Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚಾಮುಂಡಿಬೆಟ್ಟದಿ0ದ ಮೆರವಣಿಗೆ ಮೂಲಕ ಅರಮನೆಗೆ ಬಂದ ಚಾಮುಂಡೇಶ್ವರಿ ಉತ್ಸವ ಮೂರ್ತಿ


ಮೈಸೂರು: ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯ ನೆಲೆವೀಡಾದ ನಗರದ ಚಾಮುಂಡಿಬೆಟ್ಟದಿAದ ಜಂಬೂ ಸವಾರಿಯಲ್ಲಿ ಲಕ್ಷಾಂತರ ಜನರ ಕಣ್ಮನ ಸೆಳೆಯುವ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಅದ್ಧೂರಿ ಮೆರವಣಿಗೆ ಮೂಲಕ ಅಂಬಾವಿಲಾಸ ಅರಮನೆಗೆ ಕರೆತರಲಾಯಿತು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿಯ ದಿನವಾದ ಬುಧವಾರ ಜಂಬೂಸವಾರಿ ಮೆರವಣಿಗೆಯಲ್ಲಿ ಗಜಪಡೆಯ ಕ್ಯಾಪ್ಟನ್ ಪ್ರಶಾಂತ ಆನೆಯ ಬೆನ್ನ ಮೇಲೆ ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗುವ ನಾಡ ಅಧಿ ದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಅಂಬಾವಿಲಾಸ ಅರಮನೆಗೆ ಕರೆತರಲಾಯಿತು.
ನವರಾತ್ರಿ ಆರಂಭಕ್ಕೂ ಮುನ್ನ ಅರಮನೆಯಿಂದ ಚಾಮುಂಡಿಬೆಟ್ಟಕ್ಕೆ ಈ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ, ಅಲ್ಲಿ ಪ್ರಾಣ ಪ್ರತಿಷ್ಠೆ ಮಾಡಿದ ಬಳಿಕ ವಿಶೇಷ ಪೂಜೆಯನ್ನು ನಿತ್ಯವೂ ನೆರವೇರಿಸಲಾಗುತ್ತದೆ. ಬಳಿಕ ಜಂಬೂಸವಾರಿಯ ದಿನವಾದ ಇಂದು ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕೈಂಕಾರ್ಯಗಳನ್ನು ನೆರವೇರಿಸಿ, ಅಲಂಕಾರ ಮಾಡಿದ ಬಳಿಕ, ಅಲಂಕೃತವಾದ ವಾಹನದಲ್ಲಿರುವ ಮಂಟಪದಲ್ಲಿ ಇರಿಸಿ, ಚಾಮುಂಡಿಬೆಟ್ಟದಿAದ ಮೆರವಣಿಗೆ ಮೂಲಕ ಬಿಗಿ ಪೊಲೀಸ್ ಬಂದೋ ಬಸ್ತ್ನಲ್ಲಿ ಕರೆತರಲಾಯಿತು. ಮಾರ್ಗದ ಉದ್ದಕ್ಕೂ ಜನರು ಮೆರವಣಿಗೆಯಲ್ಲಿ ಸಾಗುತ್ತಿದ್ದ ಚಾಮುಂಡೇಶ್ವರಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿ, ಘೋಷಣೆಗಳನ್ನು ಕೂಗಿದರು. ಆದರೆ ಮಂಟಪದೊಳಗೆ ಚಾಮುಂಡೇಶ್ವರಿಯ ಮೂರ್ತಿಯಿದ್ದರೂ ಅದರ ಪಕ್ಕದಲ್ಲಿ, ಮುಂಭಾದಲ್ಲಿ ಜನರು ಹೆಚ್ಚಾಗಿದ್ದರಿಂದ ದಾರಿಯುದ್ದಕ್ಕೂ ರಸ್ತೆಯ ಬದಿಯಲ್ಲಿ ನಿಂತಿದ್ದ ಜನರಿಗೆ ಉತ್ಸವ ಮೂರ್ತಿ ಸರಿಯಾಗಿ ಕಾಣದಾಯಿತು. ಆದರೂ ಕೂಡ ಜನರು ಭಕ್ತಿಯಿಂದ ನಮಿಸಿ, ಜೈ ಚಾಮುಂಡೇಶ್ವರಿ ತಾಯಿ ಎಂದು ಘೋಷಣೆಗಳನ್ನು ಕೂಗಿದರು.
ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಹಸಿರು ಸೀರೆಯಲ್ಲಿ ಬಣ್ಣ, ಬಣ್ಣದ ಹೂವುಗಳಿಂದ ಕಂಗೊಳಿಸುತ್ತಿದ್ದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮಂಟಪದಲ್ಲಿ ಅರಮನೆ ದ್ವಾರದ ಬಳಿ ತರಲಾಯಿತು. ಅಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿಲಾಯಿತು. ಮಹಿಳೆಯರುವ ಆರತಿಯನ್ನು ಬೆಳಗಿ ತಾಯಿ ಚಾಮುಂಡೇಶ್ವರಿ ಸ್ವಾಗತಿಸಿ ಬರಮಾಡಿಕೊಂಡರು. ಬಳಿಕ ಉತ್ಸವ ಮೂರ್ತಿಯನ್ನು ಅರಮನೆಯೊಳಗೆ ತೆಗೆದುಕೊಂಡು ಹೋದಾಗ ರಾಜಮನೆತನದವರು ಪೂಜೆ ನೆರವೇರಿಸಿದರು.