
ಸರಗೂರು ; ತಾಲ್ಲೂಕಿನ ಗ್ರಾಮೀಣ ಭಾಗದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದು ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಶಾಸಕನಾಗಿ ನನ್ನ ಮುಖ್ಯ ಕರ್ತವ್ಯವಾಗಿದೆ. ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಉಯ್ಯಂಬಳ್ಳಿ ಗ್ರಾಮದಲ್ಲಿ 20 ಲಕ್ಷದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಾತನಾಡಿದ ಅವರು ಪ್ರತಿವರ್ಷವು ರಸ್ತೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯ ಕಲ್ಪಸಲು ಅಗತ್ಯ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಹಲವಾರು ಗ್ರಾಮಗಳ್ಳಿ ಕಾಮಗಾರಿ ಪೂರ್ಣಗೊಂಡಿದೆ, ನಾನು ಪಕ್ಷಭೇದ ಮರೆತು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ನಿರಂತರವಾಗಿ ಜನರ ಸಂಪರ್ಕದಲ್ಲಿದ್ದು ತಾಲ್ಲೂಕಿನ ನೈಜ ಮತ್ತು ಪ್ರಾಮಾಣಿಕ ಅಭಿವೃದ್ಧಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ, ಆದರು ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ದಿಯಾಗಿಲ್ಲಾ ಎಂಬ ಇಲ್ಲ ಸಲ್ಲದ ಸುದ್ದಿ ಹರಿದಾಡುತ್ತಿದೆ, ಹಾಗೆ ಸರಗೂರು ತಾಲ್ಲೂಕಿನ ಕ್ಷೇತ್ರದ ಯಾವುದೇ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಹಂತ ಹಂತವಾಗಿ ರಸ್ತೆ, ಕುಡಿಯುವ ನೀರು ಮತ್ತು ಚರಂಡಿ ವ್ಯವಸ್ಥೆಯನ್ನು ಸುಧಾರಿಸಲಾಗುತ್ತಿದ್ದು, ನಾನು ಗ್ರಾಮೀಣ ಭಾಗಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಅಭಿವೃದ್ದಿ ಕಾಣದ ಗ್ರಾಮಗಳನ್ನು ಪಟ್ಟಿ ಮಾಡಿ ಮೂಲಬೂತ ಸೌಕರ್ಯಗಳಾದ ರಸ್ತೆ ಚರಂಡಿ, ಶೌಚಾಲಯ, ಇನ್ನಿತರ ಅಭಿವೃದ್ದಿಗಾಗಿ ಅನುದಾನವನ್ನು ತಂದು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ಸಂಶಯಬೇಡ ನಮ್ಮ ತಂದೆ ಚಿಕ್ಕಮಾದು ರವರು ತೊರಿಸಿದ ದಾರಿಯಲ್ಲಿ ಪ್ರಾಮಾಣಿಕವಾಗಿ ಕಲಸ ಮಾಡುತಿದ್ದೇನೆ ಮುಂದೇಯೂ ನನ್ನ ಕಾಯಕ ನಿರಂತರವಾಗಿ ಈ ಕ್ಷೇತ್ರದ ಅಭಿವೃದ್ದಿಗಾಗಿ ದುಡಿಯಲಿದ್ದೇನೆ ಎಂದರು
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಮಾಜಿ ಸದಸ್ಯ ನಾಗರಾಜು, ಮುಖಂಡರಾದ ಕಲ್ಲೇಶ್, ನಾಗಣ್ಣ, ಮಲ್ಲಿಕಾರ್ಜನ, ದೊಡ್ಡಯ್ಯ, ಮಹೇಶ್, ಸಣ್ಣಸ್ವಾಮಿ, ಬಿ.ಸಿ.ರಾಜು, ಆಕನಾಯಕ, ಪುಟ್ಟಸಿದ್ದನಾಯಕ, ಪ್ರಕಾಶ್, ಶಿಲಿಂಗನಾಯಕ, ಉಯ್ಯಂಬಳ್ಳಿ, ಹೊಸಬಿದರಹಳ್ಳಿ, ತೆರಣಿಮಂಟಿ, ಹಾಗೂ ಅಕ್ಕ ಪಕ್ಕದ ಗ್ರಾಮದ ಯಜಮಾನರು,ಮುಖಂಡರು, ಹಾಗೂ ಯುವಕ ಸಂಘದವರು ಕಾಂಗ್ರೇಸ್ ಕಾರ್ಯಕರ್ತರು ಗ್ರಾಮಸ್ಥರು ಬಾಗಿಯಾಗಿದ್ದರು,