ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಮೈಸೂರು: 2026-27ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಮೈಸೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಖಾಲಿ ಇರುವ ಆಂಗ್ಲ ಭಾಷೆ, ದೈಹಿಕ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.ಈ ಸಂಬAಧ ನಿಗಧಿತ ವಿದ್ಯಾರ್ಹತೆಯನ್ನು ಹೊಂದಿರುವ (ಪದವಿ, ಬಿ.ಇಡಿ. ಮತ್ತು ಟಿ.ಇ.ಟಿ ವಿದ್ಯಾರ್ಹತೆ) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಜುಲೈ 9 ರ ಒಳಗೆ ಅಗತ್ಯ…
Year: 2026
ಹಾರ್ಟ್ ಸಂಸ್ಥೆಯಿ0ದ ಒಂದು ದಿನದ ಅಣಬೆ ಕೃಷಿ ತರಬೇತಿ ಕಾರ್ಯಗಾರಮೈಸೂರು: ಸಮಾಜದಲ್ಲಿ ಸ್ವಯಂ ಉದ್ಯೋಗ ಮತ್ತು ಗ್ರಾಮೀಣ ಆರ್ಥಿಕಾಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಹಾರ್ಟ್ ಸಂಸ್ಥೆವತಿಯಿAದ ಒಂದು ದಿನದ ಅಣಬೆ ಕೃಷಿ ತರಬೇತಿ ಕಾರ್ಯಗಾರವನ್ನು ಜುಲೈ 12 ರಂದು ಆಯೋಜಿಸಲಾಗಿದೆ.ಮೈಸೂರಿನ ಕೋಟೆಹುಂಡಿಪ್ರದೇಶದಲ್ಲಿರುವ ಹಾರ್ಟ್ ಸಂಸ್ಥೆಯ ತರಬೇತಿ ಕಚೇರಿಯಲ್ಲಿ ನಡೆಯಲಿದೆ.ಅಣಬೆ ಬೆಳೆಯುವ ತಂತ್ರಜ್ಞಾನ, ಉತ್ಪಾದನೆ, ಸಂಗ್ರಹಣೆ ಹಾಗೂ ಮಾರುಕಟ್ಟೆ ಕುರಿತು ಪರಿಣಿತರ ಮಾರ್ಗದರ್ಶನದಲ್ಲಿ ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ತರಬೇತಿ ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9353630903ನ್ನು ಸಂಪರ್ಕಿಸಬೇಕೆAದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಂಜನಗೂಡಿನ ಶ್ರೀ ನಂಜು0ಡೇಶ್ವರ ದೇವಾಲಯದಲ್ಲಿ ಸ್ನೇಹಿತರ ಸಮಾಗಮ ಮತ್ತು ಸಮ್ಮಿಲನ ಕಾರ್ಯಕ್ರಮ.
ನಮ್ಮ ಸ್ನೇಹಕ್ಕೆ 20 ವರುಷ, ತಂದಿತು 40 ರಲ್ಲಿ ಹರುಷ.ನಂಜನಗೂಡು; ಸೋಮಹಳ್ಳಿ ಶ್ರೀ ಗಂಗಾಧರೇಶ್ವರ ಡಿ.ಎಡ್ ಕಾಲೇಜಿನಲ್ಲಿ 2005-06 ಸಾಲಿನಲ್ಲಿ ಪ್ರಥಮ ಬ್ಯಾಚ್ ನಲ್ಲಿ ಪ್ರಶಿಕ್ಷಣ ತರಬೇತಿ ಪಡೆದ ಎಲ್ಲಾ ಸ್ನೇಹಿತರು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಸಮಾಗಮಗೊಂಡರು. ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಾಂಶುಪಾಲರಾಗಿದ್ದ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, 20 ವರ್ಷಗಳ ಹಿಂದಿನ ಸವಿ ಸವಿ ನೆನಪು ನೀಡಿದೆ. ಅಂದಿನ ದಿನಗಳನ್ನು ಮೆಲುಕು ಹಾಕಿ, ಮತ್ತೊಮ್ಮೆ ಆ ಕಾಲೇಜಿನ ದಿನಗಳಿಗೆ ಜಾರಿದ್ದವೆ. ಬದುಕಿನ ಜಂಜಾಟದಿAದ ಹೊರಬಂದು ನಕ್ಕಿ…
ಕೊಡಗಿನಲ್ಲಿ ಮಾನವ -ಆನೆ ಸಂಘರ್ಷ ನಿವಾರಣೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಭರವಸೆ: ಸಂಸದ ಯದುವೀರ್ ಒಡೆಯರ್
ಮೈಸೂರು : ಕೊಡಗು ಜಿಲ್ಲೆಯಲ್ಲಿನ ಮಾನವ-ಆನೆ ಸಂಘರ್ಷ ಸಮಸ್ಯೆ ಪರಿಹಾರಕ್ಕೆ ಸಂಬAಧಿಸಿದAತೆ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡುವುದಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಚಿವರು ಭರವಸೆ ನೀಡಿದ್ದಾರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ರವರನ್ನು ಭೇಟಿಯಾಗಿ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದ ಸಚಿವರು ಕೊಡಗಿನ ಅರಣ್ಯ ಅಂಚಿನ ಪ್ರದೇಶಗಳಲ್ಲಿ ರೈತರು,…
ಜವಳಿ ಕ್ಷೇತ್ರದಿಂದ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಸಿಗುತ್ತಿದೆ; ಜವಳಿ ಅಭಿವೃದ್ದಿ ಆಯುಕ್ತ ಎ.ಬಿ.ಬಸವರಾಜು
ಮೈಸೂರು: ಜವಳಿ ಕ್ಷೇತ್ರದಿಂದ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಸಿಗುತ್ತಿದೆ ಎಂದು ಜವಳಿ ಅಭಿವೃದ್ದಿ ಆಯುಕ್ತ ಎ.ಬಿ.ಬಸವರಾಜು ತಿಳಿಸಿದರು.ಶುಕ್ರವಾರ ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜವಳಿ ಮತ್ತು ಕೈಮಗ್ಗ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಾಗತಿಕ ಮಾರುಕಟ್ಟೆಗೆ ಜವಳಿ ಜಿಲ್ಲಾ ಮಟ್ಟದ ಆಂತರಿಕ ಸಲಹಾ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜವಳಿ-ಕೈ ಮಗ್ಗ ಕ್ಷೇತ್ರ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, 2030ಕ್ಕೆ ಕರ್ನಾಟಕದಲ್ಲಿ 75,200 ಕೋಟಿ ರೂ.ನಷ್ಟು ಉತ್ಪನ್ನಗಳನ್ನು ರಫುö್ತಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.1912ರಲ್ಲಿ…
ಎಸ್‌ಐಆರ್ ಕಾರ್ಯಾಚರಣೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸದ ಬಿ.ಎಲ್.ಒಗಳು; ಮಾಜಿ ಮೇಯರ್ ಸಂದೇಶ್‌ಸ್ವಾಮಿ
ಮೈಸೂರು; ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಿನಗಳಿಂದ ಎಸ್‌ಐಆರ್ ಕಾರ್ಯಾಚರಣೆ ನಡೆಸುತ್ತಿರುವ ಕೆಲವು ಬಿ.ಎಲ್.ಒ. ಅಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂದು ಮಹಾನಗರಪಾಲಿಕೆಯ ಮಾಜಿ ಮೇಯರ್ ಸಂದೇಶ್‌ಸ್ವಾಮಿ ಆರೋಪಿಸಿದರು.ಶುಕ್ರವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚುನಾವಣಾ ಆಯೋಗದ ಸೂಚನೆಯಂತೆ ಮನೆ-ಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸಿ ಪರಿಶೀಲನೆ ನಡೆಸಬೇಕಾದ ಬದಲಾಗಿ, ಕೆಲವು ಬಿ.ಎಲ್.ಒ. ಅಧಿಕಾರಿಗಳು ಶಾಲೆಗಳು ಹಾಗೂ ಇತರೆ ಗೌಪ್ಯ ಸ್ಥಳಗಳಲ್ಲಿ ಗುಂಪು-ಗುAಪಾಗಿ ಕುಳಿತುಕೊಂಡು, ಬಿ.ಎಲ್.ಎ.-2ರ ಉಪಸ್ಥಿತಿಯಿಲ್ಲದೆ ಮಧ್ಯವರ್ತಿಗಳ ಮೂಲಕ…
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ನಿರ್ಮೂಲನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ
ಪಿರಿಯಾಪಟ್ಟಣ ; ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ನಿರ್ಮೂಲನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಕಾರ್ಯಕ್ರಮ ವ್ಯಸನ ಮುಕ್ತ ಭಾರತ ನಿರ್ಮಿಸಲು ಸಂಕಲ್ಪ ತೊಡಿ : ಹೆಚ್. ಎನ್ ಸುಧಾಕರ್ಪಿರಿಯಾಪಟ್ಟಣ : ಯುವ ಸಮೂಹ ವ್ಯಸನ ಮುಕ್ತ ಭಾರತ ನಿರ್ಮಿಸಲು ಸಂಕಲ್ಪ ತೊಡಬೇಕು ಎಂದು ಪಿರಿಯಾಪಟ್ಟಣ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಹೆಚ್. ಎನ್ ಸುಧಾಕರ್ ತಿಳಿಸಿದರು. ಪಟ್ಟಣದ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವೆ ಯೋಜನೆ ಘಟಕದ ವತಿಯಿಂದ…
ಕಾಯಿಲೆಗಳ ಪತ್ತೆಗೆ ಆರೋಗ್ಯ ತಪಾಸಣಾ ಶಿಬಿರ ಸಹಕಾರಿ: ಟಿ .ಎಸ್ .ಶ್ರೀವತ್ಸ
ಮೈಸೂರು: ಕಾಯಿಲೆಗಳ ಪತ್ತೆಗೆ ಆರೋಗ್ಯ ತಪಾಸಣಾ ಶಿಬಿರ ಸಹಕಾರಿಯಾಗಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.ಧರ್ಮ ಪ್ರಕಾಶ್ ರಾವ್ ಬಹುದ್ದೂರ್ ಡಿ ಬನುಮಯ್ಯ ಯುವ ಬ್ರಿಗೇಡ್ ವತಿಯಿಂದ ಡಿ ಬನುಮಯ್ಯ ರವರ 166 ನೇ ಜಯಂತಿ ಅಂಗವಾಗಿ ಜುಲೈ 5ರ ಭಾನುವಾರ ಸಮಯ 12 ಗಂಟೆಗೆ ನಗರದ ನ್ಯೂ ಸೈಯಾಜಿ ರಾವ್ ರಸ್ತೆಯಲ್ಲಿರುವ ಡಿ ಬನುಮಯ್ಯ ಕಾಲೇಜಿನ ಆವರಣದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು…
ಮೈಸೂರು ದಸರಾದಲ್ಲಿ `ಕಂಬಳ’ ಆಯೋಜನೆಗೆ ಸಂಸದ ಯದುವೀರ್ ಆಕ್ಷೇಪ
ಮೈಸೂರು: ಈ ಬಾರಿಯ ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸದಲ್ಲಿ ಮೊದಲ ಬಾರಿಗೆ ಕಂಬಳವನ್ನು ಆಯೋಜಿಸುತ್ತಿರುವುದಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ನಾಡ ಹಬ್ಬ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿಚಾರ ಕುರಿತು ಮರು ಚಿಂತನೆ ನಡೆಸುವಂತೆ ಒತ್ತಾಯಿಸಿದ್ದಾರೆ.ಮೈಸೂರಿನ ದಸರಾದಲ್ಲಿ ಕಂಬಳ ನಡೆಸಲು ಚರ್ಚೆ ನಡೆಯುತ್ತಿದೆ. ಕಂಬಳ ಕರಾವಳಿ ಭಾಗದ ಮಣ್ಣು ಸಂಸ್ಕöÈತಿಯ ಸಂಕೇತ. ಇದು ಶತಮಾನಗಳ ಇತಿಹಾಸ ಹೊಂದಿದ್ದು, ತನ್ನದೇ ಆದ…
ಮೈಸೂರಿನ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ
ಮೈಸೂರು; ಇತ್ತೀಚೆಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕುತ್ತಿರುವುದು ಹೆಚ್ಚಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ನಗರದ ಎರಡು ಹೋಟೆಲ್‌ಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಹೆದರಿಸಿದ್ದ ಕಿಡಿಗೇಡಿಗಳು ಗುರುವಾರ ನಗರಿ ಮೈಸೂರಿನ ಚಾಮರಾಜಪುರಂನಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೂ ಸಹ ಬಾಂಬ್ ಬೆದರಿಕೆ ಹಾಕಿದ್ದಾರೆ. ಠಿಚಿvಚಿಟಚಿ.mಚಿಟಟi@ಚಿಣomiಛಿmಚಿiಟ ಎಂಬ ಇ-ಮೇಲ್ ಐಡಿಯಿಂದ ಬೆಳಗಿನ ಜಾವ 01:59 ಗಂಟೆಗೆ ನ್ಯಾಯಾಲಯದ ಅಧಿಕೃತ ಇ-ಮೇಲ್ ಠಿಜರಿmಥಿsuಡಿu@ಞಚಿಡಿಟಿಚಿಣಚಿಞಚಿ.gov.iಟಿ ಗೆ ಈ ಬೆದರಿಕೆ ಸಂದೇಶ ರವಾನೆಯಾಗಿದೆ. ಕೋರ್ಟ್ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್‌ನಲ್ಲಿ ಬರೆಯಲಾಗಿತ್ತು. ವಿಷಯ ತಿಳಿದು…