ಮೈಸೂರು: ಸಾಂಪ್ರದಾಯಿಕ ಬೇರುಗಳಿಲ್ಲದೆ ಆರೋಗ್ಯಕರ ರಾಷ್ಟç ನಿರ್ಮಾಣ ಅಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಹೇಳಿದರು.
ಗುರುವಾರ ಮೈಸೂರಿನ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು , ಮಾನವಿಕ ವಿಭಾಗಗಳು, ಐಕ್ಯೂಎಸಿ ಹಾಗೂ ಕಾಲೇಜಿನ ಐಕೆಎಸ್ ಸೆಲ್ ಸಹಯೋಗದಲ್ಲಿ ಏರ್ಪಡಿಸಿದ್ದ `21ನೇ ಶತಮಾನದಲ್ಲಿ ಸಾಂಪ್ರದಾಯಿಕ ಜ್ಞಾನ ಪದ್ಧತಿಯ ಮರುಸ್ಥಾಪನೆ – ಪರಂಪರೆಯಿAದ ಪ್ರಗತಿಯತ್ತ’ ವಿಚಾರದ ಕುರಿತು ಒಂದು ದಿನದ ರಾಷ್ಟಿçÃಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಕಾಲಮಾನದಲ್ಲಿ ತಾಂತ್ರಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಜ್ಞಾನ ಮತ್ತು ನಮ್ಮ ಸಂಸ್ಕೃತಿ ಅಳಿದು ಹೋಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ ಎಂದರು.
ನಾವು ನಮ್ಮ ಹಿಂದಿನ ಸಾಂಪ್ರದಾಯಿಕ ವಿಚಾರಗಳನ್ನು ಹಾಗೂ ಪೋಷಕರನ್ನು ಗೌರವಿಸುವುದನ್ನು ಮರೆಯುತ್ತಿದ್ದೇವೆ. ಪ್ರತಿಯೊಂದು ಆಚಾರ-ವಿಚಾರದಲ್ಲೂ ಸಂಪ್ರದಾಯ ಅಡಗಿದೆ, ಅದನ್ನು ಕಲಿತು ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕಾಗಿದೆ. ನಾಗರಿಕತೆಯ ಆರಂಭದ ದಿನಗಳಲ್ಲಿ ಮನುಷ್ಯ ಪರಿಸರದೊಂದಿಗೆ ಬೆಸೆದುಕೊಂಡು ಬದುಕಿದ ರೀತಿಯನ್ನು ತಿಳಿದುಕೊಂಡರೆ, ಉತ್ತಮ ಪರಿಸರವನ್ನು ಕಟ್ಟುವುದು ಸಾಧ್ಯ. ನಮ್ಮ ಸಂಪ್ರದಾಯ ಕೇವಲ ನೆನಪಿನ ಸಂಗತಿಯಾಗದೆ, ನಮ್ಮ ದೈನಂದಿನ ಜೀವನದ ಭಾಗವಾಗಬೇಕು. ಆಗ ಮಾತ್ರ ದೇಶದ ಅಭಿವೃದ್ಧಿಗೆ ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮಹಾಜನ ಶಿಕ್ಷಣ ಸಂಸ್ಥೆಯ ಖಜಾಂಚಿ ಎಸ್.ಕೆ. ಸಂಜಯ್ ಮಾತನಾಡಿ, ಪರಂಪರೆ ಎಂಬುದು ನಮಗೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ನಮ್ಮ ಪರಂಪರೆ ಹಳೆಯದಲ್ಲ, ಬದಲಾಗಿ ಕಾಲಮಾನದ ಪ್ರವಾಹದಲ್ಲಿ ಅದು ಕಳೆದುಹೋಗುತ್ತಿದೆ ಅಷ್ಟೇ. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಹೊಂದಿದ್ದ ವಿಜ್ಞಾನವನ್ನು ಇತ್ತೀಚಿನ ಕೃತಕ ಬುದ್ಧಿಮತ್ತೆ (ಎಐ) ಇಂದಿಗೂ ಸಂಪೂರ್ಣವಾಗಿ ಕಂಡುಹಿಡಿಯಲು ಸಾಧ್ಯವಿಲ್ಲ ಎಂದರು.
ಗ್ರಾಮಗಳ ಆಯುರ್ವೇದ ಔಷಧೀಯ ಗುಣಗಳನ್ನು ಕೃತಕ ಬುದ್ಧಿಮತ್ತೆ ನೀಡಲು ಸಾಧ್ಯವಿಲ್ಲವಾದರೂ, ನಮ್ಮ ಭಾರತೀಯ ಜ್ಞಾನ ಪರಂಪರೆಗೆ (ಐಕೆಎಸ್) ಮಾತ್ರ ಅದು ಸಾಧ್ಯ. ಕೃತಕ ಬುದ್ಧಿಮತ್ತೆಯು ಕೇವಲ ಮಾಹಿತಿಯನ್ನು ನೀಡಬಲ್ಲದು, ಆದರೆ ನಮ್ಮ ಪೂರ್ವಜರು ಕಟ್ಟಿಕೊಟ್ಟ ಪರಂಪರೆ ಸರ್ವಕಾಲಕ್ಕೂ ನಿಲ್ಲುತ್ತದೆ. ಹಳೆಯ ಕಾಲದಲ್ಲಿ ವೈದ್ಯರು ಅಪಾರವಾದ ಪ್ರೀತಿ ಮತ್ತು ಕಾಳಜಿಯಿಂದ ರೋಗಿಗಳನ್ನು ಗುಣಪಡಿಸುತ್ತಿದ್ದರು. ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ ಸಾಧ್ಯತೆಗಳನ್ನು ಪರಂಪರೆ ಮತ್ತು ತಂತ್ರಜ್ಞಾನದ ಸಮನ್ವಯತೆಯ ಮೂಲಕ ಹುಡುಕುವ ಕೆಲಸವಾಗಬೇಕು. `ಸಂವೇದನೆಯೇ ಪ್ರಾಯೋಗಿಕತೆ’ ಎಂಬ ಭಾರತದ ಜ್ಞಾನ ಪರಂಪರೆಯನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಆಶಯ ನುಡಿಗಳನ್ನಾಡಿದರು.
ಸಂಕಿರಣದ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ ಹೈದರಾಬಾದ್ನ ಸಿಬಿಐಟಿ ಸಂಸ್ಥೆಯ ಪ್ರೊಫೆಸರ್ ಹಾಗೂ ವಿಎಕೆ ಸಂಯೋಜಕರಾದ ಡಾ. ಜಿ. ಸುರೇಶ್ ಬಾಬು ಮಾತನಾಡಿದರು.
ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಟಿ. ವಿಜಯಲಕ್ಷ್ಮಿ ಮುರಳೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಡೀನ್ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥÀ ಡಾ. ಶ್ರೀಧರ್ ಎಚ್, ಅರ್ಥಶಾಸ್ತç ವಿಭಾಗದ ಮುಖ್ಯಸ್ಥೆ ವೆಂಕಟಲಕ್ಷಿö್ಮ ಎಂ.ಎನ್., ಭೂಗೋಳಶಾಸ್ತç ವಿಭಾಗದ ಮುಖ್ಯಸ್ಥ ಡಾ. ಸೋಮಶೇಖರ ಕೆ.ಕೆ., ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಗೀತಾ ಡಿ., ಐಕೆಎಸ್ ಸೆಲ್ನ ಸಂಯೋಜಕ ಪರಮೇಶ್ವರ ಹೆಗಡೆ, ಅರ್ಥಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪುಷ್ಪರಾಣಿ ಪಿ.ಜಿ., ಭೂಗೋಳಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ದೊಡ್ಡರಸಯ್ಯ ಜಿ. ಮತ್ತು ಡಾ. ಸಿದ್ದರಾಜು ಸಿ.ಎಸ್., ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನಂದೀಶ ಎ.ಆರ್. ಹಾಗೂ ಕಾಲೇಜಿನ ವಿವಿಧ ವಿಭಾಗಗಳ ಅಧ್ಯಾಪಕರು ಉಪಸ್ಥಿತರಿದ್ದರು.
ಸಂಕಿರಣದಲ್ಲಿ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸಿದ್ದ ಅಧ್ಯಾಪಕರು, ಸಂಶೋಧನ ವಿದ್ಯಾರ್ಥಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಾಂಪ್ರದಾಯಿಕ ಬೇರುಗಳಿಲ್ಲದೆ ಆರೋಗ್ಯಕರ ರಾಷ್ಟç ನಿರ್ಮಾಣ ಅಸಾಧ್ಯ – ಪ್ರೊ. ಎನ್.ಕೆ. ಲೋಕನಾಥ್