
ಮೈಸೂರು; ಟೀಂ ಮೈಸೂರು ವತಿಯಿಂದ ಭಾರತದ ಮಾಜಿ ರಾಷ್ಟçಪತಿ ಹಾಗೂ ಖ್ಯಾತ ತತ್ವಜ್ಞಾನಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜಯಂತಿಯ ಪ್ರಯುಕ್ತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಆದರ್ಶ ಶಿಕ್ಷಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರೊಫೆಸರ್ ಕೃಷ್ಣ ಪ್ರಸಾದ್ , ಜಿಎಸ್‌ಎಸ್ ಕಾಲೇಜಿನ ಶಿಕ್ಷಣ ಉಪನಿರ್ದೇಶಕ ನಿರಂಜನ್ ಮೂರ್ತಿ, ಲೆಕ್ಕಪರಿಶೋಧಕರಾದ ಅಚ್ಯುತ ಹಾಗೂ ಕರಗ ದೇವಸ್ಥಾನದ ಕಾರ್ಯದರ್ಶಿ ಸುಂದರಮೂರ್ತಿ ತಂಡದ ಬಾಲಕೃಷ್ಣ ಹಾಗೂ ಕೃಷ್ಣ ಉಪಸ್ಥಿತರಿದ್ದರುರು.
ಶಿಕ್ಷಕರ ಸೇವೆ, ಸಮರ್ಪಣೆ ಹಾಗೂ ಸಮಾಜ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಸ್ಮರಿಸಿ, ಆದರ್ಶ ಶಿಕ್ಷಕರನ್ನು ಗೌರವಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತಂಡದ ಗೋಕುಲ್ ಗೋವರ್ಧನ್, ಕಿರಣ್ ಜೈರಾಮ್ ಗೌಡ, ಹರೀಶ್ ಬಾಬು, ಹಿರಿಯಣ್ಣ, ಯತೀಶ್, ಪ್ರಸನ್ನ ರಾಜ್ ಗುರು, ಮನೋಹರ್, ನವೀನ್, ಹರೀಶ್ ಶೆಟ್ಟಿ, ಬಾಲಕೃಷ್ಣ, ಬಸವರಾಜ್ ಬಳ್ಳಾರಿ, ಸಂತೋಷ್, ರವಿ, ರಾಘವೇಂದ್ರ, ತಿಲಕ್, ಶೇಖರ್, ಕೃಷ್ಣೋಜಿ ರಾವ್, ಕೃಷ್ಣ ಕೇಬಲ್, ಹರೀಶ್ ಗೋಕುಲಂ, ಹರೀಶ್ ಫಾರ್ಮಾ, ಕರಿಬಸಪ್ಪ, ಉಮಾ, ಇಂದ್ರಾಣಿ, ನಂದಿನಿ, ಮಕ್ಕಳಾದ ತನಿಷ್ಕಾ, ಮಿನುಗು, ಮೌಲ್ಯ, ನಯನೀತ ಹಾಗೂ ಇನ್ನಿತರರು ಭಾಗವಹಿಸಿದ್ದರು.