
ಮೈಸೂರು; ಇಂಧನ ಬೆಲೆ ಇಳಿಕೆಯಾಗಿರುವುದನ್ನು ಮೈಸೂರು ಹೋಟೆಲ್ ಮಾಲೀಕರ ಸಂಘ ಸ್ವಾಗತಿಸಿದೆ.
ವಾಣಿಜ್ಯ ಅನಿಲ ಸಿಲಿಂಡರ್ಗಳ ಹೆಚ್ಚಿಸಿದ ಬೆಲೆಯಲ್ಲಿ 177 ರೂ ಇಳಿಸಲಾಗಿದೆ. ಯುದ್ಧದ ಪರಿಣಾಮವಾಗಿ ಕಳೆದ ನಾಲ್ಕು ತಿಂಗಳಲ್ಲಿ 19 ಕೆ.ಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು 1,500 ವರೆಗೆ ಹೆಚ್ಚಿಸಲಾಗಿತ್ತು. ಈಗ ತೈಲದ ಬ್ಯಾರೆಲ್ ಬೆಲೆ ತೀವ್ರ ಕುಸಿದಿದ್ದು, 2026 ಫೆಬ್ರವರಿ ತಿಂಗಳಿನಲ್ಲಿ ಇದ್ದ ಮೂಲ ಬೆಲೆಗೆ ಇಳಿದಿದೆ, ಐPಉ ಸಿಲಿಂಡರ್ 177 ರೂ ಮಾತ್ರ ಇಳಿಕೆಯಾಗಿದ್ದು ಇದರ ಜೊತೆ ಪೆಟ್ರೋಲ್ 5 ರೂ., ಡೀಸೆಲ್ ದರ 3 ರೂ. ಇಳಿಕೆಯಾಗಿರುವುದು ಸ್ವಾಗತಾರ್ಹವಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೂ 4 ತಿಂಗಳಲ್ಲಿ ದುಪ್ಪಟ್ಟು ಅಂದರೆ 1500 ರೂಗಳಿಗೆ ಏರಿಸಿ ಕೇವಲ 177 ರೂ ಇಳಿಸಿರುವುದು
ಇದರಿಂದ ಆತಿಥ್ಯ ಉದ್ಯಮಕ್ಕೆ ಅಸಮಧಾನವಾಗಿರುತ್ತದೆ. ಕೇಂದ್ರ ಸರ್ಕಾರವು ಹೆಚ್ಚಿಸಿರುವ ವಾಣಿಜ್ಯ ಅನಿಲ ಸಿಲಿಂಡರ್ ಫೃಬ್ರವರಿಯಲ್ಲೀ ಇದ್ದಂತಹ ಮೂಲಬೆಲೆ ರೂ 1750 ಅಷ್ಟಕ್ಕೇ ಇಳಿಸಬೇಕೆಂದು ಒತ್ತಾಯಿಸಿದ್ದಾರೆ.