
ಮೈಸೂರು; ಕೆಎಎಸ್ ೨೦೨೬ ಪೂರ್ವಭಾವಿ ಪರೀಕ್ಷೆಗೆ ಮೈಸೂರು ನಗರ ಕೇಂದ್ರ ಗ್ರಂಥಾಲಯದ ವತಿಯಿಂದ ಉಚಿತ ಅಣುಕು ಪರೀಕ್ಷೆ ಯನ್ನು ಸೋಮವಾರದಿಂದ ಪ್ರಾರಂಭಿಸಲಾಯಿತು. ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಸಹಯೋಗದಲ್ಲಿ ಮುಂಬರುವ ದಿನಗಳಲ್ಲಿ ಒಟ್ಟು ಆರು ಅಣುಕು ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ.
ಇಂದು ಮೊದಲನೇ ಅಣುಕು ಪರೀಕ್ಷೆಗೆ ಚಾಲನೆ ನೀಡಿದ ಮೈಸೂರಿನ ಅಪರ ಪ್ರಾದೇಶಿಕ ಆಯುಕ್ತ ಡಾ.ಪಿ. ಶಿವರಾಜು ಮಾತನಾಡಿ, ಯಾರೇ ಆದರೂ ಸ್ವ-ಪ್ರತಿಭೆಯಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆ ಆದಲ್ಲಿ, ತಮ್ಮ ಮುಂದಿನ ವೃತ್ತಿ ಜೀವನದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ಖಾಸಗಿ ತರಬೇತಿ ಸಂಸ್ಥೆಗಳು ಬಹಳಷ್ಟು ವಾಣಿಜ್ಯೀಕರಣ ಹೊಂದಿದ್ದು, ಅಂತಹ ಸಂಸ್ಥೆಗಳಲ್ಲಿ ತರಬೇತಿ ಪಡೆಯಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿ ಮೈಸೂರು ನಗರ ಕೇಂದ್ರ ಗ್ರಂಥಾಲಯದವರು ಈ ರೀತಿಯಾದ ಉಚಿತ ಅಣುಕು ಪರೀಕ್ಷೆಗಳನ್ನು ನಡೆಸುವ್ಯದರಿಂದ, ಆರ್ಥಿಕವಾಗಿ ಅಶಕ್ತರಾದವರಿಗೆ ಹಾಗೂ ಗ್ರಾಮೀಣ ಪ್ರದೇಶದ ಉದ್ಯೋಗಾಕಾಂಕ್ಷಿಗಳಿಗೆ ಬಹಳಷ್ಟು ಸಹಾಯವಾಗುತ್ತಿದೆ ಎಂದರು.
ದೆಹಲಿಯ ವಿಷನ್ ಐಪಿಎಸ್ ಸಂಸ್ಥೆಯಲ್ಲಿ ಕಳೆದ ಒಂದು ದಶಕದಿಂದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿರುವ ಮೈಸೂರಿನವರೇ ಆದ ಬಿ. ಶ್ರೀನಿಧಿ ರವರು ಇಂತಹ ಕಾರ್ಯಕ್ರಮಕ್ಕೆ ಕೈಜೋಡಿಸಿರುವುದು ಪ್ರಶಂಸಾರ್ಹ ಎಂದರು. ಉದ್ಯೋಗಾಕಾಂಕ್ಷಿಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ತಂತ್ರಜ್ಞಾನದ ನೆರವನ್ನು ಪಡೆಯುತ್ತಿರುವುದು ಸ್ವಾಗತಾರ್ಹ. ಇಂತಹ ತಂತ್ರಜ್ಞಾನ ಮುಂದಿನ ತಮ್ಮ ವೃತ್ತಿ ಜೀವನಕ್ಕೂ ನೆರವಾಗಬಲ್ಲದು ಎಂದರು. ಸರ್ಕಾರದ ಸೇವೆಗೆ ಸೇರುವ ಎಲ್ಲರೂ ನಿಸ್ವಾರ್ಥವಾಗಿ ಜನರ ಒಳಿತು ಹಾಗೂ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸಿದರೆ ಸಮಾಜದಲ್ಲಿ ಬಹಳಷ್ಟು ಸುಧಾರಣೆಯಾಗುವುದು ಖಚಿತ. ಈ ನಿಟ್ಟಿನಲ್ಲಿ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಮಂಜುನಾಥ್ .ಬಿ ರವರು ನಿಸ್ವಾರ್ಥವಾಗಿ ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳಿಗೆ ನೆರವಿನ ಹಸ್ತ ಚಾಚಿರುವುದು ಒಂದು ಉತ್ತಮ ಉದಾಹರಣೆ ಎಂದರು.
ದೆಹಲಿಯ ವಿಷನ್ ಐಎಎಸ್ ಸಂಸ್ಥೆಯ ಮಾರ್ಗದರ್ಶಕ ಬಿ. ಶ್ರೀನಿಧಿ ಮಾತನಾಡಿ, ಯಾವುದೇ ಆಯ್ಕೆ ಪರೀಕ್ಷೆಯು ಕೇವಲ ಜ್ಞಾನದ ಪರೀಕ್ಷೆಯಾಗದೆ, ಅಭ್ಯರ್ಥಿಯ ವ್ಯಕ್ತಿತ್ವದ ಪರೀಕ್ಷೆಯಾಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಕೇವಲ ಜ್ಞಾನಾರ್ಜನೆಗಷ್ಟೇ ತಮ್ಮನ್ನು ಸೀಮಿತಗೊಳಿಸದೆ, ತಮ್ಮಟ ವ್ಯಕ್ತಿತ್ವವನ್ನು ಮತ್ತು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ನಂತರ ಉದ್ಯೋಗಾಕಾಂಕ್ಷಿಗಳಿಗೆ ಐಎಎಸ್ ಕೆಎಎಸ್ ಪರೀಕ್ಷೆಯ ಯಶಸ್ಸಿನ ಗುಟ್ಟಿನ ಬಗ್ಗೆ ಅನೇಕ ಮಾಹಿತಿಗಳನ್ನು ಒದಗಿಸಿ ಅಭ್ಯರ್ಥಿಗಳ ಮನಸ್ಸಿನಲ್ಲಿದ್ದ ಅನೇಕ ಅನುಮಾನಗಳನ್ನು ಪರಿಹರಿಸಿದರು.
ನಂತರ ಮಾತನಾಡಿದ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಬಿ. ಮಂಜುನಾಥ್, ನಗರ ಕೇಂದ್ರ ಗ್ರಂಥಾಲಯದ ವತಿಯಿಂದ ಇನ್ನು ಮುಂದೆ ನಿರಂತರವಾಗಿ ಕೆ.ಪಿ.ಎಸ್.ಸಿ ಹಾಗು ಇತರೆ ಸಂಸ್ಥೆಗಳು ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬAಧಿಸಿದAತೆ ಅಣುಕು ಪರೀಕ್ಷೆಗಳನ್ನು ಬೆಂಗಳೂರಿನ ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಹಾಗೂ ಶ್ರೀನಿಧಿ ರವರ ನೆರವಿನಲ್ಲಿ ನಡೆಸಲು ಪ್ರಯತ್ನ ಮಾಡಲಾಗುವುದು ಎಂದರು. ನವಂಬರ್ ತಿಂಗಳಲ್ಲಿ ನಡೆಯುವ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳ ಉಪಯೋಗಕ್ಕಾಗಿ ಒಟ್ಟು ಆರು ಅಣುಕು ಪರೀಕ್ಷೆಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ ಪರೀಕ್ಷೆ ತೆಗೆದುಕೊಂಡಿರುವ ಅಭ್ಯರ್ಥಿಗಳು ಇದರ ಸಂಪೂರ್ಣ ಸದುಪಯೋಗ ಪಡೆಯಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ರಮೇಶ್ ನರಸಯ್ಯ, ಪೀಪಲ್ಸ್ ಪಾರ್ಕ್ ನಗರ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕಿ ಸೌಮ್ಯ ಎಸ್. ಮತ್ತು ಸಿಬ್ಬಂದಿಗಳು ಹಾಜರಿದ್ದರು.