Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಂಗೀತ ಕಲಾನಿಧಿ ವಾಸುದೇವಾಚಾರ್ಯರ ಜನ್ಮದಿನಾಚರಣೆ ಮಹೋತ್ಸವ : ಶಾಸಕ ಟಿ.ಎಸ್.ಶ್ರೀವತ್ಸ


ಮೈಸೂರು; ಇದೇ ಮೊದಲ ಬಾರಿಗೆ ಸಂಗೀತ ಕಲಾನಿಧಿ ವಾಸುದೇವಾಚಾರ್ಯರ ಜನ್ಮದಿನಾಚರಣೆ ಮಹೋತ್ಸವವನ್ನು ಮೇ 28 ರಂದು ನಗರದಲ್ಲಿ ಏರ್ಪಡಿಸಲಾಗಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.
ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ನಡೆದ ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯ ವೇಳೆ ಸಂಗೀತ ಕಲಾನಿಧಿ ವಾಸುದೇವಾಚಾರ್ಯರ ಜನ್ಮದಿನಾಚರಣೆ ಮಹೋತ್ಸವವನ್ನು ಸರ್ಕಾರದಿಂದ ಆಚರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆ. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ವಾಸುದೇವಚಾರ್ಯರ ಜನ್ಮ ದಿನಾಚರಣ ಮಹೋತ್ಸವಕ್ಕೆ ಒಪ್ಪಿಗೆ ನೀಡಿದ್ದಾರೆ. ಹಾಗಾಗಿ ಮೇ 28 ರಂದು ಶ್ರೀಪ್ರಸನ್ನ ಸೀರಾ ಮಂದಿರ ಆಡಳಿತ ಮಂಡಳಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಗರದ ನಾರಾಯಣ ಶಾಸ್ತಿçà ರಸ್ತೆಯಲ್ಲಿರುವ ಬಿಡಾರ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರದಲ್ಲಿ ವಾಸುದೇವಾಚಾರ್ಯರ ಜನ್ಮ ದಿನಾಚರಣ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ಕಾರ್ಯಕ್ರಮವನ್ನು ನಾನು ಉದ್ಘಾಟಿಸಲಿದ್ದು, ಬೆಳಗ್ಗೆ 11 ಕ್ಕೆ ನಾಡಿನ ಹೆಸರಾಂತ ಸಂಗೀತ ವಿದುಷಿ ಡಾ.ಟಿ.ಎಸ್.ಸತ್ಯವತಿ ಮತ್ತು ವೃಂದದವರಿAದ ಸಂಗೀತ ಪ್ರಾತ್ಯಕ್ಷಿಕೆ ವಾಸುದೇವ ವಾಗ್ಗೇಯ ವೈಭವ ನಡೆಯಲಿದೆ.
ವಿದುಷಿಯವರಾದ ಅರ್ಚನಾ ಭೋಜ್, ಶಿಲ್ಪಾ ಶಶಿಧರ್, ಅಂಜನಾ ಪಿ.ರಾವ್, ಮತ್ತು ಲಾವಣ್ಯ ಕೃಷ್ಣಮೂರ್ತಿ ಅವರಿಂದ ಗಾಯನ ನಡೆಯಲಿದೆ. ವಿ.ಅದಿತಿ ಕೃಷ್ಣ ಪ್ರಕಾಶ್‌ರಿಂದ ವೈಲಿನ್, ಪ್ರೊ.ಜಿ.ಎಸ್.ರಾಮಾನುಜನ್ ಅವರಿಂದ ಮೃದಂಗವಿರಲಿದೆ ಎಂದು ಮಾಹಿತಿ ನೀಡಿದರು.
ವಾಸುದೇವಾಚಾರ್ಯರು 200ಕ್ಕೂ ಹೆಚ್ಚು ಸಂಗೀತ ಕೃತಿಗಳನ್ನು ರಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಭಾವಚಿತ್ರಗಳ ಪ್ರದರ್ಶನ ಏರ್ಪಡಿಸಲಾಗುವುದು. ನಗರದಲ್ಲಿ ಪ್ರತಿಮೆ ನಿರ್ಮಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ನಾದಬ್ರಹ್ಮ ಸಂಗೀತ ಸಭಾವನ್ನು ನವೀಕರಣ ಮಾಡಲೆಂದು ಶಾಸಕರ ನಿಧಿಯಿಂದ 15 ಲಕ್ಷರೂ ನೀಡಿದ್ದೇನೆ. ಅದರ ಉದ್ಘಾಟನೆಯೂ ಮೇ 28 ರಂದು ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶ್ರೀನಿವಾಸಮೂರ್ತಿ, ರಘುನಂದನ್, ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.