Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಹಾಜನ ಕಾಲೇಜಿನಲ್ಲಿ ‘71ನೇ ಕನ್ನಡ ರಾಜ್ಯೋತ್ಸವ ಆಚರಣೆ’

ಮೈಸೂರು; ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಈ ವೇಳೆ ಕಾಲೇಜಿನ ನೂತನ ಪ್ರಾಂಶುಪಾಲರಾದ ಡಾ. ಪುಷ್ಪರಾಣಿ ಪಿ.ಜಿ. ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡುವುದರ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕೆಂದು ಹೇಳಿದರು. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕಿರುವ ಪರಂಪರೆ ಮತ್ತು ಇತಿಹಾಸವನ್ನು ಕಾಪಾಡಿಕೊಳ್ಳುವುದು ಕನ್ನಡಿಗರ ಆದ್ಯಕರ್ತವ್ಯವಾಗಿದೆ ಎಂದರು. ಇಂದಿನ ನವತಂತ್ರಜ್ಞಾನ ಯುಗದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಸ್ತಿತ್ವವನ್ನು ಸ್ಥಳಿಯವಾಗಿ ಮತ್ತು ಜಾಗತಿಕವಾಗಿ ಉಳಿಸುವಲ್ಲಿ ಕನ್ನಡಿಗರೆಲ್ಲರೂ…

Read More

ಸಮರ್ಥನಂ ಸಂಸ್ಥೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

ಮೈಸೂರು: ಇಲ್ಲಿನ ವಿಜಯನಗರ 2ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಆವರಣದಲ್ಲಿ 71ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿ0ದ ಆಚರಿಸಲಾಯಿತು.ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಧ್ವಜಹರಣ ಮಾಡಲಾಯಿತು. ಸಂಸ್ಥೆಯ ಹಿತೈಷಿ ಪ್ರಸಾದ್ ಮಾತನಾಡಿ, ಕನ್ನಡ ಭಾಷೆ ನಮ್ಮ ನಾಡಿನ ಅಸ್ಮಿತೆ ಹಾಗೂ ಸಂಸ್ಕöÈತಿಯ ಪ್ರತೀಕವಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ನಾವೆಲ್ಲರೂ ದೈನಂದಿನ ಜೀವನದಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಕನ್ನಡದ ಬೆಳವಣಿಗೆಗೆ ಕೈಜೋಡಿಸಬೇಕು…

Read More

ವಿಜಯ ವಿಠ್ಠಲ ವಿದ್ಯಾ ಸಂಸ್ಥೆಗಳಲ್ಲಿ ಕನ್ನಡ ಹಬ್ಬದ ಆಚರಣೆ

ಮೈಸೂರು; ನಗರದ ಸರಸ್ವತಿಪುರಂನಲ್ಲಿರುವ ವಿಜಯ ವಿಠ್ಠಲ ವಿದ್ಯಾ ಸಂಸ್ಥೆವತಿಯಿAದ ಭಾನುವಾರ ಕನ್ನಡ ಹಬ್ಬವನ್ನುಅತ್ಯಂತ ವಿಜೃಂಭಣೆಯಿAದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುತ್ತೂರು ಜೆ.ಎಸ್.ಎಸ್. ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಜಿ. ಎಲ್. ತ್ರಿಪುರಾಂತಕ ಮಾತನಾಡಿ, ಕನ್ನಡ ಭಾಷೆಯ ಸಂರಕ್ಷಣೆ ಮತ್ತು ಪ್ರಸಾರದ ಅತ್ಯಗತ್ಯತೆಯನ್ನು ಒತ್ತಿ ಹೇಳಿದರು. ದೈನಂದಿನ ವ್ಯವಹಾರಗಳಲ್ಲಿ ಅದರ ಬಳಕೆಯು ಕ್ಷೀಣಿಸುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದರು. ಕೇವಲ ವರ್ಷಕ್ಕೊಮ್ಮೆ ಆಚರಿಸುವ ಹಬ್ಬಗಳು ಅಥವಾಔಪಚಾರಿಕ ಮನ್ನಣೆಗಳಿಂದ ಮಾತ್ರವೇ ಭಾಷೆ ಜೀವಂತವಾಗಿ ಉಳಿಯಲು ಸಾಧ್ಯವಿಲ್ಲ; ಬದಲಿಗೆ ಪ್ರತಿಯೊಬ್ಬರ ಮನೆಗಳಲ್ಲಿ,…

Read More

ಗಡಿಭಾಗದಲ್ಲಿರುವ ನಾವೆಲ್ಲರೂ ಕನ್ನಡ ಉಳಿಸಿ, ಬೆಳೆಸಬೇಕಾಗಿದೆ ; ಶ್ರೀನಿವಾಸ್ 

ಎಚ್ ಡಿ ಕೋಟೆ :  ಶ್ರೀ ಮಂಜುನಾಥ ಕಾರು, ಟೆಂಪೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ 71 ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಧ್ಯಕ್ಷ ಶ್ರೀನಿವಾಸ್ ಬೂದನೂರು ನೇತೃತ್ವದಲ್ಲಿ ಕನ್ನಡಾಂಬೆಗೆ ನಮಿಸಿ, ಕನ್ನಡ ಧ್ವಜಾರೋಹಣ ಮಾಡಲಾಯಿತು. ಕನ್ನಡಪರ ಜೈಘೋಷ ಮೊಳಗಿಸುತ್ತಾ, ಸಿಹಿ ಹಂಚಿ ಸಂಭ್ರಮಿಸಲಾಯಿತು.  ಶ್ರೀ ಮಂಜುನಾಥ ಕಾರು, ಟೆಂಪೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ  ಶ್ರೀನಿವಾಸ್ ಬೂದನೂರು ಮಾತನಾಡಿ, ಕನ್ನಡ ರಾಜ್ಯೋತ್ಸವ ನಮ್ಮ ಇತಿಹಾಸವನ್ನು ನೆನಪಿಸುವ ದಿನ ಮಾತ್ರವಲ್ಲ, ಅದು ನಮ್ಮ…

Read More

ವೃತ್ತಿಯಲ್ಲಿ ಸಾರ್ಥಕತೆ ಮೆರೆದರೆ ಮಾತ್ರ ನೆಮ್ಮದಿಯಿಂದಿರಲು ಸಾಧ್ಯ: ಪಿ ಪ್ರಶಾಂತ್ ಗೌಡ 

ಪಿರಿಯಾಪಟ್ಟಣ: ಶಾಲೆಗಳಲ್ಲಿ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳಲ್ಲಿನ ಪ್ರತಿಭೆಗಳನ್ನು ಗರುತಿಸುವ, ಸಂಶೋಧಿಸುವ, ಅರಳಿಸುವ, ಪುರಸ್ಕರಿಸುವ, ಉತ್ತೇಜಿಸುವ ಶಕ್ತಿಯನ್ನು ಶಿಕ್ಷಕ ನಿಂಗರಾಜು ಹೊಂದಿದ್ದರು ಎಂದು ನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಪಿರಿಯಾಪಟ್ಟಣ ತಾಲ್ಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಪಿ ಪ್ರಶಾಂತ್ ಗೌಡ ತಿಳಿಸಿದರು. ತಾಲ್ಲೂಕಿನ ಬೆಟ್ಟದಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿಜ್ಞಾನ ಶಿಕ್ಷಕರಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಚಿಕ್ಕ ಹನಸೋಗೆ ನಿಂಗರಾಜು ರವರನ್ನು ಸನ್ಮಾನಿಸಿ ಮಾತನಾಡಿದ ಅವರು ಹುಟ್ಟು ಮತ್ತು…

Read More

ಸದ್ವಿದ್ಯಾ ಶಾಲೆಯಲ್ಲಿ ಕನ್ನಡದ ಕಂಪು; ಭುವನೇಶ್ವರಿ ರಥಕ್ಕೆ ಪುಷ್ಪಾರ್ಚನೆ

ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ ವಿದ್ಯಾರ್ಥಿಗಳು ಮೈಸೂರು: ನಗರದ ನಾರಾಯಣ ಶಾಸ್ತಿç ರಸ್ತೆಯಲ್ಲಿರುವ ಸದ್ವಿದ್ಯಾ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿAದ ಆಚರಿಸಲಾಯಿತು. ಕಾರ್ಯಕ್ರಮವು ನಾಡಗೀತೆಯ ಗಾಯನದೊಂದಿಗೆ ಆರಂಭಗೊAಡಿತು. ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಇತಿಹಾಸ ಹಾಗೂ ನಾಡಿನ ಮಹನೀಯರ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕನ್ನಡದ ಕುರಿತಾದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತಮ್ಮ ಕನ್ನಡ ಜ್ಞಾನವನ್ನು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ನಂತರ ತಾಯಿ ಭುವನೇಶ್ವರಿಯ ರಥಕ್ಕೆ ಪೂಜೆ ಸಲ್ಲಿಸಿ,…

Read More

ಪರಭಾಷಿಗರ ಕೈಯಲ್ಲಿ ಕನ್ನಡದ ಬಾವುಟ, ಬಾಯಲ್ಲಿ ನಾಡಗೀತೆ !

ಮೈಸೂರು: ಕನ್ನಡ ರಾಜ್ಯೋತ್ಸವದ ಸಂಭ್ರಮದ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಗೋಕುಲಂನಲ್ಲಿ ವಿದೇಶಿಯರು ಹಾಗೂ ನೆರೆ ರಾಜ್ಯಗಳಿಂದ ಆಗಮಿಸಿ ಕೆಲಸ ನಿರ್ವಹಿಸುತ್ತಿರುವ ಟೆಕ್ಕಿಗಳಿಗೆ ಕನ್ನಡ ಬಾವುಟಗಳನ್ನು ವಿತರಿಸುವ ಮೂಲಕ ಕನ್ನಡ ಭಾಷೆ, ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ವಿದೇಶಿಯರು ಹಾಗೂ ನೆರೆ ರಾಜ್ಯದ ಟೆಕ್ಕಿಗಳೊಂದಿಗೆ ಸಾಮೂಹಿಕವಾಗಿ ಕರ್ನಾಟಕದ ನಾಡಗೀತೆಯನ್ನು ಹಾಡುವ ಮೂಲಕ ಕನ್ನಡಾಭಿಮಾನ ಮೆರೆದರು. ಅಲ್ಲದೆ ಕರ್ನಾಟಕದ ನೆಲ, ಜಲ, ಕಲೆ, ಸಾಹಿತ್ಯ ಹಾಗೂ ಶ್ರೀಮಂತ ಸಂಸ್ಕöÈತಿಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.ಕನ್ನಡಿಗರಷ್ಟೇ…

Read More

ಕಂಟೇನರ್ ಲಾರಿ ಚಕ್ರಕ್ಕೆ ಸಿಲುಕಿ ಮಹಿಳೆ ಸಾವು

ಮೈಸೂರು: ಕಂಟೇನರ್ ಲಾರಿಯ ಹಿಂಬದಿ ಚಕ್ರ ಹರಿದು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಮೈಸೂರಿನ ಐಪಿಎಸ್ ನಗರ ಸಮೀಪದ ರಿಂಗ್ ರಸ್ತೆಯಲ್ಲಿ ಭಾನುವಾರ ನಡೆದಿದೆ.ಮೈಸೂರಿನ ನಂದಿನಿ ಬಡಾವಣೆ ನಿವಾಸಿ ಮಹಾದೇವಪ್ಪ ಎಂಬವರ ಪತ್ನಿ ಕಾತ್ಯಾಯಿನಿ (57) ಮೃತಪಟ್ಟ ದುರ್ದೈವಿ.ಪತಿ ಮಹಾದೇವಪ್ಪ ಅವರೊಂದಿಗೆ ನಂಜನಗೂಡಿನ ಸಂಬAಧಿಕರ ಮನೆಯ ಶುಭಕಾರ್ಯ ಮುಗಿಸಿಕೊಂಡು, ಸ್ಕೂಟರ್‌ನಲ್ಲಿ ಮೈಸೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಐಪಿಎಸ್ ನಗರದ ರಿಂಗ್ ರಸ್ತೆ ಬಳಿ ಬ್ಯಾರಿಕೇಡ್‌ಗಳನ್ನು ಬಳಸಿ ಮುಂದೆ ಸಾಗುತ್ತಿದ್ದಾಗ, ಪಕ್ಕದಲ್ಲಿ ಬಂದ ಕಂಟೇನರ್ ಲಾರಿ…

Read More

ಜನನ ಮತ್ತು ಮರಣ ಪ್ರಮಾಣಪತ್ರಗಳ ಮನೆಬಾಗಿಲು ವಿತರಣಾ ಸೌಲಭ್ಯದ ಪೋಸ್ಟರ್ ಬಿಡುಗಡೆ

ಮೈಸೂರು; ಮಹಾನಗರ ಪಾಲಿಕೆಯ ವತಿಯಿಂದ ಅಂಚೆ ಮೂಲಕ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ನಾಗರಿಕರ ಮನೆಬಾಗಿಲಿಗೆ ತಲುಪಿಸುವ ನೂತನ ಸೌಲಭ್ಯದ ಪೋಸ್ಟರ್ ಅನ್ನು ಭಾನುವಾರ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.ನಗರದ ಓವಲ್ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಮೈಸೂರು ನಗರದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸಮ್ಮುಖದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಪೋಸ್ಟರ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕಾ÷್ಯನ್ ಮಾಡುವ ಮೂಲಕ ಈ ಸೌಲಭ್ಯಕ್ಕೆ ಸಂಬAಧಿಸಿದ…

Read More

ಒಂದು ವಾರ ಕಾರ್ಯಾಚರಣೆ ನಡೆಸಿ ಸಾತಗಳ್ಳಿ ರಿಂಗ್ ರಸ್ತೆಯ ಬದಿಯಲ್ಲಿದ್ದ ಘನ ತ್ಯಾಜ್ಯಕ್ಕೆ ಮುಕ್ತಿ

ಮೈಸೂರು; ಮಹಾನಗರ ಪಾಲಿಕೆ ಆಯುಕ್ತರು ದಸರಾ ಸಂದರ್ಭದಲ್ಲಿ ರಿಂಗ್ ರೋಡ್ ಸ್ವಚ್ಛತಾ ಹಿ ಸೇವಾ ಕೈಗೊಳ್ಳಲು ನೀಡಿದ ನಿರ್ದೇಶನದ ಮೇರೆಗೆ ವಲಯ 9 ರ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿ ಅರ್ಶಿಯ ಮತ್ತು ಅಧಿಜಾರಿ ಸಿಬ್ಬಂದಿಗಳ ತಂಡ ಸುಮಾರು ಒಂದು ವಾರ ಕಾರ್ಯಾಚರಣೆ ನಡೆಸಿ ಘನತ್ಯಾಜ್ಯಕ್ಕೆ ಮುಕ್ತಿ ನೀಡಿದ್ದಾರೆಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 35ರ ವ್ಯಾಪ್ತಿಯ ಸಾತಗಳ್ಳಿ ರಿಂಗ್ ರಸ್ತೆಯ ಬದಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮತ್ತು ನೆಲಸಮ ಕಾಮಗಾರಿಗಳ ಅವಶೇಷಗಳು, ಮಣ್ಣು, ಕಲ್ಲು, ಇಟ್ಟಿಗೆ ತುಂಡುಗಳು…

Read More