
ಮೈಸೂರು; ಕೇಂದ್ರ ಸರ್ಕಾರ ಸಕ್ಕರೆಗೆ ಎಂಎಸ್ಪಿ ನಿಗದಿ ಮಾಡಬೇಕು. ರಾಜ್ಯ ಸರ್ಕಾರ ಕಬ್ಬಿಗೆ ಎಫ್ಆರ್ಪಿ ನೀಡಬೇಕು ಎಂಬುದು ಸೇರಿದಂತೆ ಶನಿವಾರ ನಗರದಲ್ಲಿ ನೂರಾರು ಮಂದಿ ರೈತರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ನಗರದ ಊಟಿ ಮತ್ತು ಮೈಸೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ರಸ್ತೆ ತಡೆ ನಡೆಸಿ, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು
ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹು೦ಡಿ ಭಾಗ್ಯರಾಜ್ ಮಾತನಾಡಿ, ದೇಶದಲ್ಲಿ ಆರು ಕೋಟಿಗೂ ಹೆಚ್ಚು ಕಬ್ಬು ಬೆಳೆಗಾರರು, ದೇಶದ ಅರ್ಥ ವ್ಯವಸ್ಥೆಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ರಾಜ್ಯಗಳಲ್ಲಿ ಆರ್ಥಿಕ ಪರಿಸ್ಥಿತಿಗೆ ಸಾಕಷ್ಟು ಸಿಂಹ ಪಾಲು ಹೊಂದಿದ್ದು, ಇದರ ಜವಾಬ್ದಾರಿಯುತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರಕ್ಕೆ ಸುಮಾರು ೫೦ ಸಾವಿರ ಕೋಟಿಗೂ ಹೆಚ್ಚು ಆದಾಯ ಕಬ್ಬು ಬೆಳೆಗಾರರಿಂದ ದೊರೆಯುತ್ತಿದೆ. ಆದ ಕಾರಣ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ ೭೦೦ ರೂಪಾಯಿಯನ್ನು ಪ್ರೋತ್ಸಾಹ ಧನವಾಗಿ ನೀಡುತ್ತಿದೆ. ಗುಜರಾತಿನಲ್ಲಿ ೮೦೦ ರೂಪಾಯಿಗಳನ್ನು ನೀಡುತ್ತಿದೆ. ಉತ್ತರ ಪ್ರದೇಶದಲ್ಲಿ ೬೫೦ ನೀಡಲಾಗುತ್ತಿದೆ, ಅದೇ ರೀತಿ ರಾಜ್ಯದಲ್ಲಿ ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ ಒಂದು ಸಾವಿರ ರೂ ಹೆಚ್ಚುವರಿ ಎಫ್ಆರ್ಪಿ ನೀಡಲು ಕ್ರಮ ಕೈಗೊಳ್ಳಬೇಕು. ಬೆಳಗಾವಿಯಲ್ಲಿ ರಾಜ್ಯದ ಕಬ್ಬು ಬೆಳೆಗಾರರನ್ನು ಕರೆಯಿಸಿ ಚರ್ಚೆ ಮಾಡಿದ ಮುಖ್ಯಮಂತ್ರಿಗಳು, ಎರಡು ದಿನದ ಕಾಲಾವಕಾಶವನ್ನು ಪಡೆದು, ಕಬ್ಬು ಬೆಳೆಗಾರರಿಗೆ ರಾಜ್ಯ ಸಲಹಾ ಬೆಲೆ ನೀಡುವ ಬಗೆ ತೀರ್ಮಾನವನ್ನು ಘೋಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಪ್ರಸಕ್ತ ಸಾಲಿಗೆ ಸಕ್ಕರೆ ಎಂಎಸ್ಪಿ ಯನ್ನು ಕೇಂದ್ರ ಸರ್ಕಾರವು ೬,೦೦೦ ನಿಗದಿಗೊಳಿಸಬೇಕು,
ಎಫ್ಆರ್ಪಿ ನಿಗದಿಗೆ ಇರುವ ಇಳುವರಿ ಮಾನದಂಡವನ್ನು ೯.೨೫ ಇಳುವರಿಗೆ ಕೇಂದ್ರ ಸರ್ಕಾರ ದರ ನಿಗದಿಗೆ ಆದೇಶಿಸಬೇಕು, ವಾಣಿಜ್ಯ ಉದ್ದೇಶಕ್ಕೆ ಬಳಕೆ ಆಗುವ ಸಕ್ಕರೆ ದರ ಏರಿಕೆ ಆಗಬೇಕು.
ಸಕ್ಕರೆ ಕಾರ್ಖಾನೆಗಳಿಂದ ಉತ್ಪಾದನೆಯಾಗುವ ಎಥನಲ್ ಎಲ್ಲವನ್ನು ಬೇರೆ ರಾಜ್ಯಗಳ ರೀತಿ ರಾಜ್ಯದಲ್ಲೂ ಖರೀದಿ ಮಾಡಬೇಕು, ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಎಲ್ಲವನ್ನು ಖರೀದಿ ಮಾಡಬೇಕು.
ಕಟಾವು ಸಾಗಣಿಕೆಯನ್ನು ಕಾರ್ಖಾನೆ ಮಾಲೀಕರೇ ಭರಿಸಬೇಕು, ಉತ್ತರ ಮತ್ತು ದಕ್ಷಿಣ ಎಂಬ ನಿಯಮವನ್ನು ಕೈ ಬಿಟ್ಟು , ರಾಜ್ಯದ್ಯಂತ ಇಳುವರಿ ಆದರದ ಮೇಲೆ ದರ ನಿಗದಿ ಮಾಡಿ, ರೈತರಿಗೆ ಕಟಾವು ಸಾಗಾಣಿಕ ಕೂಲಿಯನ್ನು ಕಾರ್ಖಾನೆ ಅವರೇ ಭರಿಸಿದರೆ ಅನುಕೂಲ. ಇದಕ್ಕಾಗಿ ಕಾರ್ಖಾನೆ ಮತ್ತು ರೈತರ ನಡುವೆ ದ್ವಿ ಪಕ್ಷಿ ಒಪ್ಪಂದ ಪತ್ರ ಜಾರಿಯಾಗಬೇಕು, ೧೫ ತಿಂಗಳಾದರೂ ಕಬ್ಬನ್ನು ಕಟಾವು ಮಾಡದೆ ರೈತರಿಗೆ ಇಳುವರಿಯಲ್ಲಿ ಹಾಗೂ ಬ್ಯಾಂಕ್ ಸಾಲ ತೀರಿಸುವಲ್ಲಿ ತೊಂದರೆಯಾಗುವುದು. ಆದ್ದರಿಂದ ಒಪ್ಪಂದ ಪತ್ರದ ರೀತಿ ಹಣ ಪಾವತಿಗೆ ವಿಳಂಬಕ್ಕೆ ಹೆಚ್ಚುವರಿ ಬಡ್ಡಿ ಸೇರಿಸಿಕೊಳ್ಳಲು ಸರಕಾರ ಆದೇಶ ಮಾಡಬೇಕು
ರಾಜ್ಯ ಮತ್ತು ಕೇಂದ್ರ ಸರ್ಕಾರ ಕಬ್ಬಿನ ಬಾಕಿ ಅಥವಾ ಲಾಭಾಂಶ ಹಂಚಿಕೆಯ ಆದೇಶದ ಹಣವನ್ನು ಪಾವತಿ ಮಾಡದ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕಬ್ಬು ಖರೀದಿ ಮಾಡಿದ ೧೪ ದಿನದ ಒಳಗೆ ರೈತರಿಗೆ ಹಣ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಕೆರೆಹುಂಡಿ ರಾಜಣ್ಣ, ಪ್ರಕಾಶ್ ಗಾಂಧಿ, ಹಾಲಿನ ನಾಗರಾಜ್, ಮಾಲಿಯೂರು ಮಹೇಂದ್ರ, ಮುದ್ದಾಳಿ ಮಧು, ಶಿವಣ್ಣ, ಚಿದಂಬರ, ಅಂಡುವಿನಹಳ್ಳಿ ಜಗದೀಶ್, ಮಹೇಶ್, ದೇವಿರಮ್ಮನಹಳ್ಳಿ ಪ್ರಭು, ಸುಜ್ಜಲೂರು ಜಯಸ್ವಾಮಿ, ಹೆಚ್ ಗುಂಡ್ಲಾ ಜಗದೀಶ್, ಊರ್ದಳ್ಳಿ ರಾಮಣ್ಣ, ಶಾನಂಡಳ್ಳಿ ಬಸವರಾಜಪ್ಪ ,ಗುರುಪುರ ಚಂದ್ರಪ್ಪ, ಪುಟ್ಟ ಮಲ್ಲೇಗೌಡ ಸೇರಿದಂತೆ ನೂರಾರು ಮಂದಿ ರೈತರು ಭಾಗವಹಿಸಿದ್ದರು.