
ಎಚ್ ಡಿಕೋಟೆ : ತಾಲೋಕಿನ ಸಿರಿನಾಡ ವನಸಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮೂವತ್ತೈದು ವರ್ಷ ಮೇಲ್ಪಟ್ಟವರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ.
ಪಂದ್ಯಾವಳಿ ಉದ್ಘಾಟನೆ ಸಂದರ್ಭದಲ್ಲಿ ಅಧ್ಯಕ್ಷ ಭಾಸ್ಕರ್ ಮಾತನಾಡಿ ಎಚ್ ಡಿ ಕೋಟೆ ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಕ್ರೀಡಾಸಕ್ತರು ಸೇರಿ ಸಿರಿನಾಡ ವನಸಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ಅನ್ನು ನೋಂದಾಯಿಸಿಕೊಂಡು ಗ್ರಾಮಾಂತರ ಪ್ರದೇಶದ ಪ್ರತಿಭೆಗಳನ್ನ ಜಿಲ್ಲೆಯಿಂದ ಅಂತಾರಾಷ್ಟ್ರೀಯ ಮಟ್ಟದ ವರೆಗೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ನಿರಂತರವಾಗಿ ಕ್ರೀಡಾ ಚಟುವಟಿಕೆಗಳನ್ನು ಮಾಡುತ್ತಾ ಬರುತ್ತಿದ್ದೇವೆ. ವಿಶೇಷವಾಗಿ ಕಬ್ಬಡಿ ಮತ್ತು ಕ್ರಿಕೆಟ್ ಪಂದ್ಯಾವಳಿ ನಡೆಸಿ ಯಶಸ್ವಿಯಾಗಿದ್ದೆವೆ, ಈ ಸಾಲಿನಲ್ಲಿ ನಮ್ಮ ತಾಲೋಕಿನಲ್ಲಿ ಎಲೆಮರೆ ಕಾಯಿಯಂತೆ ಅಡಗಿರುವ ಯುವ ಪ್ರತಿಭೆಗಳನ್ನ ಗುರುತಿಸಿ ಪ್ರೋತ್ಸಾಹ ಮಾಡುವ ಸಲುವಾಗಿ ಮೂವತ್ತೈದು ವರ್ಷ ಮೇಲಪಟ್ಟವರಿಗೆ ಕ್ರಿಕೆಟ್ ಪಂದ್ಯವನ್ನು ಮೂರು ದಿನಗಳ ಕಾಲ ಅಕ್ಟೋಬರ್ 16 ರಿಂದ 18 ರ ವರೆಗೆ ತಾಲೊಕು ಮಟ್ಟದ “ವನಸಿರಿ ಲೆಜೆಂಡ್ಸ್ ಹೆಸರಿನಲ್ಲಿ” ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸುತ್ತಿದ್ದೆವೆ ಎಂದು ತಿಳಿಸಿದರು.
ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಎಚ್ ಸಿ ನರಸಿಂಹಮೂರ್ತಿ , ಕ್ರೀಡೆ ಯಾರೊಬ್ಬರ ಸ್ವತ್ತಲ್ಲ, ಪ್ರತಿಭೆಗೆ ತಕ್ಕಂತೆ ಅವಕಾಶ ಸಿಗಬೇಕು, ನಮ್ಮ ಹಿಂದುಳಿದ ತಾಲೋಕಿನಲ್ಲಿ ಎಲ್ಲಾ ರಂಗದಲ್ಲಿ, ಎಲ್ಲಾ ಕ್ಷೇತ್ರದಲ್ಲಿಯೂ ಸಾಕಷ್ಟು ಪ್ರತಿಭೆಗಳಿವೆ, ಅಂತಹ ಪ್ರತಿಭೆಗಳನ್ನು ಸೂಕ್ತ ವೇದಿಕೆಯಲ್ಲಿ ಹೊರತರಬೇಕು, ಅವರಿಗೆ ಸೇರಿ ಮಾರ್ಗದರ್ಶನ ನೀಡಿ ಉತ್ತಮ ಅವಕಾಶ ಕಲ್ಪಿಸಿಕೊಂಡಬೇಕು ಈ ಹಿನ್ನೆಲೆಯಲ್ಲಿ ಸಿರಿನಾಡು ವನಸಿರಿ ಟ್ರಸ್ಟ್ ನವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಟ್ರಸ್ಟ್ ನ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಎಚ್ ಸಿ ನರಸಿಂಹಮೂರ್ತಿ, ಟ್ರಸ್ಟ್ ಅಧ್ಯಕ್ಷ ಸಿ. ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಕಾಳೇಗೌಡ ಡಿ, ಕುಮಾರ್, ಸಹ ಕಾರ್ಯದರ್ಶಿ ಮಹದೇವ ರಾಜ್, ನಿರ್ದೇಶಕರಾದ ಜ್ಯೋತೇಶ್, ಮಂಜುನಾಥ್, ಮಂಜು ಮ್ಯಾಕ್ಸಿ, ಶಿವಕುಮಾರ್ ನೂರಲಕುಪ್ಪೆ, ಪ್ರಾಂಶುಪಾಲ ಚಿಕ್ಕಣ್ಣ, ಉಪ ಪ್ರಾಂಶುಪಾಲ ಆನಂದ್, ದಾನಿ ನಾಗೇಗೌಡ, ಹರಿ, ದೊಡ್ಡ ಸಿದ್ದು, ಪ್ರಕಾಶ್ ಬುದ್ದ, ಅನಿಲ್ ಸಿಂಗ್ ಮತ್ತಿತರ ಕ್ರೀಡಾಭಿಮಾನಿಗಳು ಹಾಜರಿದ್ದರು.