Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರಾಜ್ಯದಲ್ಲಿ ಹೆಚ್ಚು ಬೇಡಿಕೆಯಿರುವ ಅಣಬೆ ಬೇಸಾಯವನ್ನು ಕೈಗೊಂಡು ಆರ್ಥಿಕವಾಗಿ ಸದೃಢರಾಗಬೇಕು


ಮೈಸೂರು: ರಾಜ್ಯದಲ್ಲಿ ಹೆಚ್ಚು ಬೇಡಿಕೆಯಿರುವ ಅಣಬೆ ಬೇಸಾಯವನ್ನು ಕೈಗೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹಾರ್ಟ್ ಸಂಸ್ಥೆಯ ಸಂಸ್ಥಾಪಕ ಶಿವಕುಮಾರ್ ಸಲಹೆ ನೀಡಿದರು.
ಮೈಸೂರಿನ ಎಚ್.ಡಿ.ಕೋಟೆ-ಮಾನಂದವಾಡಿ ರಸ್ತೆಯ ಕೋಟೆಹುಂಡಿಯಲ್ಲಿರುವ ಹಾರ್ಟ್ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ನಡೆದ ಅಣಬೆ ಬೇಸಾಯ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ``ಅಣಬೆ ಬೇಸಾಯವು ಕಡಿಮೆ ಜಾಗ, ಕಡಿಮೆ ಬಂಡವಾಳ ಮತ್ತು ಕಡಿಮೆ ಅವಧಿಯಲ್ಲಿ ಅಧಿಕಾ ಲಾಭ ತಂದುಕೊಡುವ ಕೃಷಿ ವಿಧಾನವಾಗಿದೆ. ಇದು ನಿರುದ್ಯೋಗಿಗಳಿಗೆ ಮತ್ತು ರೈತರಿಗೆ ಉತ್ತಮ ಸ್ವಯಂ ಉದ್ಯೋಗವಾಗಿದ್ದು, ಪ್ರೋಟೀನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿದೆ. ಹೀಗಾಗಿ ಅಣಬೆಗೆ ಉತ್ತಮ ಬೇಡಿಕೆಯಿದ್ದು, ಎಲ್ಲರೂ ಬೆಳೆಯಬಹುದಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು'' ಎಂದು ಹೇಳಿದರು. ಕಲಿಕೆಗೆ ಮಹತ್ವ ಸಿಗಬೇಕಾದರೆ ತರಬೇತಿ ಪಡೆದ ಶಿಬಿರಾರ್ಥಿಗಳು ಅಣಬೆ ಬೇಸಾಯವನ್ನು ಆರಂಭಿಸಬೇಕು. ಅಣಬೆ ರೋಗ ನಿರೋಧಕ ಶಕ್ತಿಯೊಂದಿಗೆ ಹಲವು ರೋಗಗಳನ್ನು ನಿವಾರಣೆ ಮಾಡುವ ಗುಣ ಹೊಂದಿರುವುದರಿAದ ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಮಹಿಳೆಯರೂ ಹೆಚ್ಚಿನ ಪ್ರಮಾಣದಲ್ಲಿ ಬೇಸಾಯವನ್ನು ಅರಂಭಿಸಬಹುದಾಗಿದೆ. ಅಣಬೆ ಬೀಜಗಳು ಮಾರುಕಟ್ಟೆಯಲ್ಲಿ ಸಿಗುವುದರಿಂದ ಯಾವುದೇ ಗೊಂದಲಗಳಿಲ್ಲ. ಹೀಗಾಗಿ ಹಾರ್ಟ್ ಸಂಸ್ಥೆ ಶಿಬಿರ ಆಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಇಂಥ ಹಲವು ಶಿಬಿರ ಆಯೋಜನೆ ಮಾಡಲಾಗುವುದು” ಎಂದು ತಿಳಿಸಿದರು.
ಅಣಬೆ ಬೇಸಾಯ ಕುರಿತು ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿ ಹೆಗ್ಗನೂರು ಪ್ರಸನ್ನ ಮಾತನಾಡಿ, “ಅಣಬೆ ಕೃಷಿಯನ್ನು ಎಲ್ಲ ವಯೋಮಾನದವರೂ ಮಾಡಬಹುದಾಗಿದ್ದು, ಇದೊಂದು ಸಸ್ಯಜಾತಿಗೆ ಸೇರಿದ ಆಹಾರ ಉತ್ಪನ್ನವಾಗಿದೆ. ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದರಿAದ ರೋಗ ನಿರೋಧಕ ಗುಣವನ್ನು ಹೊಂದಿದೆ. ಹೀಗಾಗಿ ಮೊದಲು ಬೆಳೆದವರು ಸೇವಿಸಬೇಕು. ನಂತರ ಮಾರಾಟ ಮಾಡಬೇಕು. ಶಿಬಿರ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು” ಎಂದರು.
ಕಾರ್ಯಕ್ರಮದಲ್ಲಿ ನಗರ್ತಹಳ್ಳಿ ಗ್ರಾಮದ ಮುಖಂಡ ತೇಜುನಾಯಕ, ಉಪನ್ಯಾಸಕಿ ಪೂರ್ಣೀಮಾ, ಕಾರ್ಯಕ್ರಮ ಸಂಯೋಜಕ ಶಿವಲಿಂಗು ಹ್ಯಾಂಡ್‌ಪೋಸ್ಟ್, ಶಿಲ್ಪ, ಶೃತಿ ಸೇರಿದಂತೆ ೩೦ ಶಿಬಿರಾರ್ಥಿಗಳು ಹಾಜರಿದ್ದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು