Skip to main content

3Kaala News

ಸುಭಾಷಿತ 

ಬದುಕೆಂಬುದು ಚೈನಿನ ಸರಪಳಿ ಇದ್ದ ಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶ್ರೀ ಮಲೈ ಮಹದೇಶ್ವರ ದೇವಾಲಯದ ಮುಂಭಾಗದಲ್ಲಿ ಧ್ವಜಸ್ತಂಭ ಪ್ರತಿಸ್ಥಾಪನೆಯ ಹೋಮ ಹವನ

ಸರಗೂರು ; ತಾಲೂಕಿನ ನಂಜೀಪುರ ಗ್ರಾಮದ ಶ್ರೀ ಮಲೈ ಮಹದೇಶ್ವರ ದೇವಾಲಯದ ಮುಂಭಾಗದಲ್ಲಿ ಧ್ವಜಸ್ತಂಭ ಪ್ರತಿಸ್ಥಾಪನೆಯ ಹೋಮ ಹವನ ಧಾರ್ಮಿಕ ವಿಧಿ ವಿಧಾನಗಳ ಪೂಜಾ ಕಾರ್ಯಕ್ರಮವು ನಂಜೀಪುರ ಶ್ರೀ ಪಡುವಣ ತೀರ್ಥ ವಿರಕ್ತ ಮಠದ ಶ್ರೀ ಇಮ್ಮಡಿಚಿಲಾಳ ದೇಶಿಕೇಂದ್ರಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಹಾಗು ವಿದ್ವಾನ್ ಶ್ರೀ ಹೇಮೇಶ್ ಚಿಲಾಳರವರು ಮತ್ತು ತಂಡದವರಿಂದ ಪೂಜಾ ಕಾರ್ಯಕ್ರಮವು ನೆರವೇರಿತು.
ನಂಜೀಪುರ ವೇದನಬ್ರಹ್ಮ ಶ್ರೀ ದಿವಂಗತ ತೋಂಟಸ್ವಾಮಿಯವರ ಸ್ಮರಣಾರ್ಥ, ದಿ.ತೋಂಟಸ್ವಾಮಿಯವರ ಕುಟುಂಬ ವರ್ಗ ಧ್ವಜಸ್ತಂಭದ ದಾನಿಗಳಾರುತ್ತಾರೆ. ಸುಮಾರು ನಾಲ್ಕು ಲಕ್ಷ ರೂಪಾಯಿಗಳು ಧ್ವಜಸ್ತಂಬಕ್ಕೆ ಖರ್ಚಾಗಿರುತ್ತದೆ.

ಈ ಸಂದರ್ಭದಲ್ಲಿ ಧ್ವಜಸ್ತಂಭ, ಬಸವ, ಲಿಂಗವನ್ನು ಮೈಸೂರಿನ ವಿ. ಪರಮೇಶ್ ಆಚಾರ್ಯ ಹಾಗೂ ಮಕ್ಕಳಾದ ಸಂದೇಶ್ ಮತ್ತು ಸಂತೋಷ್ ಕಲ್ಲಿನ ಶಿಲ್ಪಿಗಳು ಮತ್ತು ತಂಡ, ಗ್ರಾಮದ ಗೌಡಿಕೆ ಶಿವಮಲ್ಲಪ್ಪ, ಮುಖಂಡರುಗಳಾದ ಪ್ರಭುಸ್ವಾಮಿ, ಮಾಜಿ ಗೌಡಿಕೆ ಶಿವರಾಜಪ್ಪ, ಮಹದೇವಪ್ಪ, ಮಂಜುನಾಥ್, ಗುರುಮೂರ್ತಿ, ಯೋಗಿಶ, ಶಿವಕುಮಾರ್, ನಾಗರಾಜಪ್ಪ ಹಾಗೂ ಸಹಸ್ರಾರು ಭಕ್ತರು ಗ್ರಾಮಸ್ಥರು, ಯುವಕರು, ಅಕ್ಕ ಪಕ್ಕದ ಗ್ರಾಮಸ್ಥರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.