Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರಿನ ಸಾಹಿತ್ಯ ಓದುಗರು ತಂಡದ ಮೂರನೇ ವರ್ಷದ ವಾರ್ಷಿಕೋತ್ಸವ


ಮೈಸೂರು; ಸಾಹಿತ್ಯ ಪ್ರೇಮಿಗಳು ತಿಂಗಳಿಗೊಮ್ಮೆ ಮೈಸೂರಿನ ಚೆಲುವಾಂಬ ಪಾರ್ಕಿನಲ್ಲಿ ಒಂದೆಡೆ ಸೇರುತ್ತಾರೆ. ಅಂತಹ ಸಾಹಿತ್ಯ ಪ್ರೇಮಿಗಳ ತಂಡದ ಮೂರನೇ ವಾರ್ಷಿಕೋತ್ಸವ ಇದು ನಗರದ ರೋಟರಿ ಭವನದಲ್ಲಿ ನಡೆಯಿತು. ವಿಜ್ಞಾನಿಗಳಾದ ಪ್ರಸನ್ನ ಸಂತೇಕಡೂರು, ಹಿರಿಯ ಕಥೆಗಾರ್ತಿ ಉಷಾ ನರಸಿಂಹನ್, ಕಥೆಗಾರರಾದ ಮಂಜುನಾಥ್ ಕುಣಿಗಲ್ ಹಾಗೂ ಸಂತೋಷ್ ತಾಮ್ರಪರ್ಣಿ ಅನುವಾದಕರಾದ ರವಿ ಬಳೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಂಚಾಲಕರಾದ ಕಿರಣ್ ಮಾತನಾಡಿದರು. ದೀಪು , ಗಿರೀಶ್, ಮೈಸೂರಿನ ಸಾಹಿತ್ಯ ಓದುಗರು ತಂಡದ ಎಲ್ಲಾ ಓದುಗರು ಉಪಸ್ಥಿತರಿದ್ದರು.