
ಮೈಸೂರು; ಕಬ್ಬಿನ ಎಫ್ ಆರ್ ಪಿ ದರ ಏರಿಕೆ ಒತ್ತಾಯಿಸಿ ಮೈಸೂರಿನ ಎಪಿಎಂಸಿ ಮುಂಭಾಗದಲ್ಲಿ ಗುರುವಾರ ರೈತರು ಕಬ್ಬಿನ ಸೋಗಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಸ್ಥಳದಲ್ಲಿ ಜಮಾಯಿಸಿದ ರೈತರು ಕಬ್ಬಿನ ಸೋಗಿಗೆ ಬೆಂಕಿ ಹಚ್ಚಿ ನಾನಾ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ್,
ಕಬ್ಬು ಬೆಳೆಗಾರರ ಸಮಸ್ಯೆ ಆಲಿಸುವ ರಮೇಶ್ ಚಂದ್ ಸಮಿತಿಯನ್ನು ರೈತರನ್ನ ಬಿಟ್ಟು ರಚಿಸಿರುವುದು ಸಮಂಜಸವಲ್ಲ.ಸಮಿತಿಗೆ ರೈತ ಪ್ರತಿನಿಧಿ ಇರಬೇಕು. ಇಲ್ಲದಿದ್ದರೆ ರೈತರಿಗೆ ನ್ಯಾಯ ಸಿಗುವುದಿಲ್ಲ ಎಂದರು.
ಕಬ್ಬಿನ ಎಫ್ ಆರ್ ಪಿ ದರ ಏರಿಕೆ ನಾಟಕ ಬೇಡ, ಕೇಂದ್ರ ಕೃಷಿ ಬೆಲೆ ಆಯೋಗ ಪ್ರತಿವರ್ಷ ರಾಜ್ಯ ಸರ್ಕಾರಗಳಿಂದ ವರದಿ ಪಡೆಯುತ್ತದೆ. ಇದರ ಅನ್ವಯ ಎಫ್ ಆರ್ ಪಿ ಏರಿಕೆ ಮಾಡಿ. ವಿಳಂಬ ಮಾಡಿದರೆ, ರಾಜ್ಯದ ರೈತರ ಚಳುವಳಿಯ ಆಕ್ರೋಶಕ್ಕೆ ಗುರಿ ಆಗಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.
ಬರಗಾಲದ ಸಂಕಷ್ಟದಲ್ಲಿರುವ ರೈತರ ಕೃಷಿ ಸಾಲ ಮನ್ನಾ ಬಗ್ಗೆ ಬೆಂಗಳೂರಿನಲ್ಲಿ ರೈತರು ಪ್ರತಿಭಟನ ಧರಣಿ ಮಾಡಿದಾಗ,
ಒಂದು ವಾರದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರೈತ ಮುಖಂಡರ ಸಭೆ ಕರೆಯುವ ಭರವಸೆಯನ್ನು ಸಚಿವ ಸತೀಶ್ ಜಾರಕಿಹೊಳಿ ನೀಡಿದ್ದಾರೆ. ಕಾದು ನೋಡುತ್ತೇವೆ ಎಂದರು.
ರಾಜ್ಯದ 217 ತಾಲೂಕು ಭೀಕರ ಬರಗಾಲಕ್ಕೆ ತುತ್ತಾಗಿ ಸುಮಾರು 20 ಲಕ್ಷ ಎಕ್ಟರ್ ಪ್ರದೇಶದಲ್ಲಿ ರೈತರ ಬೆಳೆ ನಾಶವಾಗಿದೆ. ಈ ರೀತಿ ಸಂಕಷ್ಟಕ್ಕೆ ಒಳಗಾದ ರೈತರಿಗೆ ಸರ್ಕಾರದ ಭಿಕ್ಷೆ ಪರಿಹಾರ ಬೇಡ, ಎಂದು ಧರಣಿ ಸ್ಥಳದಲ್ಲಿ ತಲಾ ಒಂದು ರೂ, ಐದು ರೂ ನಾಣ್ಯ ಭಿಕ್ಷೆ ಎತ್ತುವ ಮೂಲಕ 1770 ರೂ ಸಂಗ್ರಹ ಮಾಡಿದ್ದೇವೆ. ಇದನ್ನು ರಾಜ್ಯ ಸರ್ಕಾರಕ್ಕೆ ಡಿಡಿ ಮೂಲಕ ಕಳಿಸುತ್ತೇವೆ ಎಂದರು.
ಸಾಲ ವಶೂಲಾತಿ ಕಿರುಕುಳ ಹೆಚ್ಚಾಗುತ್ತಿದೆ. ಅಂದಾಜು 20,000 ಕೋಟಿ ರೂ.ಗಳಿಗೂ ಅಧಿಕ ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ಮಹಾರಾಷ್ಟç ರಾಜ್ಯದಲ್ಲಿ ಎರಡು ಲಕ್ಷ ರೂ ತನಕ ರೈತರ ಸಾಲ ಮನ್ನಾ ಮಾಡಿದ್ದಾರೆ, ತಮಿಳುನಾಡಿನಲ್ಲಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ರೈತರಿಗೆ ಭೀಕರವಾದ ಕಷ್ಟ ಬಂದಿದೆ ಆದ್ದರಿಂದ ಕೂಡಲೇ ರಾಜ್ಯದಲ್ಲಿ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಪ್ರದೇಶದ ರೈತ ಮಹಿಳೆಯರು ಖಾಸಗಿ ಫೈನಾನ್ಸ್ಗಳಿಂದ ವಾರ ಹಾಗೂ ತಿಂಗಳ ಆಧಾರದ ಮೇಲೆ ಪಡೆದಿರುವ ಸಾಲಗಳ ಮರುಪಾವತಿಸಲು ಕಷ್ಟವಾಗುತ್ತಿದೆ. ಬರಗಾಲದ ಸಂಕಷ್ಟ ಕಾರಣ ಇಂತಹ ಸಾಲದ ವಸೂಲಾತಿಯನ್ನು ಮುಂದಿನ ಎರಡು ವರ್ಷಗಳವರೆಗೆ ಸ್ಥಗಿತಗೊಳಿಸಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ವರಕೂಡ್ ನಾಗೇಶ್, ಲಕ್ಷಿ÷್ಮಪುರ ವೆಂಕಟೇಶ್ ,
ವಿಜೇಂದ್ರ ದೇವನೂರು. ಗೌರಿಶಂಕರ್. ನೀಲಕಂಠಪ್ಪ, ಲಕ್ಷಿ÷್ಮÃಪುರ ವೆಂಕಟೇಶ್, ವರಕೋಡು ನಾಗೇಶ್, ಕುರುಬೂರು ಸಿದ್ದೇಶ್, ಕೆಂಡಗಣಪ್ಪ,, ಕುರುಬೂರು ಪ್ರದೀಪ್, ಪರಶಿವಮೂರ್ತಿ, ಗೌರಿಶಂಕರ್, ಪ್ರಸಾದ್ ನಾಯಕ ಸೇರಿದಂತೆ 200 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.