
ನಂಜನಗೂಡು; ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸುವಂತೆ ನಂಜನಗೂಡು ತಾಲೂಕಿನ ಬನ್ನಾರಿ ಸಕ್ಕರೆ ಕಾರ್ಖಾನೆಗೆ ರೈತರು ಸೋಮವಾರ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.
ಕಾರ್ಖಾನೆಯ ಮುಖ್ಯ ಗೇಟ್ ಬಾಗಿಲು ಮುಚ್ಚಿದ ಕಾರಣ ಗೇಟ್ ಮೇಲೇರಿ ಒಳ ನುಗ್ಗಿದ ರೈತರು ಕಾರ್ಖಾನೆ ಆಡಳಿತ ಕಚೇರಿ ಮುಂದೆ ಜಮಾಯಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯ ನೇತೃತ್ವದ ವಹಿಸಿದ್ದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ್ ಮಾತನಾಡಿ, 1966 ಸಕ್ಕರೆ ನಿಯಂತ್ರಣ ಕಾಯ್ದೆ ಪ್ರಕಾರ, ಸಕ್ಕರೆ ಕಾರ್ಖಾನೆ ಆರಂಭಕ್ಕೂ ಮುನ್ನ ಕಬ್ಬಿನ ದರ ಘೋಷಣೆ ಮಾಡಬೇಕು. ಕಬ್ಬಿನ ಕಟಾವ್ ಕೂಲಿ ಸಾಗಾಣಿಕೆ ವೆಚ್ಚ ನಿರ್ಧಾರ ಮಾಡಬೇಕು . ಹಿಂದಿನ ವರ್ಷದ ಬಾಕಿ ಪಾವತಿ ಮಾಡಿ ಕಾರ್ಖಾನೆ ಆರಂಭಿಸಬೇಕು ಎನ್ನುವ ನಿಯಮವನ್ನು ಗಾಳಿಗೆ ತೂರಿ ಬಣ್ಣಾರಿ ಕಾರ್ಖಾನೆಯವರು ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿನ ದಿನದಲ್ಲಿ ಕಬ್ಬು ಬೆಳೆ ಎಲ್ಲ ಉಪ ಉತ್ಪನ್ನಗಳಿಂದಲೂ ಕಾರ್ಖಾನೆಗೆ ಲಾಭ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಒಂದು ಟನ್ ಸೌದೆಗೆ 3500 ರೂ ಇದೆ. ಆದರೆ ಒಂದು ವರ್ಷ ಬೆಳೆಯುವ ರೈತರ ಕಬ್ಬಿಗೆ ಅದಕ್ಕಿಂತ ಬೆಲೆ ಕಡಿಮೆ. ಇಳುವರಿಯಲ್ಲಿ ಮೋಸ ತೂಕದಲ್ಲಿ ಮೋಸ. ಈ ರೀತಿಯಾಗಿ ರೈತರಿಗೆ ಮಾತ್ರ ನಿರಂತರ ಅನ್ಯಾಯ ಮಾಡುತ್ತಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ತನಿಖಾ ಸಮಿತಿ ರಚಿಸಲಿ. ಆಹಾರ, ವರಮಾನ ತೆರಿಗೆ, ಅಬಕಾರಿ, ವಿದ್ಯುತ್, ಸಕ್ಕರೆ ಸಂಸ್ಥೆ ಹಾಗೂ ಮಾರಾಟ ತೆರಿಗೆ ಇಲಾಖೆ ಒಳಗೊಂಡ ಅಧಿಕಾರಿಗಳ ತಂಡ ರಚಿಸಿ, ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ಪಡೆಯಬೇಕು. ಸರ್ಕಾರಕ್ಕೆ ವಂಚನೆ ಮಾಡಿರುವ ಮಾಹಿತಿ ಸಿಕ್ಕ ನಂತರ ಕಾರ್ಖಾನೆ ಮಾಲೀಕರ ಮೇಲೆ ಕ್ರಿಮಿನಲ್ ಮುಖದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
2025- 26 ರ ಸಾಲಿಗೆ ಸರ್ಕಾರ ನಿಗದ ಮಾಡಿದ 50 ರೂ ಹೆಚ್ಚುವರಿ ದರ ಸುಮಾರು 6.50 ಕೋಟಿರೂಗಳನ್ನು ನೀಡಿ ನಂತರ ಕಾರ್ಖಾನೆ ಪ್ರರಂಭಿಸಬೇಕು. ಕಬ್ಬಿನ ಎಫ್‌ಆರ್‌ಪಿ ದರಕ್ಕೆ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ 500 ರೂ, ರಾಜ್ಯ ಸರ್ಕಾರ ಸಲಹಾ ದರ ಘೋಷಿಸಿ ಜಾರಿಗೊಳಿಸಬೇಕು. 2022-23 ನೇ ಸಾಲಿನ ಕಬ್ಬು ಸರಬರಾಜು ಮಾಡಿದ ರೈತರಿಗೆ ಅಂದಿನ ಸರ್ಕಾರ ಘೂಷಣೆ ಮಾಡಿದ ಬಾಕಿ ಪ್ರತಿ ಟನ್‌ಗೆ ರೂ 150 ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. 2025- 2026 ರ ಸಾಲಿನ ಉಪ ಉತ್ಪನ್ನಗಳ ಲಾಭ ರೈತರಿಗೆ ಹಂಚಿಕೆ ಆಗಬೇಕು. ತೂಕದ ಯಂತ್ರವನ್ನು ಕಾರ್ಖಾನೆಯ ಮುಂಭಾಗ ರೈತರಿಗೆ ಅನುಕೂಲ ಹಾಗುವಂತೆ ಸ್ಥಾಪಿಸಬೇಕು.
2026-27 ನೇ ಸಾಲಿನ ಕಬ್ಬಿನ ದರವನ್ನು ಪ್ರತಿ ಟನ್ ಕಬ್ಬಿಗೆ 4500 ರೂ ಕೂಡಲೇ ಪ್ರಕಟಿಸಬೇಕು ಎಂದು ಒತ್ತಾಯಿಸಲಾಯಿತು
ಚಳುವಳಿ ಜಾಗಕ್ಕೆ ಬಂದ ಕಾರ್ಖಾನೆ ಉಪಾಧ್ಯಕ್ಷ ವೇಲು ಸ್ವಾಮಿ. ಮಾತನಾಡಿ, ಹಲವಾರು ಸಮಜಾಯಿಸಿ ನೀಡಿದರು.ರೈತರು ಒಪ್ಪಲಿಲ್ಲ ಕೂಡಲೇ ಸರ್ಕಾರ ನಿಗದಿ ಮಾಡಿದ ಹಣ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ನೀವು ಇಲ್ಲೇ ಇರಬೇಕು. ನ್ಯಾಯ ಸಿಗುವ ತನಕ ಚಳುವಳಿ ಮುಂದುವರಿಯುತ್ತದೆ. ಎಂದು ಪ್ರಕಟಿಸಲಾಯಿತು
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಡೆದ ಹೋರಾಟದಲ್ಲಿ ಮುಖಂಡರುಗಳಾದ
ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕ್ಕಳ್ಳಿ ಮಹದೇವಸ್ವಾಮಿ, ಪಿ.ಸೋಮಶೇಖರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಲಕ್ಷಿ÷್ಮÃಪುರ ವೆಂಕಟೇಶ್, ಗುರುಸ್ವಾಮಿ, ದೇವನೂರು ವಿಜಯೇಂದ್ರ, ಕುರುಬೂರು ಸಿದ್ದೇಶ್, ಬಿ. ಪಿ. ಪರಶಿವಮೂರ್ತಿ, ಕುರುಬೂರು ಪ್ರದೀಪ್, ಕಾಟೂರು ಮಹದೇವಸ್ವಾಮಿ, ಕೆಂಡಗಣ್ಣಪ್ಪ, ಕಾಟೂರು ನಾಗೇಶ್, ಅಂಬಳೆ ಮಂಜುನಾಥ್, ಸುನೀಲ್, ರಾಜೇಶ್, ನಂಜುAಡಸ್ವಾಮಿ, ಶಿವಣ್ಣ, ಮಹೇಶ್, ಯೋಗೇಶ್, ಗಿರೀಶ್, ಸಿದ್ಧರಾಮ, ಮಹಾದೇವು, ಪ್ರಭಾಕರ್, ಶಿವಸ್ವಾಮಿ, ಸತೀಶ್, ಬಾಲು, ಶ್ರೀಕಂಠ, ಕೆಂಡಗಣ್ಣಸ್ವಾಮಿ ಸೇರಿದಂತೆ ನೂರಾರು ಮಂದಿ ರೈತರು ಭಾಗವಹಿಸಿದ್ದರು.