು ನೋಡಲು ಬರುತ್ತಿರುವ ವಿದೇಶಿಗರಿಗೂ ಇಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ತಿಳಿಸಿದರು.


ನೋಡುಗರನ್ನು ರೋಮಾಂಚನಗೊಳಿಸಿದ ಕಂಬಳ ಪ್ರಾಯೋಗಕ ಓಟ
ಮೈಸೂರು; ನಗರದ ಸಾತಗಳ್ಳಿ ಬಳಿ ದಸರಾ ಕಂಬಳಕ್ಕಾಗಿ ನಿರ್ಮಿಸಿರುವ ವಿಜಯ-ದಶಮಿ ಕರೆ (ಟ್ರಾ÷್ಯಕ್)ನಲ್ಲಿ ಕಂಬಳ ಕೋಣಗಳು ಪ್ರಾಯೊಗಿಕ ಓಟ ನಡೆಸಿ, ನೆರೆದಿದ್ದವರನ್ನು ರೋಮಾಂಚನಗೊಳಿಸಿದವು.
ಮುಚ್ಚೂರು ಕಲ್ಕುಡೆಯಿಂದ ಆಗಮಿಸಿದ್ದ ಕುಶಾಲ ಲೋಕೇಶ್ ಶೆಟ್ಟಿ ಅವರಿಗೆ ಸೇರಿದ ಪೋಲಿ(6), ಪುಟ್ಟು(13) ಜೋಡಿ ಹಾಗೂ ರಂಗ(8) ಮತ್ತು ಬಿಲ್ಲ(8) ಜೋಡಿ ಕೋಣಗಳು ಕರೆಯಲ್ಲಿ ಕಂಬಳ ಓಟ ಓಡಿ ನೋಡುಗರ ಕಣ್ಮನ ಸೆಳೆದವು. ಮಿಂಜಿನ ವೇಗದಲ್ಲಿ ಓಡಿದ ಕೋಣಗಳು ಟ್ರಾö್ಯಕ್ ನಲ್ಲಿದ್ದ ನೀರನ್ನು ಚಿಮ್ಮಿಸಿ ಓಡಿದವು. ಕೋಣಗಳ ಓಟಕ್ಕೆ ಅನುಗುಣವಾಗಿ ಓಟಗಾರರಾದ (ಜಾಕಿ) ಪ್ರಮೋದ್ ಕೋಟಾಂತ್ಯ ಹಾಗೂ ಭರತ್ ಕಾಂತಾವರ್ ಅವರು ಓಡುವ ಮೂಲಕ ಗಮನ ಸೆಳೆದರು.
ಕುಸಿದು ಬಿದ್ದ ಜಾಕಿ; ಕಂಬಳ ಓಟಕ್ಕೆ ಸಜ್ಜಾಗುತ್ತಿದ್ದ ಜಾಕಿಯೊಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದ ಘಟನೆ ನಡೆಯಿತು. ತಕ್ಷಣವೇ ಅಲ್ಲಿದ್ದವರು ಜಾಕಿಗೆ ಪ್ರಥಮ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದರು.