Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿ ಬಂದ ಎಚ್.ಡಿ. ದೇವೇಗೌಡರಿಗೆ ರಾಜ್ಯಸಭಾ ಸದಸ್ಯ ಸ್ಥಾನ ದೊಡ್ಡದೇನಲ್ಲ; ಶಾಸಕ ಎಚ್.ಡಿ. ರೇವಣ್ಣ


ಮೈಸೂರು: ‘ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿ ಬಂದ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜ್ಯಸಭಾ ಸದಸ್ಯ ಸ್ಥಾನ ದೊಡ್ಡದೇನಲ್ಲ’ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.
ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ದೇವೇಗೌಡರು ರಾಜ್ಯಸಭಾ ಸದಸ್ಯ ಸ್ಥಾನವನ್ನು ನನಗೆ ಕೊಡಿ ಎಂದು ಯಾರಲ್ಲೂ ಕೇಳಿರಲೇ ಇಲ್ಲ. ಆದರೆ ಮಾಧ್ಯಮದಲ್ಲಿ ಆ ವಿಚಾರ ಪ್ರಸ್ತಾಪವಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಒಮ್ಮೆ ಹೆಚ್.ಡಿ.ದೇವೇಗೌಡರ ಹೆಸರು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಪ್ಯಾನಲ್‌ನಲ್ಲಿ ಇದೆ ಎಂದರು. ಮತ್ತೊಮ್ಮೆ ಇಲ್ಲ ಎಂದರು. ಆದರೆ, ನಮಗೆ ಯಾವ ಗೊಂದಲವೂ ಇರಲಿಲ್ಲ’ ಎಂದು ತಿಳಿಸಿದರು.
‘ನಾನಾಗಲಿ, ಎಚ್.ಡಿ. ಕುಮಾರಸ್ವಾಮಿ ಅವರಾಗಲಿ, ಹೆಚ್.ಡಿ. ದೇವೇಗೌಡರಾಗಲಿ ರಾಜ್ಯಸಭಾ ಸ್ಥಾನ ಕೊಡಿ ಎಂದು ಬಿಜೆಪಿಯವರನ್ನು ಕೇಳಿರಲಿಲ್ಲ. ಆದರೆ ಈ ಬಗ್ಗೆ ಕಾಂಗ್ರೆಸ್‌ನವರು ಈಗ ಚರ್ಚಿಸುತ್ತಿರುವುದು ಅಪ್ರಸ್ತುತ’. ರಾಜ್ಯಸಭಾ ಸದಸ್ಯ ಸ್ಥಾನ ಮುಖ್ಯವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸುವುದಷ್ಟೆ ನಮಗೆ ಮುಖ್ಯ’ ಎಂದರು.
ಹೆಚ್.ಡಿ. ದೇವೇಗೌಡರ ರಾಜಕಾರಣ ಮುಗಿದೇ ಹೋಯಿತು ಎಂದು ಹಲವರು ಹೇಳಿದ್ದರು. ಈಗಲೂ ಹೆಚ್.ಡಿ.ದೇವೇಗೌಡರು ರಾಜಕಾರಣ ಮಾಡುತ್ತಿಲ್ಲವೇ? ಡಿಕೆಶಿವಕುಮಾರ್ ಸಿಎಂ ಆಗಿರುವುದಕ್ಕೂ- ಒಕ್ಕಲಿಗ ಮತ ಬ್ಯಾಂಕ್‌ಗೂ ಸಂಬAಧವಿಲ್ಲ. ನಮ್ಮ ಸಮಾಜದ ಒಬ್ಬರು ಮುಖ್ಯಮಂತ್ರಿ ಆಗಿದ್ದಾರೆ, ಆಗಲಿ ಬಿಡಿ’ ಎಂದು ಹೇಳಿದರು.
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದುಕೊAಡಿದ್ದೆ. ಏನೋ ಒಪ್ಪಂದ ಎಂದು ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದಾರೆ. ಹೊಸಬರು ಆಡಳಿತ ನಡೆಸಲಿ ಬಿಡಿ. 2028ರ ಚುನಾವಣೆಯ ಬಗ್ಗೆ ಈಗಲೇ ಏಕೆ ಮಾತು?’ ಎಂದು ಕೇಳಿದರು
‘ಡಿ.ಕೆ. ಶಿವಕುಮಾರ್ ಸಿಎಂ ಆದರೆಂದು ಒಕ್ಕಲಿಗ ಮತಗಳು ಜೆಡಿಎಸ್‌ನಿಂದ ಚದುರಿ ಹೋಗುವುದಿಲ್ಲ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಒಕ್ಕಲಿಗ ಮತಗಳು ಕಾಂಗ್ರೆಸ್‌ಗೆ ಹೋದವೇ? ಜೆಡಿಎಸ್‌ಗೆ ಒಕ್ಕಲಿಗ ಮತಬ್ಯಾಂಕ್ ಇದ್ದೇ ಇದೆ. ಮುಂದೆಯೂ ಸಮಸ್ಯೆ ಆಗುವುದಿಲ್ಲ’ ಎಂದರು.
ಹಾಸನದಲ್ಲಿರುವವರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾ ಅಥವಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾ ಎನ್ನುವುದು ಗೊತ್ತಿಲ್ಲ. ಅವರು ಏನು ಎಂಬುದನ್ನು ಬಿಜೆಪಿ ಅಧ್ಯಕ್ಷರೇ ಹೇಳಬೇಕು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸಕ ಜಿ.ಟಿ. ದೇವೇಗೌಡ ಅವರು ಜೆಡಿಎಸ್ ಬಿಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ. ನಾನು, ಎಚ್‌ಡಿಕೆ, ಜಿಟಿಡಿ ಹಾಗೂ ಸಾ.ರಾ. ಮಹೇಶ್ ಎಲ್ಲರೂ ಕುಳಿತು ಚರ್ಚಿಸುತ್ತೇವೆ. ಜಿಟಿ ದೇವೇಗೌಡ ನಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ಸಮಸ್ಯೆ ಬಗೆಹರಿಯುತ್ತದೆ. ಖುದ್ದು ಬಂದು ದೇವೇಗೌಡರನ್ನು ಭೇಟಿ ಮಾಡಿದ್ದಾರೆ’ ಎಂದು ಹೇಳಿದರು.