Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಯುವ ದಸರಾ ಉದ್ಘಾಟಿಸುವುದಕ್ಕೆ ತುಂಬಾ ಖುಷಿಯಾಗುತ್ತಿದೆ:ಚಿತ್ರ ನಟ ಪ್ರಭುದೇವ್


ಮೈಸೂರು: ದಸರಾದಲ್ಲಿ ಆಯೋಜಿಸಲಾಗಿರುವ ಯುವ ದಸರಾವನ್ನು ನಾನು ಉದ್ಘಾಟಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಖ್ಯಾತ ಚಿತ್ರ ನಟ ಪ್ರಭುದೇವ್ ಹೇಳಿದರು.
ಸಾಂಸ್ಕöÈತಿಕ ನಗರಿ ಮೈಸೂರಲ್ಲಿ ಅದ್ಧೂರಿಯಾಗಿ ನಡೆಯಲಿರುವ ಯುವ ದಸರಾ 2026ಕ್ಕೆ ನಟ ಮತ್ತು ನೃತ್ಯ ನಿರ್ದೇಶಕ ಪ್ರಭುದೇವ ಅಕ್ಟೋಬರ್ 13ರಂದು ಚಾಲನೆ ನೀಡಲಿದ್ದಾರೆ. ಈ ಹಿನ್ನಲೆ ಮೈಸೂರಿಗೆ ಆಗಮಿಸಿದ ಅವರನ್ನು ಯುವ ದಸರಾ ಸಮಿತಿಯು ಅದ್ದೂರಿಯಾಗಿ ಸ್ವಾಗತಿಸಿದೆ. ಈ ವೇಳೆ ದಸರಾವನ್ನು ಉದ್ಘಾಟಿಸಿದ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಅವರು ಪ್ರಭುದೇವ್ ಅವರನ್ನು ಭೇಟಿ ಮಾಡಿ, ಆಶೀರ್ವಾದ ಮಾಡಿ, ಕೆಲಕಾಲ ಕುಶಲೋಪರಿ ವಿಚಾರಿಸಿದರು. ಬಳಿಕ
ಮೈಸೂರು ಶ್ರೀ ಸುತ್ತೂರು ಮಠಕ್ಕೆ ಚಿತ್ರ ನಟ ಪ್ರಭುದೇವ್‌ರವರು ತಮ್ಮ ತಾಯಿ ಮಹದೇವಮ್ಮ ಸುಂದರAರವರ ಜೊತೆ ಆಗಮಿಸಿದ್ದ ಸಂದರ್ಭದಲ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಸನ್ಮಾನಿಸಿ ಆಶೀರ್ವದಿಸಿದರು. ಈ ವೇಳೆ ಶ್ರೀಗಳೊಂದಿಗೆ ಕೆಲಕಾಲ ಪ್ರಭುದೇವ್ ಮಾತುಕತೆ ನಡೆಸಿದರು. ಬಳಿಕ ಮಾತನಾಡಿ, ಯುವ ದಸರಾ ಉದ್ಘಾಟಿಸುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ನನಗಿಂತ ಹೆಚ್ಚಾಗಿ ನನ್ನ ಅಪ್ಪ, ಅಮ್ಮ ಖುಷಿಯಾಗಿದ್ದಾರೆ. ನಾನು ಇಲ್ಲಿಯವರೆಗೆ ಕಣ್ಣಾರೆ ಮೈಸೂರು ದಸರಾವನ್ನು ನೋಡೇ ಇರಲಿಲ್ಲ. ಈ ಬಾರಿ ಯುವದಸರಾಗೆ ಆಹ್ವಾನ ಬಂದ ತಕ್ಷಣವೇ ಯಾವುದೇ ಯೋಚನೆ ಮಾಡದೆ ಒಪ್ಪಿಕೊಂಡೆ. ನನಗೆ ಬಹಳ ಸಂತೋಷವಾಗುತ್ತಿದೆ. ದಸರಾದಲ್ಲಿ ಇಷ್ಟು ಅದ್ಭುತವಾದ ಕಾರ್ಯಕ್ರಮಗಳು ಇರುತ್ತವೆ ಅಂತಾ ನನಗೆ ಇಲ್ಲಿ ಬಂದ ಮೇಲೆಯೇ ಗೊತ್ತಾಗಿದ್ದು ಎಂದು ಹೇಳಿದರು.