ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಹೊರ ವರ್ತುಲ ರಸ್ತೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು; ಕೇಂದ್ರ ಪುರಸ್ಕöÈತ ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಗುರುವಾರ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಹಾಗೂ ಕಸ ಸಂವೇದನಾಶೀಲ ಪ್ರದೇಶಗಳ ಪರಿವರ್ತನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಸವಿತಾ ಎಂ.ಕೆ. ಅವರು ಬೆಳಿಗ್ಗೆ ೭ ಗಂಟೆಗೆ ಹಿನಕಲ್ ಫ್ಲೆöÊಓವರ್‌ನಿಂದ ಪರಿಶೀಲನಾ ಕೆಲಸವನ್ನು ಪ್ರಾರಂಭಿಸಿದರು. ಹೊರ ವರ್ತುಲ ರಸ್ತೆಯ ವಿವಿಧ ಭಾಗಗಳಲ್ಲಿನ ಸ್ವಚ್ಛತೆ, ರಸ್ತೆ ಬದಿಯ ತ್ಯಾಜ್ಯ, ಕಳೆ-ಪೊದೆಗಳ ತೆರವು ಹಾಗೂ ಇತರೆ ನಾಗರಿಕ ಸಮಸ್ಯೆಗಳ ಕುರಿತು ಪರಿಶೀಲನೆ…