Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸೇವಾ ಮನೋಭಾವದಿಂದ ಆಯೋಜನೆ ಮಾಡುವ ಕಾರ್ಯಗಳು ಸಮಾಜಕ್ಕೆ ಸದುಪಯೋಗವಾಗಲಿವೆ


ಮೈಸೂರು: ಸೇವಾ ಮನೋಭಾವದಿಂದ ಆಯೋಜನೆ ಮಾಡುವ ಕಾರ್ಯಗಳು ಸಮಾಜಕ್ಕೆ ಸದುಪಯೋಗವಾಗಲಿವೆ ಎಂದು ರಾಘವೇಂದ್ರ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಮತ್ತು ಹಿರಿಯ ವಕೀಲ ಕೆ.ಆರ್. ಶಿವಶಂಕರ್ ಹೇಳಿದರು.
ನಗರದ ಟಿ.ಕೆ. ಬಡಾವಣೆಯ ರಾಯರ ಮಠದ ಸಾಮಾಜಿಕ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಭಾನುವಾರ ಕಲ್ಪವೃಕ್ಷ ಪ್ರಾರ್ಥನಾ ಮಂದಿರದಲ್ಲಿ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್, ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಕರ್ನಾಟಕ ವಿಪ್ರ ವಕೀಲರ ಸಂಘದ ಸಂಯಕ್ತ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಹೃದಯ ತಪಾಸಣೆ, ಕೀಲು ಮತ್ತು ಮಂಡಿ ನೋವಿನ ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿವರ್ಷವೂ ರಾಯರ ಮಠದಲ್ಲಿ ಆರೋಗ್ಯ ಸಂಬAಧಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ನೂರಾರು ಜನರ ಸ್ವಾಸ್ಥöÈ ಸುಧಾರಣೆಗೆ ಇದು ಪೂರಕವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ಆರೋಗ್ಯ ಪಾಲನೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಹೇಳಿದರು.
ರಾಘವೇಂದ್ರ ಸ್ವಾಮಿಗಳು ಸಕಲ ಸಮುದಾಯಗಳಿಂದಲೂ ಪೂಜಿತರು. ಅವರ ಮಹಾ ಕೃಪೆಯಿಂದಲೇ ಅನೇಕರಿಗೆ ಅನುಗ್ರಹವಾಗಿದೆ. ಅವರ ಸನ್ನಿಧಾನದಲ್ಲಿ ಆರೋಗ್ಯ ಭಾಗ್ಯ ದೊರಕಿಸಿಕೊಡುವ ಉಚಿತ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಡಿ.ಆರ್.ಎಂ. ಆಸ್ಪತ್ರೆ ತಜ್ಞರಾದ ಡಾ. ಜೆ.ಎನ್. ಮಂಜುನಾಥ್, ಡಾ. ಸಹನಾ, ಮಠದ ಸೇವಾ ಟ್ರಸ್ಟ್ ಅಧ್ಯಕ್ಷ ಜಯರಾಂ, ಟ್ರಸ್ಟಿಗಳಾದ ವೇಣುಗೋಪಾಲ್, ರಾಜಾರಾಂ, ಎಚ್.ಎನ್. ಚಂದ್ರಶೇಖರ್, ನಾಗರಾಜ್, ಮುಕುಂದ ಇತರರು ಇದ್ದರು. 12 ಜನ ತಜ್ಞ ವೈದ್ಯರು ಅತ್ಯಾಧುನಿಕ ಸಾಧನಗಳ ಮೂಲಕ ನೂರಾರು ಜನರಿಗೆ ತಪಾಸಣೆ ನಡೆಸಿ, ಸಲಹೆ, ಸೂಚನೆ ನೀಡಿದರು.