
ಮೈಸೂರು; ಪೋಲೀಸ್ ಇಲಾಖೆಗೆ ಸೇರಲು ಇಚ್ಚಿಸುವವರು ಪ್ರಾಮಾಣಿಕವಾಗಿ ಜನಸೇವೆಯನ್ನು ಮಾಡುವ ಮನೋಭಾವ ಹೊಂದಿರಬೇಕು ಎಂದು ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಡಿ. ಧನಂಜಯ ತಿಳಿಸಿದರು.
ರಾಜ್ಯಮಟ್ಟದಲ್ಲಿ ನಡೆಯಲಿರುವ ಸಿವಿಲ್ ಪೋಲೀಸ್ ಕಾನ್ಸ್ ಟೇಬಲ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಉದ್ಯೋಗಾಕಾಂಕ್ಷಿಗಳ ನೆರವಿಗಾಗಿ ಮೈಸೂರು ನಗರ ಕೇಂದ್ರ ಗ್ರಂಥಾಲಯ ಹಾಗೂ ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಹಯೋಗದಲ್ಲಿ ಸೋಮವಾರ ನಡೆದ ಪ್ರಚಲಿತ ವಿಷಯಗಳು ಹಾಗೂ ಬೌದ್ಧಿಕ ಸಾಮರ್ಥ್ಯ ವಿಷಯಕ್ಕೆ ಸಂಬAಧಿಸಿದAತೆ 7ನೇ ಉಚಿತ ಅಣಕು ಪರೀಕ್ಷೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲ ಪ್ರಯತ್ನದಲ್ಲೇ ಯಶಸ್ಸು ಪಡೆಯುವುದು ಸುಲಭವಲ್ಲದಿದ್ದರೂ ಸತತವಾಗಿ ಆತ್ಮಸ್ಥೆöÊರ್ಯ ಕಳೆದುಕೊಳ್ಳದೇ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮನೋಸ್ಥೆöÊರ್ಯ ಹೊಂದಿದವರಾಗಿರಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಯಾವುದೇ ಸರ್ಕಾರದ ಹುದ್ದೆಗೆ ತೀವ್ರತರನಾದ ಪೈಪೋಟಿ ಇದ್ದು, ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗೆ ಸರಿಸುಮಾರು 3,77,000 ಅಭ್ಯರ್ಥಿಗಳು ಹಾಜರಾಗುತ್ತಿರುವುದು ಇದಕ್ಕೆ ಕೈಗನ್ನಡಿಯಾಗಿದೆ ಎಂದರು. ಮೈಸೂರು ನಗರ ಕೇಂದ್ರ ಗ್ರಂಥಾಲಯದವರು ನೀಡುತ್ತಿರುವ ಪರೀಕ್ಷಾ ತರಬೇತಿ ಹಾಗೂ ಅಣುಕು ಪರೀಕ್ಷೆಗಳು ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಲ್ಲಿ ಪರೀಕ್ಷೆ ಎದುರಿಸುವ ಹೆಚ್ಚಿನ ವಿಶ್ವಾಸವನ್ನು ಮೂಡಿಸಲಿದೆ ಎಂದರು. ಹೆಚ್ಚು ಹೆಚ್ಚು ಅಭ್ಯರ್ಥಿಗಳು ಇಂತಹ ಉಚಿತ ಸೇವೆಯನ್ನು ಸದುಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಲಿ ಎಂದು ಹಾರೈಸಿದರು.
ಉದ್ಯೋಗಾಕಾಂಕ್ಷಿಗಳ ನಿರೀಕ್ಷೆಗೆ ಅನುಸಾರ ಪೋಲೀಸ್ ಇಲಾಖೆಗೆ ಸಂಬAಧಿಸಿದ ಅನೇಕ ಮಾಹಿತಿಗಳನ್ನು ಒದಗಿಸಿದರು. ಇಲಾಖೆಯಲ್ಲಿನ ವಿವಿಧ ಹಂತಗಳ ಸಿಬ್ಬಂದಿಗಳು, ಅವರ ಕೆಲಸ ಕಾರ್ಯ, ಕರ್ನಾಟಕದಲ್ಲಿನ ವಿವಿಧ ಪೋಲೀಸ್ ವಲಯಗಳು ಹಾಗೂ ಪೋಲೀಸ್ ಠಾಣೆಗಳಲ್ಲಿ ಜರುಗುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಒದಗಿಸುತ್ತಾ, ಅಂತಿಮ ಪರೀಕ್ಷೆಯಲ್ಲಿ ಇಂತಹ ಪೊಲೀಸ್ ಇಲಾಖೆಗೆ ಸಂಬAಧಿಸಿದ ಮಾಹಿತಿಗಳ ಬಗ್ಗೆಯೂ ಪ್ರಶ್ನೆ ಕೇಳಬಹುದು ಎಂದರು. ಇಂದಿನ ಪೋಲೀಸ್ ಜನಸ್ನೇಹಿ ಪೋಲೀಸ್ ಆಗಿದ್ದು, ವಿದ್ಯಾವಂತ ಸೇವಾ ಮನೋಭಾವವುಳ್ಳ ಯುವ ಜನತೆ ಇಲಾಖೆಗೆ ಸೇರ್ಪಡೆಗೊಳ್ಳುವುದು ಒಳ್ಳೆಯದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಮಂಜುನಾಥ್ ಬಿ ಮಾತನಾಡಿ, ಜುಲೈ 30 ರಂದು ಅಂತಿಮ ಸಮಗ್ರ ಅಣಕು ಪರೀಕ್ಷೆ ನಡೆಸಲಾಗುವುದು ಎಂದರು. ಮುಂಬರುವ ಗ್ರಾಮ ಲೆಕ್ಕಿಗರ ಹಾಗೂ ಶಿಕ್ಷಕರ ಆಯ್ಕೆ ಪರೀಕ್ಷೆಗಳಿಗೂ ವಿಶೇಷ ಮಾರ್ಗದರ್ಶನ ಹಾಗೂ ಪರೀಕ್ಷೆ ನಡೆಸುವ ಯೋಜನೆ ಇದೆ ಎಂದರು. ಕಾರ್ಯಕ್ರಮದಲ್ಲಿ ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಹಾಗೂ ಸದರಿ ಅಣುಕು ಪರೀಕ್ಷೆ ಮತ್ತು ತರಬೇತಿ ಕೇಂದ್ರದ ಮುಖ್ಯಸ್ಥ ರಮೇಶ್ ನರಸಯ್ಯ ಉಪಸ್ಥಿತರಿದ್ದರು.