ಚಾಮುಂಡೇಶ್ವರಿಯ ದರ್ಶನಕ್ಕೆ 300 ರೂ ಟಿಕೆಟ್ ಇಲ್ಲ, 2 ಸಾವಿರ ಕೊಟ್ಟು ವಿಶೇಷ ದರ್ಶನ ಪಡೆಯಿರಿ !
ಮೈಸೂರು: ನಗರದ ಚಾಮುಂಡಿ ಬೆಟ್ಟದಲ್ಲಿ ಜುಲೈ 17 ರಿಂದ ಆಷಾಢ ಮಾಸದ ಶುಕ್ರವಾರಗಳ ವಿಶೇಷ ಪೂಜೆ ಆರಂಭವಾಗಲಿದ್ದು, ಶುಕ್ರವಾರದಿಂದ ಭಾನುವಾರದ ತನಕ ಮೂರು ದಿನಗಳ ಕಾಲ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿಷೇಧ ಮಾಡಲಾಗಿದೆ. ಆದರೆ ಬೆಟ್ಟಕ್ಕೆ ಹೋಗಲು ಭಕ್ತರಿಗೆ ವಿಶೇಷ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೇ ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಯ ವಿಶೇಷ ದರ್ಶನ ಪಡೆಯುವುದಕ್ಕೆ ಬರೋಬ್ಬರಿ 2000 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಬುಧವಾರ ಈ ಕುರಿತು ಸಚಿವ ಡಾ. ಯತೀಂದ್ರ…