
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ನಡೆದಿರುವ ಸ್ಟಿಂಗ್ ಆಪರೇಷನ್ ಕಟ್ಟು ಕಥೆ ಎಂದು ಗೃಹ ಸಚಿವರು ಹೇಳುತ್ತಾರೆ. ಆದರೆ ತಪುö್ಪ ಮಾಡಿದ ಮೂಲ ವ್ಯಕ್ತಿಯನ್ನು ಬಂಧಿಸದೆ, ಜೆಡಿಎಸ್ ನಾಯಕರ ಮನೆಗಳಲ್ಲಿ ಮಹಜರು ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ಕಾರ್ಯಾಧ್ಯಕ್ಷರಾದ ಮಾಜಿ ಸಚಿವ ಸಾ.ರಾ. ಮಹೇಶ್ ಆಕ್ಷೇಪ ವ್ಯಕ್ತಪಡಿಸಿದರು.
ಶನಿವಾರ ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬAಧಿಸಿದAತೆ ಅಧಿಕಾರಿಗಳು ಒಂದು ಪಕ್ಷದ ಏಜೆಂಟ್ ರಂತೆ ಕೆಲಸ ಮಾಡಬಾರದು. ವಿಡಿಯೋ ಪ್ರಕರಣಕ್ಕೆ ಸಂಬAಧಿಸಿದAತೆ ಸರ್ಕಾರ ಸ್ಟಿಂಗ್ ವಿಡಿಯೋದಲ್ಲಿರುವ ಮಹಿಳೆಯನ್ನು ಕೂಡಲೇ ಬಂದಿಸಬೇಕೆAದು ಒತ್ತಾಯಿಸಿದರು.
ಸ್ಟಿಂಗ್ ಆಪರೇಷನ್ನಲ್ಲಿ ಸಂತ್ರಸ್ತೆ ಎಂದು ಹೇಳಿಕೊಳ್ಳುವ ಯುವತಿಯನ್ನು ಏಕೆ ಅರೆಸ್ಟ್ ಮಾಡಿಲ್ಲ? ಕೃಪಾ ಆಳ್ವ ಅವರನ್ನು ಯಾಕೆ ಉಚ್ಛಾಟಿಸಿದ್ದೀರಿ? ವಿದೇಶಕ್ಕೆ ಹೋಗಲು ಯಾಕೆ ಸಹಕರಿಸುತ್ತಿದ್ದೀರಿ? ತಪುö್ಪ ಮಾಡಿದವರನ್ನು ಬಿಟ್ಟು ಜೆಡಿಎಸ್ ಅವರನ್ನು ಯಾಕೆ ಅರೆಸ್ಟ್ ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ತಪುö್ಪ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಯಾರೂ ಹೇಳಿಲ್ಲ. ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಕಪುö್ಪ ಚುಕ್ಕೆ ತಂದವರನ್ನು ಹಿಡಿಯಿರಿ ಎಂದು ಕುಮಾರಸ್ವಾಮಿಯವರು ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ತಪುö್ಪ ಮಾಡಿಲ್ಲ ಎಂದಾದರೆ ಕೃಪಾ ಆಳ್ವ ಅವರನ್ನು ಪಕ್ಷದಿಂದ ಏಕೆ ಉಚ್ಛಾಟನೆ ಮಾಡಿದ್ದೀರಿ?, ಆರೋಪ ಸುಳ್ಳು ಎಂದಾದ ಮೇಲೆ ಸಿದ್ದರಾಮಯ್ಯ ಕೋರ್ಟ್ನಲ್ಲಿ ಸ್ಟೇ ಏಕೆ ತಂದಿದ್ದಾರೆ? ಎಂದು ಪ್ರಶ್ನಿಸಿದರು.
ಡಿ.ಕೆ. ಶಿವಕುಮಾರ್ ಅವರು ಕಷ್ಟಪಟ್ಟು ಪಕ್ಷ ಕಟ್ಟಿ ಮುಖ್ಯಮಂತ್ರಿ ಆಗಿದ್ದಾರೆ. ಸಣ್ಣ ಪುಟ್ಟ ಲೋಪವಿದ್ದರೂ ಮೈಸೂರು ದಸರಾವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಸಚಿವ ಡಾ.ಯತೀಂದ್ರ ಅವರು ಹಿರಿಯ ರಾಜಕಾರಣಿಯಾದ ಸಿದ್ದರಾಮಯ್ಯ ಅವರ ಸಲಹೆ ಪಡೆಯಬೇಕು. ರಾಜಕೀಯ ಅಧಿಕಾರ ಬಳುವಳಿಯಾಗಿ ಪಡೆಯುವುದಲ್ಲ, ಮಾರ್ಗದರ್ಶನ ಪಡೆಯಬೇಕು. ರಾಜಮನೆತನದ ಬಗ್ಗೆ ಮಾತನಾಡುವಾಗ ತಿಳಿದು ಹೇಳಿಕೆ ನೀಡಬೇಕು ಎಂದು ಸಲಹೆ ನೀಡಿದರು.