
ಎಚ್ .ಡಿ. ಕೋಟೆ: ಪಟ್ಟಣದ ವಾರ್ಡ್ ನಂಬರ್ 21 ವಡ್ಡರ ಗುಡಿ ( ಲಕ್ಷ್ಮಿಪುರ) ಗ್ರಾಮದಲ್ಲಿ ವಿಜೃಂಭಣೆಯಿಂದ ನವರಾತ್ರಿ ಉತ್ಸವವನ್ನು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನೆರವೇರಿಸಲಾಯಿತು. ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಗುರವಾರ ಬೆಳೆಗ್ಗೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಜನೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ಮನೆಮನೆಯಿಂದ ಹೂಗಳನ್ನು ತಂದು ದೇವರ ವಿಗ್ರಹ ಅಲಂಕರಿಸಿ ಭಕ್ತಿ ಪೂರ್ವಕವಾಗಿ ನಮಿಸಿದರು.
ಸರ್ವಧರ್ಮದ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ನೆಲೆಸಿ, ಸುಖ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ದೇವರಲ್ಲಿ ಊರಿನ ಗ್ರಾಮಸ್ಥರು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ವೆಂಕಟೇಶ್, ರಘು, ಶೇಖರ್, ಗೋಪಾಲ್, ಮಣಿ, ಪಾರ್ವತಮ್ಮ, ಕಾಳಮ್ಮ, ಹೇಮಾವತಿ, ವೆಂಕಟಲಕ್ಷ್ಮಿ, ರಾವಣಮ್ಮ ಸೇರಿದಂತೆ ಅನೇಕ ಮಂದಿ ಇದ್ದರು.