Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಳೆದ ವರ್ಷದ ದಸರಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಕಾರ್ತಿಕ್ ಅಪರಾಧಿ ಎಂದು ಘೋಷಣೆ


ಮೈಸೂರು: ಕಳೆದ ವರ್ಷ ನಡೆದ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ವೇಳೆ ಬಲೂನ್ ಮಾರಲು ಬಂದಿದ್ದ 9 ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕಾರ್ತಿಕ್ (32) ಅಪರಾಧಿ ಎಂದು ಇದೀಗ ಸಾಬೀತಾಗಿದ್ದು, ದೋಷಿ ಎಂದು ಪರಿಗಣಿಸಿರುವ ಮೈಸೂರಿನ ಶೀಘ್ರಗತಿ ನ್ಯಾಯಾಲಯ, ಶುಕ್ರವಾರ ಮೈಸೂರು ತಾಲೂಕಿನ ಸಿದ್ದಲಿಂಗಪುರದ ನಿವಾಸಿಯಾದ ಕಾರ್ತಿಕ್‌ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ಘಟನೆ ದಿನದಂದು ದಸರಾ ಸಮಯದಲ್ಲೇ ಕೃತ್ಯವೆಸಗಿದ್ದ ಆರೋಪಿಗೆ ಇದೀಗ ದಸರಾ ಮಹೋತ್ಸವ ಸಮಯದಲ್ಲೇ ಶಿಕ್ಷೆ ವಿಧಿಸಿರುವುದು ವಿಶೇಷವಾಗಿದೆ.
ಮೈಸೂರಿನ ದಸರಾದಲ್ಲಿ ಬಲೂನ್, ಬೊಂಬೆ ಮಾರಾಟಕ್ಕೆಂದು ಉತ್ತರ ಕರ್ನಾಟಕದಿಂದ ಹಕ್ಕಿಬಿಕ್ಕಿ ಜನಾಂಗದವರು ಬಂದಿದ್ದರು. ಅರಮನೆ ಮುಂಭಾಗ ದೊಡ್ಡಕೆರೆ ಮೈದಾನದಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ವಾಸವಾಗಿದ್ದರು. ಹೀಗಿರುವಾಗಲೇ ಅಕ್ಟೋಬರ್ 9ರ ಬೆಳಗಿನ ಪೋಷಕರ ಜೊತೆ ನಿದ್ರೆ ಮಾಡುತ್ತಿದ್ದ ಬಾಲಕಿಯನ್ನ ಎತ್ತಿಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಮೈಸೂರಿನ ನಜರಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಸಿಟಿವಿ ದೃಶ್ಯ ಆಧಾರಿಸಿ ಕಾರ್ತಿಕ್ ನನ್ನು ಪೊಲೀಸರು ಘಟನೆ ನಡೆದು 24 ಗಂಟೆಗಳಲ್ಲಿ ಬಂಧಿಸಿದ್ದರು.
ಮೈಸೂರಿನ ಶೀಘ್ರಗತಿ (ಈಖಿSಅ-1) ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಜಯಂತಿ ವಾದ ಮಂಡಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆ ಕಾರ್ತಿಕ್ ಅಪರಾಧಿ ಎಂದು ನ್ಯಾಯಾಧೀಶರಾದ ಅನಿಲ್.ಪಿ ವಘಾಢೆ ಅವರು ತೀರ್ಪು ನೀಡಿದ್ದು, ಶುಕ್ರವಾರ ಅಪರಾಧಿ ಕಾರ್ತಿಕ್‌ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದಾರೆ.
ಕಾರ್ತಿಕ್ ಮೈಸೂರಿನ ಸಿದ್ದಲಿಂಗಪುರದ ನಿವಾಸಿ ಆಗಿದ್ದು, ಮೈಸೂರು-ಕೊಳ್ಳೇಗಾಲ ಮಾರ್ಗದ ಬಸ್‌ನಲ್ಲಿ ಕ್ಲೀನರ್ ಕೂಡ ಆಗಿದ್ದ.