
ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ 6 ನೇ ದಿನವಾದ ಶುಕ್ರವಾರ ಯೋಗಾ ದಸರಾ ನಡೆಯಿತು.
ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದ ಪಿ ಕಾಳಿಂಗ ರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಯೋಗಾಸನ ಸ್ವರ್ಧೆಯಲ್ಲಿ ನೂರಾರು ಮಂದಿ ಭಾಗವಹಿಸಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು. ವಿದೇಶಿಯರು ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿ ಯೋಗಾಸನಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಯೋಗ ದಸರಾ 2026 ನೋಂದಣಿ;
ಕರ್ನಾಟಕ ಸರ್ಕಾರದ ಯೋಗ ದಸರಾ ಉಪಸಮಿತಿ ಆಯೋಜಿಸಿರುವ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಒಟ್ಟು 1,526 ಸ್ಪರ್ಧಿಗಳು ನೋಂದಾಯಿಸಿಕೊAಡಿದ್ದಾರೆ. ನೋಂದಾಯಿತ ಒಟ್ಟು ಸ್ಪರ್ಧಿಗಳಲ್ಲಿ 851 ಮಹಿಳೆಯರು/ಬಾಲಕಿಯರು (55.8% ಅಥವಾ ಸುಮಾರು 56%) ಹಾಗೂ 675 ಪುರುಷರು/ಬಾಲಕರು (44.2% ಅಥವಾ ಸುಮಾರು 44%) ಇದ್ದಾರೆ. ಅಲ್ಲದೆ, ಈ ಸ್ಪರ್ಧೆಯಲ್ಲಿ 93 ವಿಶೇಷ ಚೇತನ ಸ್ಪರ್ಧಿಗಳು, ಕರ್ನಾಟಕದ 30 ಜಿಲ್ಲೆಗಳ ಸ್ಪರ್ಧಿಗಳು ಹಾಗೂ 78 ವರ್ಷದ ಹಿರಿಯ ಸ್ಪರ್ಧಿಯೂ ಭಾಗವಹಿಸುತ್ತಿದ್ದಾರೆ.
ವಯೋಮಾನ ಹಾಗೂ ವಿಭಾಗವಾರು ವಿವರಗಳು
ಒಟ್ಟು 1,526 ಸ್ಪರ್ಧಿಗಳಲ್ಲಿ 1,011 ಮಂದಿ (66%) 8 ರಿಂದ 18 ವರ್ಷದೊಳಗಿನ ಕಿರಿಯ ವಯಸ್ಸಿನವರಾಗಿದ್ದಾರೆ (ವಿಭಾಗ 1 ರಿಂದ 4) ವಯೋಮಾನದ ಆಧಾರದಲ್ಲಿ ಒಟ್ಟು 12 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ವಿಭಾಗ 2ರಲ್ಲಿ (10?12 ವರ್ಷ) ಗರಿಷ್ಠ 326 ಸ್ಪರ್ಧಿಗಳು ನೋಂದಾಯಿಸಿಕೊAಡಿದ್ದಾರೆ. 65 ವರ್ಷಕ್ಕಿಂತ ಮೇಲ್ಪಟ್ಟವರ ವಿಭಾಗದಲ್ಲಿ (ವಿಭಾಗ 11) 38 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಹಾಗೆಯೇ ಯಾವುದೇ ವಯೋಮಿತಿಯಿಲ್ಲದ ವಿಶೇಷ ಚೇತನರ ವಿಭಾಗದಲ್ಲಿ (ವಿಭಾಗ 12) ಒಟ್ಟು 93 ಸ್ಪರ್ಧಿಗಳು (42 ಮಹಿಳೆಯರು ಮತ್ತು 51 ಪುರುಷರು) ನೋಂದಾಯಿಸಿಕೊAಡಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ,
ಯೋಗಕ್ಕೆ ಜಾತಿ, ಧರ್ಮ ಹಾಗೂ ವಯಸ್ಸಿನ ಯಾವುದೇ ಅಂತರವಿಲ್ಲ. ಯಾವುದೇ ವಯಸ್ಸಿನವರು ಬೇಕಾದರೂ ಯೋಗವನ್ನು ಮಾಡಬಹುದು ಎಂದು ಹೇಳಿದರು.
ಮೈಸೂರಿನಲ್ಲಿ ಅನೇಕ ಯೋಗ ಬಂಧುಗಳು ಹಾಗೂ ಶಿಕ್ಷಕರು ಉಚಿತವಾಗಿ ಯೋಗವನ್ನು ಹೇಳಿಕೊಡುತ್ತಾ ಸಮಾಜವನ್ನು ಆರೋಗ್ಯವಂತರನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ. ಸರ್ಕಾರವು ಅತ್ಯಂತ ಉತ್ತಮ ರೀತಿಯಲ್ಲಿ ದಸರಾ ಕಾರ್ಯಕ್ರಮದ ಮುಖಾಂತರ ಯೋಗವನ್ನು ಹಾಗೂ ಯೋಗದಸರವನ್ನು ಹಮ್ಮಿಕೊಂಡು, ಇದರ ಮುಖಾಂತರ ರಾಜ್ಯಮಟ್ಟದ ಸಂದೇಶವನ್ನು ನೀಡಲು ಆನ್ಲೈನ್ ರಿಜಿಸ್ಟೆçÃಷನ್ ಮೂಲಕ ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ ಎಂದರು.
ಜೂನ್ 21ರಂದು ಮೈಸೂರಿನ ಅರಮನೆಯ ಮುಂಭಾಗ ಹಾಗೂ ಇಡೀ ಮೈಸೂರಿನಲ್ಲಿ ಸುಮಾರು 15,000ಕ್ಕೂ ಹೆಚ್ಚು ಜನ ಹಾಗೂ ಇಡೀ ಮೈಸೂರಿನ ವಿವಿಧ ಕಡೆಗಳಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಯೋಗವನ್ನು ಮಾಡುವ ಮೂಲಕ ದೊಡ್ಡ ಯಶಸ್ಸು ಕಂಡಿದೆ. ಮುಂಬರುವ 2027ರ ಅಂತರರಾಷ್ಟಿçÃಯ ಯೋಗ ದಿನಾಚರಣೆಗೆ ಇಡೀ ರಾಜ್ಯದಲ್ಲಿ 2 ಕೋಟಿ ಜನ ಯೋಗ ಮಾಡುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಯೋಗ ದಸರ ಉಪ ಸಮಿತಿ ಹಾಗೂ ಉಪ ವಿಶೇಷ ಅಧಿಕಾರಿ ರಮ್ಯಾ ಕೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯುಬ್ ಖಾನ್, ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ರುದ್ರೇಶ್, ಕಾರ್ಯಾಧ್ಯಕ್ಷ ನಿರೂಪ್ ವೆಸ್ಲಿ, ಕಾರ್ಯದರ್ಶಿ ಡಾ. ರೇಣುಕಾ ದೇವಿ ಸಿ, ಮೈಸೂರು ಯೋಗ ಕೂಟದ ಅಧ್ಯಕ್ಷ ರಮೇಶ್, ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ಪಶುಪತಿ, ಯೋಗ ದಸರಾ ಉಪಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.