Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೆಂಪೇಗೌಡರ ಜಯಂತಿಯ ಪ್ರಚಾರ ರಥಕ್ಕೆ ಅದ್ಧೂರಿ ಚಾಲನೆ


ಮೈಸೂರು; ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜೂನ್ 27ರಂದು ಮೈಸೂರಿನ ಕಲಾಮಂದಿರದಲ್ಲಿ ಆಯೋಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಜಯಂತಿಯ ಕೆಂಪೇಗೌಡರ ಪ್ರಚಾರ ರಥಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.
ಮೈಸೂರಿನ ಕುವೆಂಪು ನಗರದಲ್ಲಿರುವ ಬಂದAತಮ್ಮ ಕಾಳಮ್ಮ ದೇವಸ್ಥಾನದ ಮುಂಭಾಗ ಕೆಂಪೇಗೌಡರ ಜಯಂತಿಯ ಪ್ರಚಾರ ರಥಕ್ಕೆ ಮೈಸೂರಿನ ಆದಿ ಚುಂಚನಗಿರಿ ಶಾಖ ಮಠದ ಶ್ರೀ ಸೋಮೇಶ್ವರ ನಾಥ ಸ್ವಾಮೀಜಿಯವರು ಕೆಂಪೇಗೌಡರ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಅವರಿಗೆ ಶಾಸಕರುಗಳಾದ ಹರೀಶ್‌ಗೌಡ, ಜಿ.ಟಿ ದೇವೇಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು ಸಾತ್ ನೀಡಿದರು. ಪ್ರಚಾರ ರಥದ ಮೆರವಣಿಗೆಯಲ್ಲಿ ಮೈಸೂರು ಒಕ್ಕಲಿಗರ ಸಂಘದ ಅಧ್ಯಕ್ಷ ಪ್ರಶಾಚಿತ್‌ಗೌಡ, ಶಾಸಕ ಟಿ.ಎಸ್.ಶ್ರೀವಸ್ತ, ನಗರ ಪಾಲಿಕೆಯ ಮಾಜಿ ಸದಸ್ಯರುಗಳಾದ ಕೆ.ವಿ ಶ್ರೀಧರ್, ಕೆ.ವಿ.ಮಲ್ಲೇಶ್, ರಾಜ್ಯ ವಕ್ಕಲಿಗರ ಸಂಘದ ಅಧ್ಯಕ್ಷ ಗಂಗಾಧರ್, ಕರ್ನಾಟಕ ಸೇನಾಪಡೆಯ ಜಿಲ್ಲಾಧ್ಯಕ್ಷ ತೇಜಸ್ ಲೋಕೇಶ್ ಗೌಡ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ವಕೀಲರಾದ ಗೋಕುಲ್ ಗೋವರ್ಧನ್, ಮುಡಾ ಮಾಜಿ ಸದಸ್ಯ ಲಕ್ಷಿ÷್ಮÃದೇವಿ, ಬಿಜೆಪಿ ಮೈಸೂರು ನಗರ ಮಾಜಿ ಉಪಾಧ್ಯಕ್ಷೆ ಹೇಮಾ ನಂದೀಶ್, ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಮುಖಂಡರುಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು
ನಂತರ ಕೆಂಪೇಗೌಡರ ಪ್ರತಿಮೆಯನ್ನು ಹೊತ್ತ ಪ್ರಚಾರ ರಥ ಮೈಸೂರಿನ ಹಿನಕಲ್, ಹೂಟಗಳ್ಳಿ, ಬೆಳವಾಡಿ, ಕೂರ್ಗಳ್ಳಿ, ಮೈದುನಹಳ್ಳಿ ಆನಂದೂರು, ಹೊಸಕೋಟೆ, ಗುಂಗ್ರಾಲ್ ಛತ್ರ, ಎಲಚಹಳ್ಳಿ, ಇಲವಾಲ ತಲುಪಿತು.