Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಂಬಳ, ಕಾವೇರಿ ಆರತಿ, ರೈತರಿಗೆ ೨,೫೦೦ ರೂ ಪರಿಹಾರ ನೀಡುವುದನ್ನು ವಿರೋಧಿಸಿ ರೈತಸಂಘದಿAದ ಬೃಹತ್ ಪ್ರತಿಭಟನೆ

ಮೈಸೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ನಗರದಲ್ಲಿ ರೈತ ಸಂಘ, ರೈತ ಬಣ ಮತ್ತು ಮಹಾ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಮುಂಡಿ ಗೆಸ್ಟ್ ಹೌಸ್ ಮೂಲಕ ಮೆರವಣಿಯಲ್ಲಿ ಹೊರಟ ಪ್ರತಿಭಟನಾಕಾರರು, ಪುರಭವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮತ್ತು ಡಾ.ರಾಜಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತಸಂಘದ(ರೈತಬಣ) ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ,
ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೃಷಿ ಮಾಡಿರುವ ರೈತರ ಬೆಳೆಗಳು ಜಮೀನಿನಲ್ಲೆ ಒಣಗಿಹೋಗಿದೆ. ಕಂಬಳ ಮತ್ತು ಕಾವೇರಿ ಆರತಿಗೆ ಕೊಟಿಗಟ್ಟಲೆ ಖರ್ಚು ಮಾಡುವ ಮುಖ್ಯಮಂತ್ರಿಗಳು ರೈತರಿಗೆ ೨,೫೦೦ ರೂ. ಪರಿಹಾರ ಎಂಬ ಭಿಕ್ಷೆ ನೀಡಿ ಕೈತೊಳೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಇದು ರೈತ ವಿರೋಧಿ ಸರ್ಕಾರ ಎಂದು ಕಿಡಿ ಕಾರಿದರು.
ಕೂಡಲೇ ಒಣ ಭೂಮಿಗೆ ಪ್ರತಿ ಎಕರೆಗೆ ೨೫,೦೦೦ ರೂ. ಹಾಗೂ ನೀರಾವರಿ ಭೂಮಿಗೆ ೫೦,೦೦೦ ರೂ. ಪರಿಹಾರವನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.
ಭೀಕರ ಬರಗಾಲವಿದ್ದರೂ ಮೈಸೂರು ದಸರಾ ಸರಳವಾಗಿ ಆಚರಣೆ ಮಾಡುವ ಬದಲು, ಕಂಬಳ ಮತ್ತು ಕಾವೇರಿ ಆರತಿ ನಡೆಸುವುದು ಸೇರಿದಂತೆ ಕೊಟ್ಯಾಂತರ ಹಣ ನೀಡಿ ಚಿತ್ರನಟರನ್ನು ಕರೆಸಿರುವುದು ಅಸಮಂಜಸ ಮತ್ತು ರೈತವಿರೋಧಿ ನೀತಿಯಾಗಿದೆ.
ಜತೆಗೆ ಮೈಸೂರು ದಸರಾ ಎಂಬುದು ಮೈಸೂರು ಒಡೆಯರ ಕಾಲದಿಂದ ಬಂದ ಐತಿಹಾಸಿಕ ನಾಡಹಬ್ಬ. ಇದರ ಮೂಲ ಸ್ವರೂಪವನ್ನು ಬದಲಿಸಿ, ಕರಾವಳಿ ಭಾಗದ ಕಂಬಳ ಅಥವಾ ವಾರಣಾಸಿ ಮಾದರಿಯ ಕಾವೇರಿ ಆರತಿಯನ್ನು ಇಲ್ಲಿ ಅಳವಡಿಸುವುದು ಮೈಸೂರಿನ ಸ್ಥಳೀಯ ಸಾಂಸ್ಕöÈತಿಕ ಪರಂಪರೆಗೆ ಧಕ್ಕೆ ತರುತ್ತದೆ.
ರೈತರು ಸರ್ಕಾರಕ್ಕೆ ವಿವಿಧ ರೂಪದಲ್ಲಿ ನೀಡಿರುವ ತೆರಿಗೆ ಹಣವನ್ನು ಉತ್ಸವಗಳ ನಿರ್ವಹಣೆಗೆ ಕೋಟ್ಯಂತರ ರೂಪಾಯಿಗಳನ್ನು ಮುಕ್ತವಾಗಿ ಖರ್ಚು ಮಾಡಲಾಗುತ್ತಿದೆ. ಇದೇ ಹಣವನ್ನು ಬರ ಪರಿಹಾರ ನಿಧಿಗೆ ಬಳಸಿಕೊಂಡಿದ್ದರೆ ಸಂಕಷ್ಟದಲ್ಲಿರುವ ಲಕ್ಷಾಂತರ ರೈತರಿಗೆ ನೇರ ನೆರವಾಗುತ್ತಿತ್ತು ಎಂದು ದೂರಿದರು.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ರಾಜ್ಯದ ಎಲ್ಲ ರೈತರ ಸಮಗ್ರ ಸಾಲ ಮನ್ನಾ ಮಾಡಬೇಕು ಮತ್ತು ಘೋಷಿತ ವೈಜ್ಞಾನಿಕ ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟಗಳು ಮುಂದುವರಿಯುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬೀರಪ್ಪ ದೇಶನೂರು, ಬಸವನಗೌಡ, ಚಿನಕುರಳಿ ಸೋಮೇಗೌಡ, ನಿವೃತ್ತ ಡಿವೈಎಸ್‌ಪಿ ನಂಜಪ್ಪ, ವಿಜಯನಗರ ಜಿಲ್ಲೆ ಲೋಕೇಶ್, ಸಿದ್ದಪ್ಪಾಜಿ ನಾಯಕ, ಶಿ ಪ್ರಸಾದ್, ದ್ರಾಕ್ಷಾ ಶಿವರಾಮ್, ಯೋಗೇಶ್ ಮುಂತಾದವರು ಇದ್ದರು.

—-ಕೋಟ್—
ದಸರಾ ಉದ್ಘಾಟನೆಗೆ ದಲಿತ ಸ್ವಾಮೀಜಿಗಳಿಗೆ ಅವಕಾಶ ನೀಡಿ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಇದುವರೆಗೂ ಒಬ್ಬ ದಲಿತ ಸಮುದಾಯದ ಸ್ವಾಮೀಜಿಗಳಿಗೆ ಅವಕಾಶ ನೀಡಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ಸಾರಾ ಸಗಟಾಗಿ ಮತ ಹಾಕುವ ದಲಿತ ಸಮುದಾಯಕ್ಕೆ ಪದೇ ಪದೇ ಅನ್ಯಾಯ ಮಾಡಲಾಗುತ್ತಿದೆ. ಮುಂದಿನ ಬಾರಿ ದಲಿತ ಸಮುದಾಯದ ಸ್ವಾಮೀಜಿಗಳಿಗೂ ದಸರಾ ಉದ್ಘಾಟನೆಗೆ ಅವಕಾಶ ನೀಡಿ, ನಮ್ಮ ರಾಜ್ಯದ ಜಾತ್ಯತೀತ ಪರಂಪರೆಯನ್ನು ಮುನ್ನಡೆಸಿ.
–ಇಂಗಲಗುಪ್ಪೆ ಕೃಷ್ಣೇಗೌಡ, ರಾಜ್ಯಾಧ್ಯಕ್ಷ