Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕವಿ ಯಾವುದೇ ಒಂದು ಧರ್ಮವನ್ನು ವೈಭವೀಕರಿಸದೆ ಸಾಹಿತ್ಯ ಕೃಷಿ ಮಾಡಬೇಕು; ಮಡ್ಡೀಕೆರೆ ಗೋಪಾಲ್


ಮೈಸೂರು : ಒಬ್ಬ ಉತ್ತಮ ಕವಿಗೆ ಜಾತಿ, ಧರ್ಮದ, ಭಾಷೆಯ ಗಡಿಗಳು ಇರುವುದಿಲ್ಲ. ಆದ್ದರಿಂದ, ಕವಿ ಯಾವುದೇ ಒಂದು ಧರ್ಮವನ್ನು ವೈಭವೀಕರಿಸದೆ ಸಾಹಿತ್ಯ ಕೃಷಿ ಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು
ಸಿರಿಗನ್ನಡ ವೇದಿಕೆಯ ಮೈಸೂರು ನಗರ ಘಟಕ ಹಾಗೂ ಖುಷಿ ಪ್ರಕಾಶನದ ವತಿಯಿಂದ ಮೈಸೂರಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕವಿ ಆದಿಲ್ ಪಾಷ ಅವರ ‘ನೀ ನನ್ನ ಚೈತ್ರ’, ‘ಹರ್ಷೋತ್ಸವ’ ಹಾಗೂ ‘ಆದಿರಾಗ’ ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇಡೀ ವಿಶ್ವ ಯುದ್ಧ ಭಯದಲ್ಲಿದೆ. ಯುದ್ಧಕಾಗಿ ಅಪಾರ ಹಣ ವ್ಯಯಿಸಲಾಗುತ್ತಿದೆ. ಎಲ್ಲಾ ದೇಶಗಳು ಯುದ್ಧ ಸಾಮಗ್ರಿಗಳನ್ನು ತಯಾರು ಮಾಡಲು ಬಳಸುವ ಹಣದಲ್ಲಿ ವಿಶ್ವದ ಒಂದು ಶತಮಾನದ ಬಡ ಜನರ ಅಗತ್ಯಗಳನ್ನು ಪೂರೈಸಬಹುದು. ವಿನಾಶಕಾರಿಯಾದ ಅಣುಬಾಂಬುಗಳ ತಯಾರಿಕೆಯಿಂದ ಜೀವಕುಲ ನಾಶವಾಗುತ್ತದೆ ಎಂದು ಎಚ್ಚರಿಸಿದರು.
ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಮುಸ್ಲಿಂ ಸಾಹಿತಿಗಳ ಕೊಡುಗೆ ಅಪಾರ ಮತ್ತು ಅನನ್ಯ. ತಮ್ಮ ಸಮುದಾಯದ ಸಂವೇದನೆಗಳ ಜೊತೆಗೆ, ಇತರೆ ಸಮುದಾಯದ ಸಂವೇದನೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಸಿದ್ದಾರೆ. ಕನ್ನಡ ಸಾಹಿತ್ಯದ ಬಹುತ್ವದ ಬೇರುಗಳನ್ನು ಸುಭದ್ರಗೊಳಿಸಿದ್ದಾರೆ. ನಾಡಿನ ಸರ್ವಜನಾಂಗದ ತೋಟದಲ್ಲಿ ವೈಚಾರಿಕತೆ ಮತ್ತು ಸಾಮರಸ್ಯದ ಬೀಜಗಳನ್ನು ಬಿತ್ತುತ್ತಾ ಬಂದಿದ್ದಾರೆ ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಸಾಹಿತ್ಯ ಮತ್ತು ಸಾಂಸ್ಕöÈತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂತೋಷ್ ವಹಿಸಿದ್ದರು. ‘ನೀ ನನ್ನ ಚೈತ್ರ’ ಕವನ ಸಂಕಲನ ಕುರಿತು ಹಿರಿಯ ಕಥೆಗಾರ ಡಾ. ಯಲ್ಲಪ್ಪ ಕೆ.ಕೆ. ಪುರ, ‘ಹರ್ಷೋತ್ಸವ’ ಕವನ ಸಂಕಲನ ಕುರಿತು ಸಾಹಿತಿ ಟಿ. ಸತೀಶ್ ಜವರೇಗೌಡ, ‘ಆದಿರಾಗ’ ಕವನ ಸಂಕಲನ ಕುರಿತು ಕವಯಿತ್ರಿ ಸೌಗಂಧಿಕಾ ಜೋಯಿಸ್ ಮಾತನಾಡಿದರು.
ವೇದಿಕೆಯಲ್ಲಿ ಡಯಟ್ ನ ಹಿರಿಯ ಉಪನ್ಯಾಸಕಿ ಅಲ್ ಹುಸ್ನ, ಕೃತಿಕಾರ ಆದಿಲ್ ಪಾಷ (ಆದೀಶ) ಸಿರಿಗನ್ನಡ ವೇದಿಕೆಯ ನಗರ ಘಟಕ ಗೌರವಾಧ್ಯಕ್ಷ ಬಿ. ಬಾಲಕೃಷ್ಣಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಎಸ್. ರಾಘವೇಂದ್ರ, ಜಂಟಿ ಕಾರ್ಯದರ್ಶಿಗಳಾದ ಮೊಹಮ್ಮದ್ ಹುಮಾಯೂನ್ ಮತ್ತು ಪರಮೇಶ್ ಕೆ. ಉತ್ತನಹಳ್ಳಿ ಉಪಸ್ಥಿತರಿದ್ದರು.