Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು: ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ.

ಪಿರಿಯಾಪಟ್ಟಣ : ಸಾರ್ವಜನಿಕರು ದೂರು ನೀಡಿದ ತಕ್ಷಣ ಅವರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು. ಪಟ್ಟಣದ ಡಿ.ದೇವರಾಜ ಅರಸು ಕಲಾಭವನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ದಸಂಸ ಮುಖಂಡ ಈರಾಜ್ ಬಹುಜನ್ ಸೇರಿದಂತೆ ಅನೇಕರು ಮಾತನಾಡಿ ತಾಲ್ಲೂಕಿನಾದ್ಯಂತ ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ತಮ್ಮ ಸಿಬ್ಬಂದಿಗಳನ್ನು ಕಳುಹಿಸಿ ಹಪ್ತ ವಸೂಲಿ ಮಾಡಿಕೊಂಡು ಕೈ ಕಟ್ಟಿ ಕುಳಿತಿರುತ್ತಾರೆ, ಅನೇಕ ಕಡೆಗಳಲ್ಲಿ ಬೆಳಿಗಿನ ಜಾವ 4 ಗಂಟೆಗೆ ಬಾರ್ ಗಳು ಓಪನ್ ಆಗಿರುತ್ತವೆ ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೆ ಅವರೇ ಮಾಹಿತಿ ನೀಡಿದವರ ವಿವರಗಳನ್ನು ಬಹಿರಂಗ ಪಡಿಸಿ ಜಗಳ ಹೆಚ್ಚಿಸುತ್ತಾರೆ ಎಂದು ದೂರಿದರು ಇದಕ್ಕೆ ಸ್ಪಂದಿಸಿದ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಯವರು ಈ ಬಗ್ಗೆ ಜಿಲ್ಲಾ ಅಬಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರಿಸಿದ ಅವರು ಈಗಾಗಲೇ ಅಕ್ರಮ ಮದ್ಯ ಮಾರಾಟ ಮಾಡಿ ಶಿಕ್ಷೆಗೆ ಗುರಿಯಾಗಿರುವ ಮತ್ತು ಅಕ್ರಮ ಮದ್ಯ ಮಾರಾಟ ಕೇಸ್ ದಾಖಲು ಮಾಡಿದ್ದರು ಮತ್ತೆ ಮದ್ಯ ಮಾರಾಟ ಮಾಡುತ್ತಿರುವವರ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಗಡಿಪಾರು ಮಾಡಲಾಗುವುದು ಎಂದರು. 

ಈ ಸಂದರ್ಭದಲ್ಲಿ ಸಾರ್ವಜನಿಕರು ಮಾತನಾಡಿ ಬೈಲುಕುಪ್ಪೆ ಭಾಗದ ಅರಣ್ಯ ಪ್ರದೇಶದಲ್ಲಿ ಟಿಬೆಟಿಯನ್ ಮತ್ತು ಇಲ್ಲಿನ ಸ್ಥಳೀಯರು ಪ್ರತಿನಿತ್ಯ ಇಸ್ಪಿಟ್ ದಂಧೆ ನಡೆಸುತ್ತಿದ್ದಾರೆ ಎಂದು ದೂರಿದರು. ಪುರಸಭಾ ಮಾಜಿ ಸದಸ್ಯ ಟಿ.ಎಸ್.ರವಿ ಮಾತನಾಡಿ ಪಿರಿಯಾಪಟ್ಟಣದಲ್ಲಿ ಕೇರಳ ಲಾಟರಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕು ಎಂದರು, ಪುರಸಭಾ ಮಾಜಿ ಅಧ್ಯಕ್ಷ ಮಂಜುನಾಥ್ ಸಿಂಗ್ ಸೇರಿದಂತೆ ಹಲವರು ಮಾತನಾಡಿ ಪಟ್ಟಣದ ಹೃದಯ ಭಾಗದಲ್ಲಿ ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಿರುವ ಕಾರಣಕ್ಕೆ ವಾಹನ ದಟ್ಟಣೆ ಹೆಚ್ಚುತ್ತಿದೆ, ಅಲ್ಲದೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸುತ್ತಾರೆ ಸಾರಿಗೆ ಇಲಾಖೆ ಸಿಬ್ಬಂದಿಗಳು ಬಸ್ ನಿಲ್ದಾಣ ಇದ್ದರೂ ನಿಲ್ದಾಣದಲ್ಲಿ ನಿಲ್ಲಿಸದೆ ಅರ್ಧ ಕಿಲೋ ಮೀಟರ್ ದೂರ ತೆಗೆದುಕೊಂಡು ಹೋಗಿ ನಿಲ್ಲಿಸುತ್ತಾರೆ ಇದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಓಡೋಡಿ ಬಂದು ಬಸ್ ಹತ್ತಬೇಕು ಈ ಸಂದರ್ಭದಲ್ಲಿ ಅನೇಕ ಅವಘಡಗಳು ಸಂಭವಿಸುತ್ತವೆ ಆದ್ದರಿಂದ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಶಾಲಾ ಪಕ್ಕದಲ್ಲಿ ಬಸ್ ನಿಲ್ಲಿಸಲು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಬೇಕು ಎಂದರು, ಇದಲ್ಲದೆ ಪಿರಿಯಾಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಮಸಣಿಕಮ್ಮ ದೇವಾಲಯಕ್ಕೆ ಬರುವ ಭಕ್ತಾದಿಗಳು ಹಾಗೂ ಇಲ್ಲಿನ ಕೆಲವು ಪುಂಡರು ಪಟ್ಟಣದ ಚಿಕ್ಕ ಮತ್ತು ದೊಡ್ಡಕೆರೆಯ ಬಳಿ ಮದ್ಯ ಸೇವಿಸಿ ಬಾಟಲ್ ಗಳನ್ನು ರಸ್ತೆಯಲ್ಲಿ ಹೊಡೆಯುವುದು ಹಾಗೂ ಕೆರೆಗೆ ಗಾಜನ್ನು ಎಸೆಯುವುದನ್ನು ಮಾಡುತ್ತಿದ್ದಾರೆ ಈ ಬಗ್ಗೆ ಪೊಲೀಸ್ ಬೀಟ್ ಹಾಕಬೇಕು ಎಂದರು, ಪಟ್ಟಣದ ಕುಶಾಲನಗರ ಮುಖ್ಯ ರಸ್ತೆ ಮತ್ತು ಸಂತೆ ಮಾಳದಲ್ಲಿ ವ್ಯಾಪಾರ ಮಾಡುವವರು ಪುಟ್ಪಾತ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು ಪುಟ್ಪಾತ್ ತೆರವುಗೊಳಿಸಬೇಕು ಎಂದು ದೂರಿದರು. ಇದಲ್ಲದೆ ಪಟ್ಟಣದಲ್ಲಿ ರೈತರ ಭೂಮಿಯನ್ನು ಕಬಳಿಸುವ ಸಂಚು ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.ಈ ಸಂದರ್ಭದಲ್ಲಿ ಡಿವೈಎಸ್ಪಿ ರವಿ, ಪಿರಿಯಾಪಟ್ಟಣ ಸರ್ಕಲ್ ಇನ್ಸ್ಪೆಕ್ಟರ್ ಗಳಾದ ಗೋವಿಂದರಾಜು, ದೀಪಕ್, ಪಿಎಸ್ಐ ರವಿಕುಮಾರ್, ಅಶೋಕ್ ಕುಮಾರ್, ಅಬಕಾರಿ ಇನ್ಸ್ಪೆಕ್ಟರ್ ವೆಂಕಟೇಶ್, ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.