ನಂಜನಗೂಡಿನಲ್ಲಿ ಈಶ ಗ್ರಾಮೋತ್ಸವ ಸಂಭ್ರಮ: ಕಳೆಗಟ್ಟಿದ ಗ್ರಾಮೀಣ ಕ್ರೀಡೋತ್ಸವ
ನಂಜನಗೂಡು; ನಂಜನಗೂಡಿನ ಜೆ.ಎಸ್.ಎಸ್ ಆರ್ಟ್್ಸ, ಕಾಮರ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ ಈಶ ಗ್ರಾಮೋತ್ಸವ ಸಂಭ್ರಮದಿAದ ನಡೆಯಿತು. ಈಶ ಔಟ್‌ರೀಚ್ ಆಯೋಜಿಸುವ ‘ಈಶ ಗ್ರಾಮೋತ್ಸವ’ವು ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಹಬ್ಬವಾಗಿದ್ದು, ಕ್ರೀಡೆಯ ಮೂಲಕ ಗ್ರಾಮೀಣ ಸಮಾಜವನ್ನು ಒಂದೆಡೆ ತರುವ ಹಾಗೂ ಬೇರುಮಟ್ಟದ ಆಟಗಾರರಲ್ಲಿ ತಂಡದ ಮನೋಭಾವ, ಆತ್ಮವಿಶ್ವಾಸ ಮತ್ತು ಸಮುದಾಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಈ ಕೂಟದಲ್ಲಿ ನಂಜನಗೂಡಿನ ವಿವಿಧ ಹಳ್ಳಿಗಳಿಂದ ಒಟ್ಟು 290 ಪುರುಷ ವಾಲಿಬಾಲ್ ಆಟಗಾರರು ಮತ್ತು ಮಹಿಳೆಯರ ಥ್ರೋಬಾಲ್ ಆಟಗಾರ್ತಿಯರು…