Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿಶೇಷ ಆಹ್ವಾನಿತರಾಗಿ ಬಂದು ಜಂಬೂಸವಾರಿಯ ವೈಭೋಗವನ್ನು ಕಣ್ತುಂಬಿಕೊAಡ 11 ವಿದೇಶಗಳ ರಾಯಭಾರಿಗಳು


ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾಮಹೋತ್ಸವದ ಕೊನೆ ದಿನವಾದ ಬುಧವಾರ ನಡೆದ ಐತಿಹಾಸಿಕ ವೈಭವದ ಜಂಬೂಸವಾರಿಯನ್ನು 11 ವಿದೇಶಗಳ ರಾಯಭಾರಿಗಳು ಕಣ್ತುಂಬಿಕೊAಡರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಬಾರಿಯ ಜಂಬೂಸವಾರಿಗೆ ವಿದೇಶಗಳ ರಾಯಭಾರಿಗಳಿಗೆ ಆಹ್ವಾನ ನೀಡಿದ್ದರು. ಅದರಂತೆ ಅಮೆರಿಕ, ಇಂಗ್ಲೆAಡ್, ಚೀನಾ, ಇಸ್ರೇಲ್ ಸೇರಿದಂತೆ 11 ವಿದೇಶಗಳ ರಾಯಭಾರಿಗಳು ಹಾಗೂ ಪ್ರತಿನಿಧಿಗಳು ಮೈಸ್ರರಿಗೆ ಆಗಮಿಸಿದಾಗ ಅವರನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಆತ್ಮೀಯವಾಗಿ ಬರಮಾಡಿಕೊಂಡರು.
ಬಳಿಕ ಜಂಬೂಸವಾರಿ ವೀಕ್ಷಣೆಗೆಂದು ಅವರಿಗೆ ಪ್ರತ್ಯೇಕವಾದ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಅವರುಗಳು ನಾಡಿನ ಪರಂಪರೆ, ಸಂಸ್ಕೃತಿ, ಪ್ರಕೃತಿ ಮುಂತಾದವುಗಳನ್ನು ಹೊತ್ತು ಸಾಗಿದ ಸ್ತಬ್ದ ಚಿತ್ರಗಳು, ಕಲಾತಂಡಗಳ, ಆನೆಗಳನ್ನು ನೋಡಿ ಕಣ್ತುಂಬಿಕೊAಡು ಸಂತಸ ವ್ಯಕ್ತಪಡಿಸಿದರು.