Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಒಂದು ವಾರ ಕಾರ್ಯಾಚರಣೆ ನಡೆಸಿ ಸಾತಗಳ್ಳಿ ರಿಂಗ್ ರಸ್ತೆಯ ಬದಿಯಲ್ಲಿದ್ದ ಘನ ತ್ಯಾಜ್ಯಕ್ಕೆ ಮುಕ್ತಿ


ಮೈಸೂರು; ಮಹಾನಗರ ಪಾಲಿಕೆ ಆಯುಕ್ತರು ದಸರಾ ಸಂದರ್ಭದಲ್ಲಿ ರಿಂಗ್ ರೋಡ್ ಸ್ವಚ್ಛತಾ ಹಿ ಸೇವಾ ಕೈಗೊಳ್ಳಲು ನೀಡಿದ ನಿರ್ದೇಶನದ ಮೇರೆಗೆ ವಲಯ 9 ರ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿ ಅರ್ಶಿಯ ಮತ್ತು ಅಧಿಜಾರಿ ಸಿಬ್ಬಂದಿಗಳ ತಂಡ ಸುಮಾರು ಒಂದು ವಾರ ಕಾರ್ಯಾಚರಣೆ ನಡೆಸಿ ಘನತ್ಯಾಜ್ಯಕ್ಕೆ ಮುಕ್ತಿ ನೀಡಿದ್ದಾರೆ
ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 35ರ ವ್ಯಾಪ್ತಿಯ ಸಾತಗಳ್ಳಿ ರಿಂಗ್ ರಸ್ತೆಯ ಬದಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮತ್ತು ನೆಲಸಮ ಕಾಮಗಾರಿಗಳ ಅವಶೇಷಗಳು, ಮಣ್ಣು, ಕಲ್ಲು, ಇಟ್ಟಿಗೆ ತುಂಡುಗಳು ಹಾಗೂ ಇತರೆ ಘನತ್ಯಾಜ್ಯಗಳನ್ನು ಸುರಿಯಲಾಗುತ್ತಿತ್ತು.
ಇದರಿಂದ ರಸ್ತೆಯ ಸುತ್ತಮುತ್ತಲಿನ ಪರಿಸರದಲ್ಲಿ ಅಶುಚಿತ್ವ ಉಂಟಾಗಿ, ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಸದರಿ ಪ್ರದೇಶದಲ್ಲಿ ಸಂಗ್ರಹವಾಗಿದ್ದ ಕಟ್ಟಡ ತ್ಯಾಜ್ಯ ಮತ್ತು ಕಸವನ್ನು ತೆರವುಗೊಳಿಸಿ, ಸ್ಥಳವನ್ನು ಸ್ವಚ್ಛಗೊಳಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
ಸದರಿ ಸ್ಥಳದಲ್ಲಿ ಸಂಗ್ರಹವಾಗಿದ್ದ ಕಟ್ಟಡ ತ್ಯಾಜ್ಯ, ಮಣ್ಣು, ಕಲ್ಲು, ಅವಶೇಷಗಳು ಹಾಗೂ ಇತರೆ ಸುಮಾರು 1250 ಮೆಟ್ರಿಕ್ ಟನ್ ಕಸವನ್ನು ಟಿಪ್ಪರ್ ವಾಹನಗಳ ಮೂಲಕ ಸಾಗಿಸಿ ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ.
ತ್ಯಾಜ್ಯ ತೆರವುಗೊಳಿಸಿದ ನಂತರ, ಸದರಿ ಪ್ರದೇಶದಲ್ಲಿ ಪುನಃ ಅನಧಿಕೃತವಾಗಿ ಕಟ್ಟಡ ತ್ಯಾಜ್ಯ ಹಾಗೂ ಕಸವನ್ನು ಸುರಿಯುವುದನ್ನು ತಡೆಗಟ್ಟುವ ಉದ್ದೇಶದಿಂದ ರಸ್ತೆಯ ಬದಿಯಲ್ಲಿ ಹಸಿರು ಬಣ್ಣದ ಮೆಶ್ ಬ್ಯಾರಿಕೇಡಿಂಗ್ ಅಳವಡಿಸಲಾಗಿದೆ.
ಈ ಕ್ರಮದಿಂದ ಅನಧಿಕೃತವಾಗಿ ಕಟ್ಟಡ ತ್ಯಾಜ್ಯ ಮತ್ತು ಕಸ ಸುರಿಯುವುದನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ರಸ್ತೆಯ ಬದಿಯ ಪ್ರದೇಶವನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ. ಸಾರ್ವಜನಿಕರಿಗೆ ಸ್ವಚ್ಛ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸಲು ಸಹಾಯವಾಗುತ್ತದೆ. ನಗರದ ಸೌಂದರ್ಯ ಮತ್ತು ಪರಿಸರ ಸ್ವಚ್ಛತೆಯನ್ನು ಕಾಪಾಡಲು ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ತ್ಯಾಜ್ಯ ತೆರವುಗೊಳಿಸುವ ಮರುಕಳಿಸುವ ವೆಚ್ಚವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅಲ್ಲದೆ, ಭವಿಷ್ಯದಲ್ಲಿ ಪುನಃ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟುವ ಉದ್ದೇಶದಿಂದ ಹಸಿರು ಮೆಶ್ ಬ್ಯಾರಿಕೇಡಿಂಗ್ ಅಳವಡಿಸಲಾಗಿದೆ.
ಈ ಕಾಮಗಾರಿಯು ಸ್ವಚ್ಛ ಮೈಸೂರು ಸುಂದರ ಮೈಸೂರು ಪರಿಕಲ್ಪನೆಗೆ ಪೂರಕವಾಗಿದ್ದು, ನಗರದ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಂಡಿರುವ ಮಹತ್ವದ ಕ್ರಮವಾಗಿದೆ ಎಂದು ನಗರಪಾಲಿಕೆಯ ಆಯುಕ್ತೆ ಎಂ.ಕೆ.ಸವಿತಾ ತಿಳಿಸಿದ್ದಾರೆ.